• Home  
  • ಪಡುಬಿದ್ರಿ : ಮಾ. 27-29: ಆಹಾರ ಮತ್ತು ಸ್ವದೇಶಿ ಉತ್ಪನ್ನಗಳ ಮಾರಾಟ ಮೇಳ (Padubidri: Mar. 27-29: Food and local products sales fair)
- ಸಂಘ, ಸಂಸ್ಥೆಗಳು - ಸಾಂಸ್ಕೃತಿಕ

ಪಡುಬಿದ್ರಿ : ಮಾ. 27-29: ಆಹಾರ ಮತ್ತು ಸ್ವದೇಶಿ ಉತ್ಪನ್ನಗಳ ಮಾರಾಟ ಮೇಳ (Padubidri: Mar. 27-29: Food and local products sales fair)

Share: ಪಡುಬಿದ್ರಿ : ಮಾ. 27-29: ಆಹಾರ ಮತ್ತು ಸ್ವದೇಶಿ ಉತ್ಪನ್ನಗಳ ಮಾರಾಟ ಮೇಳ   80 ಕ್ಕೂ ಅಧಿಕ ಮಳಿಗೆಗಳು ನೋಂದಾಯಿಸಿಕೊಂಡಿದ್ದು, ಬೆಳಗ್ಗೆ 10ರಿಂದ ರಾತ್ರಿ ೯ರವರೆಗೆ ತೆರೆಯಲಿದೆ. (Padubidri) ಪಡುಬಿದ್ರಿ: ಪಡುಬಿದ್ರಿಯ ಬಂಟರ ಭವನದಲ್ಲಿ ಮಾರ್ಚ್ 27-29 ಮೂರು ದಿನಗಳ ಕಾಲ ಬೃಹತ್ ಆಹಾರ ಮತ್ತು ಸ್ವದೇಶಿ ಉತ್ಪನ್ನಗಳ ಮಾರಾಟ ಮೇಳ ಆಯೋಜಿಸಲಾಗಿದೆ    ಈ ಬಗ್ಗೆ ಬುಧವಾರ ಕಾಪು ಪತ್ರಿಕಾಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಬೆನಕ ಇವೆಂಟ್ಸ್‌ ಆಡಳಿತ ನಿರ್ದೇಶಕ ಗಣೇಶ್ ಶೆಟ್ಟಿ ಬಾರ್ಕೂರು […]

(Padubidri) ಪಡುಬಿದ್ರಿ: ಪಡುಬಿದ್ರಿಯ ಬಂಟರ ಭವನದಲ್ಲಿ ಮಾರ್ಚ್ 27-29 ಮೂರು ದಿನಗಳ ಕಾಲ ಬೃಹತ್ ಆಹಾರ ಮತ್ತು ಸ್ವದೇಶಿ ಉತ್ಪನ್ನಗಳ ಮಾರಾಟ ಮೇಳ ಆಯೋಜಿಸಲಾಗಿದೆ

   ಈ ಬಗ್ಗೆ ಬುಧವಾರ ಕಾಪು ಪತ್ರಿಕಾಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಬೆನಕ ಇವೆಂಟ್ಸ್‌ ಆಡಳಿತ ನಿರ್ದೇಶಕ ಗಣೇಶ್ ಶೆಟ್ಟಿ ಬಾರ್ಕೂರು ಮಾಹಿತಿ ನೀಡಿದರು.

  ರೋಟರಿ ಕ್ಲಬ್ ಪಡುಬಿದ್ರಿ, ಓಂಕಾರ ಕಾಸ್ಟೋಮ್ಸ್ ಮತ್ತು ಕಲಾ ಸಂಗಮ ಪಡುಬಿದ್ರಿ, ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ ಕರ್ನಾಟಕ ಮತ್ತು ಬೆನಕ ಇವೆಂಟ್ಸ್ ಕಾರ್ಯಕ್ರಮವನ್ನು ಪ್ರಸ್ತುತಪಡಿಸುತ್ತಿದೆ.

   ಈ ಮೇಳದಲ್ಲಿ ವಿವಿಧ ಬಗೆಯ  80 ಸ್ಟಾಲ್‌ಗಳಲ್ಲಿ ಸ್ವದೇಶಿ ಉತ್ಪನ್ನಗಳು  ಮತ್ತು ಅಹಾರ ಮಾರಾಟ  ಹಾಗೂ  ಹಲಸು ಮತ್ತು ವಿವಿಧ ಬಗೆಯ ಹಣ್ಣುಗಳ ಮಾರಾಟ  ಮತ್ತು ಪ್ರದರ್ಶನ ನಡೆಯಲಿದೆ. ಸ್ವದೇಶಿ ಉತ್ಪನ್ನಗಳನ್ನು ಪ್ರಚುರಪಡಿಸುವ ನಿಟ್ಟಿನಲ್ಲಿ ಮತ್ತು ಜನರಲ್ಲಿ ಜಾಗೃತಿ ಮೂಡಿಸಲು ಮೇಳವನ್ನು ಆಯೋಜಿಸಲಾಗಿದೆ ಎಂದರು.

