• Home  
  • ಪಡುಬಿದ್ರಿ : ಶಿವಾಯ ಫೌಂಡೇಶನ್ ವತಿಯಿಂದ ವಿದ್ಯಾ ಪ್ರೇರಣಾ-2026 (Padubidri: ‘Vidya Prerana-2026’ by Shivaya Foundation)
- ಸಂಘ, ಸಂಸ್ಥೆಗಳು - ಸನ್ಮಾನ, ಅಭಿನಂದನೆ - ಸಹಾಯ ಹಸ್ತ

ಪಡುಬಿದ್ರಿ : ಶಿವಾಯ ಫೌಂಡೇಶನ್ ವತಿಯಿಂದ ವಿದ್ಯಾ ಪ್ರೇರಣಾ-2026 (Padubidri: ‘Vidya Prerana-2026’ by Shivaya Foundation)

Share: ಪಡುಬಿದ್ರಿ : ಶಿವಾಯ ಫೌಂಡೇಶನ್ ವತಿಯಿಂದ ವಿದ್ಯಾ ಪ್ರೇರಣಾ-2026   ಶೈಕ್ಷಣಿಕ ಸಹಾಯ, ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ವಿತರಣೆ (Padubidri) ಪಡುಬಿದ್ರಿ : ವಿದ್ಯೆಯಿಂದ ಬುದ್ಧಿ, ವಿನಯ ಪಡೆದು ಅದು ಬದುಕು ಅಮೃತಮಯವಾಗಿಸಬೇಕೇ  ಹೊರತು, ಅಹಂಕಾರ ಬಂದರೆ ಸರ್ವನಾಶದ ಸೂಚಕ. ಇಂದು ಶಿಕ್ಷಣವು ಸೇವೆಯಾಗದೆ ವೃತ್ತಿಯಾಗುತ್ತಿದೆ. ಮಾನವ ಸೇವೆಯೇ ಮಾಧವ ಸೇವೆಯಾಗಬೇಕು. ದುಡಿದ ಸ್ವಲ್ಪ ಪಾಲನ್ನು ಸಮಾಜಕ್ಕೆ ನೀಡುತ್ತಿರುವ ಶಿವಾಯ ಫೌಂಡೇಶನ್ ತಂಡದ ಕಾರ್ಯ ಶ್ಲಾಘನೀಯ ಎಂದು ಒಡಿಯೂರು ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ […]

(Padubidri) ಪಡುಬಿದ್ರಿ : ವಿದ್ಯೆಯಿಂದ ಬುದ್ಧಿ, ವಿನಯ ಪಡೆದು ಅದು ಬದುಕು ಅಮೃತಮಯವಾಗಿಸಬೇಕೇ  ಹೊರತು, ಅಹಂಕಾರ ಬಂದರೆ ಸರ್ವನಾಶದ ಸೂಚಕ. ಇಂದು ಶಿಕ್ಷಣವು ಸೇವೆಯಾಗದೆ ವೃತ್ತಿಯಾಗುತ್ತಿದೆ. ಮಾನವ ಸೇವೆಯೇ ಮಾಧವ ಸೇವೆಯಾಗಬೇಕು. ದುಡಿದ ಸ್ವಲ್ಪ ಪಾಲನ್ನು ಸಮಾಜಕ್ಕೆ ನೀಡುತ್ತಿರುವ ಶಿವಾಯ ಫೌಂಡೇಶನ್ ತಂಡದ ಕಾರ್ಯ ಶ್ಲಾಘನೀಯ ಎಂದು ಒಡಿಯೂರು ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

  ಅವರು ಪಡುಬಿದರಿ ಬಂಟರ ಭವನದಲ್ಲಿ ಶಿವಾಯ ಫೌಂಡೇಶನ್ ವತಿಯಿಂದ ಶೈಕ್ಷಣಿಕ ಸಹಾಯ, ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿ ವೇತನಾ ವಿತರಣಾ ಕಾರ್ಯಕ್ರಮ ವಿದ್ಯಾ ಪ್ರೇರಣಾ-2026 ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

  ಬಂಟ್ಸ್ ವೆಲ್ಫೇರ್ ಟ್ರಸ್ಟ್ ಬಂಟರ ಸಂಘ ಪಡುಬಿದ್ರಿ ಅಧ್ಯಕ್ಷ ಡಾ. ವೈ.ಎನ್.ಶೆಟ್ಟಿ ಉದ್ಘಾಟಿಸಿ, ಮಾತನಾಡಿ, ಶಿವಾಯ ಫೌಂಡೇಶನ್ ನಿಂದಾಗುತ್ತಿರುವ ದು:ಖಿತರ ಸೇವೆ ಮಾಡುವ ಕಾಯಕ, ಪ್ರತಿಭೆಗಳಿಗೆ ಗೌರವಾರ್ಪಣೆ ನಿಜವಾಗಿಯೂ ಮೆಚ್ಚುವ ಕಾರ್ಯ. ಬದುಕಿನ ಸಾರ್ಥಕತೆಯಲ್ಲಿ ದುಡ್ಡು, ಯಶಸ್ಸು, ಪುಣ್ಯದ ಜೊತೆಗೆ ದಾನವೂ ಅನಿವಾರ್ಯ ಎಂದರು.

  ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶೈಕ್ಷಣಿಕ ಸಹಾಯ, ವೈದ್ಯಕೀಯ ವೆಚ್ಚ ಮತ್ತು ಸುಮಾರು 150 ವಿದ್ಯಾರ್ಥಿಗಳಿಗೆ 7.5 ಲಕ್ಷ ರೂ. ವಿದ್ಯಾರ್ಥಿ ವೇತನಾ ವಿತರಣೆಯು ಜರಗಿತು.

ಸನ್ಮಾನ : ನಿವೃತ್ತ ಶಿಕ್ಷಣಾಧಿಕಾರಿ ಬಿ.ವಿಠ್ಠಲ ಶೆಟ್ಟಿ ಮತ್ತು ಪಡುಬಿದ್ರಿಯ ಉದ್ಯಮಿ ಸಂತೋಷ್ ಕುಮಾರ್ ಶೆಟ್ಟಿ ದಂಪತಿಯನ್ನು, ಶಿವಾಯ ಫೌಂಡೇಶನ್ ಗೌರವಾಧ್ಯಕ್ಷ ನವೀನ್ ಚಂದ್ರ ಜೆ. ಶೆಟ್ಟಿ ದಂಪತಿಯನ್ನು ಸನ್ಮಾನಿಸಲಾಯಿತು.

  ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು, ಯಥಾರ್ಥ್ ಸಂಸ್ಥಾಪಕ ಈಶ್ವರ್ ಶೆಟ್ಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉಡುಪಿ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಶನ್ ಅಧ್ಯಕ್ಷ ಹರಿಪ್ರಸಾದ್ ರೈ, ಮಾಜಿ ಗ್ರಾ.ಪಂ. ಸದಸ್ಯ ನವೀನ್ ಎನ್. ಶೆಟ್ಟಿ, ಸದಾನಂದ ಪೂಜಾರಿ, ಗಾಯತ್ರಿ ಪ್ರಭು ಮಾತನಾಡಿದರು.

   ಸಭಾಧ್ಯಕ್ಷತೆಯನ್ನು ಶಿವಾಯ ಫೌಂಡೇಶನ್ ಗೌರವಾಧ್ಯಕ್ಷ ನವೀನ್ ಚಂದ್ರ ಜೆ. ಶೆಟ್ಟಿ ವಹಿಸಿ ಮಾತನಾಡಿ, ಏಕಮನಸ್ಥಿತರಾಗಿ ಒಂದೇ ಕುಟುಂಬದವರಂತೆ ಸಮಾಜದ ಏಳಿಗೆಗಾಗಿ ದುಡಿಯುವ ಸಂಸ್ಥೆ ಶಿವಾಯ ಫೌಂಡೇಶನ್. ಮಕ್ಕಳಿಗೆ ಮನೆಯಲ್ಲಿ ಸಂಸ್ಕಾರಯುತ ವಾತಾವರಣ ಕಲ್ಪಿಸುವುದು ಅನಿವಾರ್ಯವಾಗಿದೆ ಎಂದರು.

  ವೇದಿಕೆಯಲ್ಲಿ ಉಡುಪಿ ಜಿಲ್ಲಾ ಅಥ್ಲೆಟಿಕ್ಸ್ ಅಧ್ಯಕ್ಷ ಹರಿಪ್ರಸಾದ್ ರೈ, ಕೆರಮ ಮಾಗಂದಡಿ ವಿದ್ಯಾಧರ ಶೆಟ್ಟಿ, ಉದ್ಯಮಿ ಬಾಲಚಂದ್ರ ಶೆಟ್ಟಿ ಪುಚ್ಚೊಟ್ಟು ಬೀಡು ಎರ್ಮಾಳು, ಪ್ರೇಮಾನಂದ ಶೆಟ್ಟಿ, ಅನಿಲ್ ಶೆಟ್ಟಿ, ಹರೀಶ್ ಶೆಟ್ಟಿ, ಸಂತೋಷ್ ಕುಮಾರ್ ಶೆಟ್ಟಿ, ರಾಯೇಶ್ ಪೈ, ವಿಠ್ಠಲ ಶೆಟ್ಟಿ ಉಪಸ್ಥಿತರಿದ್ದರು.

  ಪ್ರಕಾಶ್ ಪಾವಂಜೆ ಪ್ರಾರ್ಥಿಸಿದರು. ಶಿವಾಯ ಫೌಂಡೇಶನ್ ಅಧ್ಯಕ್ಷ ಪ್ರಶಾಂತ್ ಶೆಟ್ಟಿ ಪಲಿಮಾರು ಸ್ವಾಗತಿಸಿದರು. ಡಾ. ಸ್ವರ್ಣ ಶೆಟ್ಟಿ ಮತ್ತು ಉಪನ್ಯಾಸಕ ದೇವಿಪ್ರಸಾದ್ ಬೆಳ್ಳಿಬೆಟ್ಟು ಕಾರ್ಯಕ್ರಮ ನಿರೂಪಿಸಿದರು.  ಪ್ರಶಾಂತ್ ಶೆಟ್ಟಿ ಪಂಜ ವಂದಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.