• Home  
  • ಪಡುಬಿದ್ರಿ : ಮಹಿಳೆಗೆ ನಕಲಿ ಚಿನ್ನ ನೀಡಿ ಮೋಸ ಗೊಳಿಸಿದ ಪ್ರಕರಣ (Padubidri: Woman cheated by giving fake gold)
- ಅಪರಾಧ

ಪಡುಬಿದ್ರಿ : ಮಹಿಳೆಗೆ ನಕಲಿ ಚಿನ್ನ ನೀಡಿ ಮೋಸ ಗೊಳಿಸಿದ ಪ್ರಕರಣ (Padubidri: Woman cheated by giving fake gold)

Share: ಪಡುಬಿದ್ರಿ : ಮಹಿಳೆಗೆ ನಕಲಿ ಚಿನ್ನ ನೀಡಿ ಮೋಸ ಗೊಳಿಸಿದ ಪ್ರಕರಣ ಓರ್ವ ಮಹಿಳಾ ಆರೋಪಿಸೆರೆ, ಮತ್ತೋರ್ವ ಆರೋಪಿಗಾಗಿ ಶೋಧ (Padubidri) ಪಡುಬಿದ್ರಿ : ಮಹಿಳೆಗೆ ನಕಲಿ ಚಿನ್ನ ನೀಡಿ ಸುಮಾರು 2 ಪವನ್ ತೂಕದ 1.5 ಲಕ್ಷ ಮೌಲ್ಯದ ಬಂಗಾರದ ಆಭರಣಗಳು ಹಾಗೂ ರೂ. 6000 ನಗದು ಪಡೆದು ಪರಾರಿಯಾದ ಪ್ರಕರಣದ ಓರ್ವ ಮಹಿಳಾ ಆರೋಪಿಯನ್ನು ಪೋಲಿಸರು ಬಂಧಿಸಿದ್ದು, ಮತ್ತೋರ್ವ ಆರೋಪಿಗಾಗಿ ಶೋಧ ಮುಂದುವರೆದಿದೆ.   2026ರ ಜ. 13ರಂದು ಮಧ್ಯಾಹ್ನದ ಸಮಯ ಪಡುಬಿದ್ರಿ […]

(Padubidri) ಪಡುಬಿದ್ರಿ : ಮಹಿಳೆಗೆ ನಕಲಿ ಚಿನ್ನ ನೀಡಿ ಸುಮಾರು 2 ಪವನ್ ತೂಕದ 1.5 ಲಕ್ಷ ಮೌಲ್ಯದ ಬಂಗಾರದ ಆಭರಣಗಳು ಹಾಗೂ ರೂ. 6000 ನಗದು ಪಡೆದು ಪರಾರಿಯಾದ ಪ್ರಕರಣದ ಓರ್ವ ಮಹಿಳಾ ಆರೋಪಿಯನ್ನು ಪೋಲಿಸರು ಬಂಧಿಸಿದ್ದು, ಮತ್ತೋರ್ವ ಆರೋಪಿಗಾಗಿ ಶೋಧ ಮುಂದುವರೆದಿದೆ.

  2026ರ ಜ. 13ರಂದು ಮಧ್ಯಾಹ್ನದ ಸಮಯ ಪಡುಬಿದ್ರಿ ಹಳೆ ಅಂಚೆ ಕಚೇರಿ ಬಳಿ ಉ.ಕ. ಮೂಲದ ಬಸ್ಸಮ್ಮ ಎಂಬ ಮಹಿಳೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಅಪರಿಚಿತ ಮಹಿಳೆ ಮತ್ತು ಒಬ್ಬ ಗಂಡಸು ಅವಳನ್ನು ಸಂಪರ್ಕಿಸಿ, 9 ಲಕ್ಷ್ಮಿ ಪೆಂಡೆಂಟ್‌ ಹೊಂದಿದ ಚಿನ್ನದಂತೆ ಕಾಣುವ 6 ಪವನ್ ಚಿನ್ನದ ನಕಲಿ ಸರ ತೋರಿಸಿ ತುರ್ತು ಹಣದ ಅವಶ್ಯಕತೆ ಇದೆ ಎಂದು ನಂಬಿಸಿದ್ದರು. ಇದರಿಂದ ಮೋಸಗೊಂಡ ಬಸ್ಸಮ್ಮ ಅವರು ತಮ್ಮ ಬಳಿ ಇದ್ದ ಸುಮಾರು 2 ಪವನ್ ತೂಕದ ಸುಮಾರು 1.5 ಲಕ್ಷ ಮೌಲ್ಯದ ಬಂಗಾರದ ಆಭರಣಗಳು ಹಾಗು 6000 ರೂ. ನಗದು ನೀಡಿ ಆ ಸರವನ್ನು ಪಡೆದಿದ್ದರು.

  ನಂತರ ಸಮೀಪದ ಚಿನ್ನದ ಅಂಗಡಿಯಲ್ಲಿ ಪರಿಶೀಲಿಸಿದಾಗ ಆ ಸರ ನಕಲಿ ಎಂದು ತಿಳಿದುಬಂದಿದೆ. ಈ ವೇಳೆಗೆ ಆರೋಪಿಗಳು ಪರಾರಿಯಾಗಿದ್ದರು.

  ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದರು.

  ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರು ಜಿಲ್ಲೆಯ ಕಾವ್ಯ ಎಂಬ ಆರೋಪಿಯನ್ನು 2026ರ ಮಾ. 23ರಂದು ಬಂಧಿಸಲಾಗಿದೆ. ಬಂಧಿತರಿಂದ 75,000 ರೂ. ಮೌಲ್ಯದ 7.610 ಗ್ರಾಂ ಚಿನ್ನಾಭರಣ ಹಾಗೂ 6000 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಮತ್ತೊಬ್ಬ ಆರೋಪಿ ದಾವಣಗೆರೆ ಜಿಲ್ಲೆಯ ವೆಂಕಟೇಶ್ ಕುರಿತು ತನಿಖೆ ಮುಂದುವರಿದಿದೆ.

  ಉಡುಪಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹರಿರಾಮ್ ಶಂಕ‌ರ್ ಅವರ ಆದೇಶದಂತೆ ಹಾಗೂ ಮೇಲಧಿಕಾರಿಗಳ ಮಾರ್ಗದರ್ಶನದಲ್ಲಿ ಪಡುಬಿದ್ರಿ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.