   ಮೇಳದಲ್ಲಿ ಇಳಕಲ್ ಹಾಗೂ ಖಾದಿ ಸೀರೆಗಳು, ಅಲಂಕಾರಿಕ ಹಾಗೂ ಗೃಹಬಳಕೆಯ ವಸ್ತುಗಳು, ಬಿದಿರಿನ ಉತ್ಪನ್ನಗಳು, ದೀಪಾಲಂಕೃತ ಮಣ್ಣಿನ ಮಡಕೆಗಳು ಸಹಿತ ವಿವಿಧ ಬಗೆಯ ಉತ್ಪನ್ನಗಳು ಮಾವು, ಹಲಸು ಅಲ್ಲದೆ ವಿವಿಧ ಬಗೆಯ ಗಿಡಗಳು, ತರಕಾರಿ ಬೀಜಗಳು ಇರಲಿದೆ.

  ಈಗಾಗಲೇ 80ಕ್ಕೂ ಅಧಿಕ ಮಳಿಗೆಗಳು ನೋಂದಾಯಿಸಿಕೊಂಡಿದ್ದು, ಮಾರ್ಚ್ 27-29 ಮೂರು ದಿನಗಳ ಕಾಲವೂ ಬೆಳಗ್ಗೆ 10ರಿಂದ ರಾತ್ರಿ 9 ರವರೆಗೆ ತೆರೆಯಲಿದೆ.

  ಮಾರ್ಚ್ 27 ರಂದು ಸಂಜೆ ಮೇಳದ ಉದ್ಘಾಟನಾ ಸಮಾರಂಭ ನಡೆಯಲಿದೆ. ಬಂಟರ ಸಂಘದ ಮಾಜಿ ಅಧ್ಯಕ್ಷ ನವೀನ್ ಚಂದ್ರ ಜೆ ಶೆಟ್ಟಿ ಉದ್ಘಾಟಿಸಲಿದ್ದಾರೆ. ಬಂಟರ ಸಂಘದ ಅಧ್ಯಕ್ಷ ಡಾ. ದೇವಿ ಪ್ರಸಾದ್ ಶೆಟ್ಟಿ ಬೆಳಪು, ರೋಟರಿ ಸಹಾಯಕ ಗವರ್ನರ್ ವಿಘ್ನೇಶ್ ಶೆಣೈ ಭಾಗವಹಿಸಲಿದ್ದಾರೆ.  

  ಕಾರ್ಯಕ್ರಮ ನಿರ್ದೇಶಕ ಸಂತೋಷ ಪಡುಬಿದ್ರಿ ಮಾತನಾಡಿ, ಸಾಂಸ್ಕೃತಿಕ ಕಾರ್ಯಕ್ರಮ ಅಂಗವಾಗಿ ಮಾರ್ಚ್ 28 ರಂದು ಸಂಜೆ 6 ಗಂಟೆಗೆ ಓಂಕಾರ ಕಲಾ ಸಂಗಮ ಪಡುಬಿದ್ರಿ ತಂಡದವರಿಂದ ಕಲಾ ವೈಭವ ಕಾರ್ಯಕ್ರಮ ನಡೆಯಲಿದೆ. ಮಾರ್ಚ್  29ರಂದು ಮಧ್ಯಾಹ್ನ 1:30 ಗಂಟೆಯಿಂದ ಉಡುಪಿ ಜಿಲ್ಲಾ ಮಟ್ಟದ  ವಾಯ್ಸ್ ಆಫ್ ಪಡುಬಿದ್ರಿ 2026 ಕರೋಕೆ ಗಾಯನ ಸ್ಪರ್ಧೆ ನಡೆಯಲಿದೆ ಎಂದರು.

  ಪಡುಬಿದ್ರಿ ರೋಟರಿ ಕ್ಲಬ್ ಅಧ್ಯಕ್ಷ ಸುನಿಲ್ ಕುಮಾರ್, ಪಡುಬಿದ್ರಿ ಓಂಕಾರ ಕಾಸ್ಟೋಮ್ಸ್ ಮತ್ತು ಕಲಾ ಸಂಗಮದ ಗೀತಾ ಅರುಣ್, ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿಯ ರಾಜ್ಯಾಧ್ಯಕ್ಷ ರಚನ್ ಸಾಲ್ಯಾನ್ ಹೆಜಮಾಡಿ, ಪಡುಬಿದ್ರಿ  ರೋಟರಿ ಕ್ಲಬ್ ನಿಕಟ ಪೂರ್ವ ಕಾರ್ಯದರ್ಶಿ ಹೇಮಲತಾ ಸುವರ್ಣ ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.