ಪಡುಬಿದ್ರಿ ಬೀಚ್ ಪರಿಸರದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಚತಾ ಕಾರ್ಯಕ್ರಮ
(Padubidri)ಪಡುಬಿದ್ರಿ: ಪಡುಬಿದ್ರಿ ರೋಟರಿ ಕ್ಲಬ್, ಪಡುಬಿದ್ರಿ ಗ್ರಾಮ ಪಂಚಾಯಿತ್, ಎಸ್‌ಬಿಎಸ್ ರೋಟರ‍್ಯಾಕ್ಟ್ ಕ್ಲಬ್ ಕಾರ್ಕಳ ಹಾಗೂ ಕಾರ್ಕಳ ರೋಟರ‍್ಯಾಕ್ಟ್ ಕ್ಲಬ್ ಇದರ ಜಂಟಿ ಸಹಯೋಗದೊಂದಿಗೆ ಗಾಂಧಿ ಜಯಂತಿ ಪ್ರಯುಕ್ತ ಪಡುಬಿದ್ರಿ ಬೀಚ್‌ನಲ್ಲಿ ಬುಧವಾರ ಸ್ವಚ್ಚತಾ ಕಾರ್ಯಕ್ರಮ ಆಯೋಜಿಸಲಾಯಿತು.
ಕಾರ್ಯಕ್ರಮಕ್ಕೆ ರೋಟರಿ ಕ್ಲಬ್ ಅಧ್ಯಕ್ಷೆ ತಸ್ನೀನ್ ಆರ‍್ಹಾ ಚಾಲನೆ ನೀಡಿ, ಸ್ವಚ್ಚತೆಯ ಬಗ್ಗೆ ನಮ್ಮಲ್ಲಿ ಜಾಗೃತಿ ಮೂಡಿದಾಗ ಪರಿಸರ ಸ್ವಚ್ಚವಾಗಿಡಲು ಸಾಧ್ಯ. ಈ ನಿಟ್ಟಿನಲ್ಲಿ ಪ್ರತಿಯೋರ್ವರೂ ಅವರರವರ ಪರಿಸರವನ್ನು ಸ್ವಚ್ಛವಾಗಿಡಬೇಕು ಎಂದು ಕರೆ ನೀಡಿದರು.
ವಿಶೇಷ ಅತಿಥಿಗಳಾಗಿ ನೆದರ್ಲಾಡ್‌ನ ಮೈಕಲ್ ಮತ್ತು ರೋಡ್ಸೆ ವಿಸ್ಸೆರ್ ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸ್ಚಚ್ಚತಾ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಎಸ್‌ಬಿಎಸ್ ಕಾರ್ಕಳ ರೋಟರ‍್ಯಾಕ್ಟ್ ಕ್ಲಬ್ ಅಧ್ಯಕ್ಷೆ ಅಕ್ಷಿತಾ, ಕಾರ್ಯದರ್ಶಿ ರಾಮ್‌ದಾಸ್, ರೋಟರ‍್ಯಾಕ್ಟ್ ಕ್ಲಬ್ ಅಧ್ಯಕ್ಷ ಸುನಿಲ್ ನಾಯಕ್, ಎನ್‌ಎಸ್ ಘಟಕದ ಅನನ್ಯಾ, ಪಡುಬಿದ್ರಿ ರೋಟರಿ ಕ್ಲಬ್ ಕಾರ್ಯದರ್ಶಿ ಹೇಮಲತಾ ಸುವರ್ಣ, ಪೂರ್ವಾಧ್ಯಕ್ಷರಾದ ರಿಯಾಝ್ ಮುದರಂಗಡಿ, ನಿಯಾಝ್, ಗೀತಾ ಅರುಣ್, ಅಬ್ದುಲ್ ಹಮೀದ್, ಸದಸ್ಯರಾದ ಜ್ಯೋತಿ ಮೆನನ್, ಶೋಭಾ, ಪುಷ್ಪಲತಾ, ಪಡುಬಿದ್ರಿ ಎಸ್‌ಎಲ್‌ಆರ್‌ಎಮ್ ಘಟಕದ ಮುಖ್ಯಸ್ಥೆ ಮಹಾದೇವಿ ಭಾಗವಹಿಸಿದ್ದರು.

