ಅಥಣಿ : ಮಾಜಿ ಶಾಸಕ ಸರ್ಕಾರದ ವಿರುದ್ಧ ಶಹಜಾನ್ ಡೊಂಗರಗಾಂವ ಆಕ್ರೋಶ
ತುರ್ತು ಬರ ಪರಿಹಾರ, ರೈತರ ಸಾಲ ಮನ್ನಾ, ಕಬ್ಬಿಗೆ ಬೆಲೆ ನಿಗದಿ, ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹ
(Atthani) ಅಥಣಿ : ಅಥಣಿಯ ಮಾಜಿ ಶಾಸಕ ಶಹಜಾನ್ ಡೊಂಗರಗಾಂವ್ ರವರುತುರ್ತು ಬರ ಪರಿಹಾರ, ರೈತರ ಸಾಲ ಮನ್ನಾ, ಕಬ್ಬಿಗೆ ಬೆಲೆ ನಿಗದಿ, ಸಮರ್ಪಕ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಖಂಡಿಸಿ ಸರಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಅಥಣಿ ತಾಲೂಕು ಜನತಾದಳದ ವತಿಯಿಂದ ಸಿದ್ದೇಶ್ವರ ದೇವಸ್ಥಾನದಿಂದ ತಹಶೀಲ್ದಾರ್ ಕಾರ್ಯಾಲಯದ ವರೆಗೆ ಸಾಗಿ ಮನವಿ ಸಲ್ಲಿಸಲಾಯಿತು.
ಭೀಕರ ಬರಗಾಲದಿಂದ ತತ್ತರಿಸಿರುವ ಅಥಣಿ ತಾಲೂಕಿನ ಗ್ರಾಮಗಳಲ್ಲಿ ತುರ್ತು ಬರ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಹಾಗೂ ಬರಪಿಡಿತ ಪ್ರದೇಶದಲ್ಲಿ ರೈತರಿಗೆ ವಿಶೇಷ ಪ್ಯಾಕೇಜ್ ಘೋಷಿಸ ಬೇಕು. ಬರಗಾಲ ಪೀಡಿತ ರೈತರ ಸಾಲ ಮನ್ನಾ ಮಾಡ ಬೇಕು. ಈ ವರ್ಷ ಬೆಳೆದ ಕಬ್ಬಿಗೆ ಪ್ರತಿ ಟನ್ನಿಗೆ ರೂ. 5500 ಬೆಲೆ ನಿಗದಿಪಡಿಸ ಬೇಕು. ವಿದ್ಯುತ್ ಲೋಡ್ ಶೆಡ್ಡಿಂಗ್ ಮಾಡದೇ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡಬೇಕೆಂದು ಬೇಡಿಕೆ ಸಲ್ಲಿಸಿದ್ದಾರೆ.
ಅಥಣಿ ತಾಲೂಕಿನ ಜನತಾದಳ ರೈತರ ಪರವಾಗಿ ಈ ಮನವಿಯನ್ನು ಸರ್ಕಾರಕ್ಕೆ ಸಲ್ಲಿಸುತ್ತಿದ್ದು, ರಾಜ್ಯ ಸರ್ಕಾರದ ಗಂಭೀರ ನಿರ್ಲಕ್ಷದಿಂದ ಬರ ಪೀಡಿತ ಗ್ರಾಮಗಳಲ್ಲಿ ಕೃಷಿ ಬೇಸಾಯ ಸಂಪೂರ್ಣವಾಗಿ ಹಾನಿಗೊಂಡಿದೆ. ಜನ ಜಾನುವಾರುಗಳಿಗೆ ಕುಡಿಯುವ ನೀರಿನ ತೀವ್ರ ಕೊರತೆ, ಹಸುಗಳಿಗೆ ಮೇವು ಕೊರತೆ, ಬಿತ್ತನೆ ವೈಫಲ್ಯ, ಬೆಳೆ ಹಾನಿ, ಕೊಳವೆಬಾವಿಗಳ ಮತ್ತು ಉದ್ಯೋಗ ಅಲಭ್ಯ ಭೂಗರ್ಭ ಜಲ ಕುಸಿತ ಇಂತಹ ಹಲವಾರು ಕಾರಣಗಳಿಂದ ಬರಪೀಡಿತ ಪ್ರದೇಶಗಳಿಂದ ಜನರು ನಗರ ಪ್ರದೇಶಗಳಿಗೆ ಮತ್ತು ನೆರೆ ರಾಜ್ಯಗಳಿಗೆ ಉದ್ಯೋಗ ಅರಸಿ ವಲಸೆ ಹೋಗುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಪ್ರತಿಭಟನೆಯಲ್ಲಿ ಜೆಡಿಎಸ್ ಪಕ್ಷದ ಕಾರ್ಯಕರ್ತರಾದ ಅರುಣ್ ಹಟ್ಟಿಯವರು ಸಿದ್ದೇಶ್ವರ ದೇವಸ್ಥಾನದಿಂದ ತಹಶೀಲ್ದಾರ್ ಕಾರ್ಯಾಲಯದ ವರೆಗೆ ಬರಗಾಲಲ್ಲಿ ನಡೆದು ಮನವಿ ಸಲ್ಲಿಸಿದಾರೆ.
ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷ ದುಂಡಪ್ಪ ನಿಂಗನೂರ್, ಶಬ್ಬೀರ್ ಗೌಡ ಪಾಟೀಲ್, ಮುತ್ತಣ್ಣ ಸಂತಿ, ರಾಜು ಡೌರಿ, ಜಕ್ಕಪ್ಪನ್ನ ದರಿ ಗೌಡರ್, ಮುಡಿಸಿ ಕಾಕಾ, ವಿದ್ಯಾಧರ್ ನಾಡಗೌಡ, ಮಹಾಂತೇಶ ಅವಟಿ, ಮಲ್ಲಿಕಾರ್ಜುನ್ ಗುಂಜಿಗಾವಿ, ರೈತ ಮುಖಂಡರಾದ ಹಳ್ಳೂರ್, ಅಸಕರಲ್ಲಿ ಡೊಂಗಾರಗಾಂವ್, ಇಂತಿಯಾಗಿ ಹಿಪ್ಪರಗಿ ಸಹಿರ ನೂರಾರು ಜೆಡಿಎಸ್ ಪಕ್ಷದ ಕಾರ್ಯಕರ್ತರು ಅಭಿಮಾನಿಗಳು ಉಪಸ್ಥಿತರಿದ್ದರು.
ವರದಿ : ಮಹೇಶ್ ಶರ್ಮಾ

