• Home  
  • ಕಾಪು : ನಾಡದೋಣಿಗೆ ದೊಡ್ಡ ದೋಣಿ ಡಿಕ್ಕಿ, ಓರ್ವ ಮೀನುಗಾರ ನಾಪತ್ತೆ, ಇನ್ನೋರ್ವನ ರಕ್ಷಣೆ (Kaup: Large boat collides with local boat, one fisherman missing, another rescued)
- ಅಪರಾಧ

ಕಾಪು : ನಾಡದೋಣಿಗೆ ದೊಡ್ಡ ದೋಣಿ ಡಿಕ್ಕಿ, ಓರ್ವ ಮೀನುಗಾರ ನಾಪತ್ತೆ, ಇನ್ನೋರ್ವನ ರಕ್ಷಣೆ (Kaup: Large boat collides with local boat, one fisherman missing, another rescued)

Share: ಕಾಪು : ನಾಡದೋಣಿಗೆ ದೊಡ್ಡ ದೋಣಿ ಡಿಕ್ಕಿ, ಓರ್ವ ಮೀನುಗಾರ ನಾಪತ್ತೆ, ಇನ್ನೋರ್ವನ ರಕ್ಷಣೆ ಅಕ್ರಮ ಪಚ್ಚಾಲೆ (ಅಜಿರ್) ತೆಗೆಯುತ್ತಿದ್ದ ತಮಿಳುನಾಡು ಮೂಲದ ಮೀನುಗಾರರಿಂದ ಈ ಕೃತ್ಯ (Kaup) ಕಾಪು: ಬುಧವಾರ ಬೆಳಗ್ಗಿನ ಜಾವ ಕಾಪು ಕಡಲ ಕಿನಾರೆಯಲ್ಲಿ ಅಕ್ರಮ ಪಚ್ಚಾಲೆ (ಅಜಿರ್) ತೆಗೆಯುತ್ತಿದ್ದ ತಮಿಳುನಾಡು ಮೂಲದ ಮೀನುಗಾರರನ್ನು ತಡೆದ ಸ್ಥಳೀಯ ಮೀನುಗಾರರ ಸಣ್ಣ ದೋಣಿಯೊಂದಕ್ಕೆ ತಮಿಳುನಾಡು ಮೂಲದ ಬೃಹತ್‌ ಗಾತ್ರದ ದೋಣಿಯೊಂದು ಡಿಕ್ಕಿ ಹೊಡೆದಿದ್ದು, ಸಣ್ಣ ದೋಣಿ   ಮುಗುಚಿ ಬಿದ್ದಿದ್ದು, ದೋಣಿಯಲ್ಲಿದ್ದ ಇಬ್ಬರ ಪೈಕಿ […]

(Kaup) ಕಾಪು: ಬುಧವಾರ ಬೆಳಗ್ಗಿನ ಜಾವ ಕಾಪು ಕಡಲ ಕಿನಾರೆಯಲ್ಲಿ ಅಕ್ರಮ ಪಚ್ಚಾಲೆ (ಅಜಿರ್) ತೆಗೆಯುತ್ತಿದ್ದ ತಮಿಳುನಾಡು ಮೂಲದ ಮೀನುಗಾರರನ್ನು ತಡೆದ ಸ್ಥಳೀಯ ಮೀನುಗಾರರ ಸಣ್ಣ ದೋಣಿಯೊಂದಕ್ಕೆ ತಮಿಳುನಾಡು ಮೂಲದ ಬೃಹತ್‌ ಗಾತ್ರದ ದೋಣಿಯೊಂದು ಡಿಕ್ಕಿ ಹೊಡೆದಿದ್ದು, ಸಣ್ಣ ದೋಣಿ   ಮುಗುಚಿ ಬಿದ್ದಿದ್ದು, ದೋಣಿಯಲ್ಲಿದ್ದ ಇಬ್ಬರ ಪೈಕಿ   ಒಬ್ಬನನ್ನು ರಕ್ಷಿಸಿ, ಇನ್ನೋರ್ವ ಮೀನುಗಾರ ನಾಪತ್ತೆಯಾಗಿದ್ದಾನೆ.

   ಕಳೆದ ಕೆಲವು ದಿನಗಳಿಂದ ಅಕ್ರಮವಾಗಿ ಅಜೀರು ಮೀಗಾರಿಕೆ ಮಾಡುತಿದ್ದ ತಮಿಳುನಾಡು ಮೂಲದ ಮೀನುಗಾರರ ವಿರುದ್ಧ ಮೀನುಗರಿಕಾ ಇಲಾಖೆ ಮತ್ತು ಕರಾವಳಿ ಪಡೆ ಇಲಾಖೆಯವರಿಗೆ ಲಿಖಿತ ದೂರು ನೀಡಲಾಗಿತ್ತು. ಇಲಾಖೆಯವರು ಸ್ಪಂದಿಸದ ಕಾರಣ, ಸಮುದ್ರದಲ್ಲಿ 1 ಕಿಮೀ ದೂರದಲ್ಲಿ ಪಚ್ಚಾಲೆ (ಅಜಿರು) ತೆಗೆಯುತ್ತಿದ್ದ ತಮಿಳ್ನಾಡು ಮೂಲದ ಮೀನುಗಾರರಿಗೆ, ಸ್ಥಳೀಯ ಮೀನುಗಾರರು ಸಣ್ಣ ದೋಣಿಯಲ್ಲಿ ಮನವಿ ಮಾಡಲು ತೆರಳಿದ್ದ ಸ್ಥಳೀಯ ಇಬ್ಬರು ಮೀನುಗಾರರ ದೋಣಿಗೆ ತಮಿಳುನಾಡು ಮೂಲದ ಮೀನುಗಾರರ ದೋಣಿ ಡಿಕ್ಕಿ ಹೊಡೆದಿದೆ. ಸ್ಥಳೀಯ ಮೀನುಗಾರರ ಸಣ್ಣ ದೋಣಿ ಮುಗುಚಿ ಬಿದ್ದು ಇಬ್ಬರು ಮೀನುಗಾರರು ನೀರಿಗೆ ಬಿದ್ದಿದ್ದು, ಓರ್ವನನ್ನು ರಕ್ಷಿಸಿ, ಇನ್ನೋರ್ವ ಮೀನುಗಾರ ನಾಪತ್ತೆ ಯಾಗಿದ್ದಾನೆ.

 ಡಿಕ್ಕಿ ಹೊಡೆದ ತಮಿಳುನಾಡು ಮೂಲದ ಮೀನುಗಾರರು ಯಾರಿಗೂ ಸಿಗದೇ 8 ಸ್ಪೀಡ್ ಬೋಟ್ ಗಲ್ಲಿ ಮಲ್ಪೆ ಯತ್ತ ಪಲಾಯನ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.