ಪಡುಬಿದ್ರಿ: ಮುರುಡಿ ಜಗನ್ನಾಥ ರಾವ್ ನಿಧನ.
(Padubidri) ಪಡುಬಿದ್ರಿ : ಮುರುಡಿಕೇರಿ ನಿವಾಸಿ, ಹಿರಿಯರಾದ ಮುರುಡಿ ಜಗನ್ನಾಥ ರಾವ್ (82) ಹೃದಯಘಾತದಿಂದ ಆ. 6ರಂದು ಮಣಿಪಾಲದ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಸುಮಾರು 30ವರ್ಷಗಳಿಗೂ ಅಧಿಕ ಕಾಲ ಸರಕಾರಿ ಪ್ರೌಢಶಾಲಾ ಅಧ್ಯಾಪಕರಾಗಿ ಪಡುಬಿದ್ರಿ ಎರ್ಮಾಳು, ಪೊಲಿಪು, ಮೂಲ್ಕಿ ಮುಂತಾದೆಡೆಗಳಲ್ಲಿ ಇವರು ಸೇವೆ ಸಲ್ಲಿಸಿದ್ದರು.
ಪಡುಬಿದ್ರಿಯ ಗಜಾನನ ಯಕ್ಷಗಾನ ಕಲಾ ಮಿತ್ರ ಮಂಡಳಿಯ ಅಧ್ಯಕ್ಷರಾಗಿ, ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ನವೋದಯ ಮಿತ್ರ ಮಂಡಳಿಯ ಅಧ್ಯಕ್ಷರಾಗಿಯೂ , ಪಡುಬಿದ್ರಿ ಬ್ರಾಹ್ಮಣ ಯುವಕ ವೃಂದದ ಗೌರವ ಸಲಹೆಗಾರರಾಗಿಯೂ, ಮುರುಡಿ ಬ್ರಹ್ಮಸ್ಥಾನದ ಅಭಿವೃದ್ಧಿ ಮತ್ತು ಢಕ್ಕೆಬಲಿ ಸೇವೆಗಳಲ್ಲಿ ವಿಶೇಷ ಮುತುವರ್ಜಿ ಹಾಗೂ ಮುಂದಾಳುತ್ವವನ್ನು ತಾವೇ ವಹಿಸಿಕೊಂಡಿದ್ದರು.
ಇವರನ್ನು ವಿವಿಧ ಸಂಘ ಸಂಸ್ಥೆಗಳು ಗೌರವಿಸಿ ಸಮ್ಮಾನಿಸಿವೆ.
ಪಡುಬಿದ್ರಿಯ ವನದುರ್ಗಾ ಟ್ರಸ್ಟ್ ಅಧ್ಯಕ್ಷ ಕೊರ್ನಾಯ ಪದ್ಮನಾಭ ರಾವ್ ಹಾಗೂ ಕಾರ್ಯದರ್ಶಿ ವೈ. ಎನ್. ರಾಮಚಂದ್ರ ರಾವ್ ಅವರು ಜಗನ್ನಾಥ ರಾವ್ ನಿಧನಕ್ಕೆ ತಮ್ಮ ಸಂತಾಪವನ್ನು ಸೂಚಿಸಿದ್ದಾರೆ.
ಪಡುಬಿದ್ರಿ: ಮುರುಡಿ ಜಗನ್ನಾಥ ರಾವ್ ಪಿ. ಆರ್ ನಿಧನ.
ಧಾರ್ಮಿಕ, ಸಾಮಾಜಿಕ ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಅಪಾರ ಅನುಭವಿ

