• Home  
  • ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ: ಮಹಾರಥೋತ್ಸವಕ್ಕೆ ಚಾಲನೆ (Padubidri Sri Mahalingeshwara Mahaganapati Temple: Maharathotsava begins)
- ಧಾರ್ಮಿಕ

ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ: ಮಹಾರಥೋತ್ಸವಕ್ಕೆ ಚಾಲನೆ (Padubidri Sri Mahalingeshwara Mahaganapati Temple: Maharathotsava begins)

Share: ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ: ಮಹಾರಥೋತ್ಸವಕ್ಕೆ ಚಾಲನೆ ವರ್ಷಾವಧಿ ಮಹಾರಥೋತ್ಸವದ ಪ್ರಯುಕ್ತ  ಧ್ವಜಾರೋಹಣ (Padubidri) ಪಡುಬಿದ್ರಿ: ಪುರಾಣ ಪ್ರಸಿದ್ಧ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾ ಗಣಪತಿ ದೇವಸ್ಥಾನದ ವರ್ಷಾವಧಿ ಮಹಾರಥೋತ್ಸವಕ್ಕೆ ಶ್ರೀ ದೇವರ ನಂದಿ ಧ್ವಜಾರೋಹಣದ ಮೂಲಕ ಮಂಗಳವಾರ ಚಾಲನೆ ನೀಡಲಾಯಿತು.    ಅಂಕುರಾರೋಪಣೆಯೊಂದಿಗೆ ಸೋಮವಾರದಂದು ವಿಧಿ ವಿಧಾನ ಗಳು ಆರಂಭಗೊಂಡಿದ್ದು, ಮಂಗಳವಾರ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವರ ಸನ್ನಿಧಾನದಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ತಂತ್ರಿಗಳು ನೆರವೇರಿಸಿದರು. ದೇವರ ಬಲಿಮೂರ್ತಿಗೆ ಪೂಜೆ ಸಲ್ಲಿಸಿ ದಿಕ್ಷಾಲ ಬಲಿಯ ಅನಂತರ […]

(Padubidri) ಪಡುಬಿದ್ರಿ: ಪುರಾಣ ಪ್ರಸಿದ್ಧ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾ ಗಣಪತಿ ದೇವಸ್ಥಾನದ ವರ್ಷಾವಧಿ ಮಹಾರಥೋತ್ಸವಕ್ಕೆ ಶ್ರೀ ದೇವರ ನಂದಿ ಧ್ವಜಾರೋಹಣದ ಮೂಲಕ ಮಂಗಳವಾರ ಚಾಲನೆ ನೀಡಲಾಯಿತು.

   ಅಂಕುರಾರೋಪಣೆಯೊಂದಿಗೆ ಸೋಮವಾರದಂದು ವಿಧಿ ವಿಧಾನ ಗಳು ಆರಂಭಗೊಂಡಿದ್ದು, ಮಂಗಳವಾರ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವರ ಸನ್ನಿಧಾನದಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ತಂತ್ರಿಗಳು ನೆರವೇರಿಸಿದರು.

ದೇವರ ಬಲಿಮೂರ್ತಿಗೆ ಪೂಜೆ ಸಲ್ಲಿಸಿ ದಿಕ್ಷಾಲ ಬಲಿಯ ಅನಂತರ ನಂದಿ ಧ್ವಜಾರೋಹಣವನ್ನು ನಡೆಸಲಾಯಿತು.

  ದೇವಸ್ಥಾನದ ಆನುವಂಶಿಕ ಮೊಕ್ತೇಸರರಾದ ಪಡುಬಿದ್ರಿ ಬೀಡು ರತ್ನಾಕರ ರಾಜ ಅರಸು ಕಿನ್ಯಕ್ಕ ಬಲ್ಲಾಳರು ಮತ್ತು  ಪಡುಬಿದ್ರಿ ಪೇಟೆಮನೆ ಭವಾನಿಶಂಕರ ಹೆಗ್ಡೆ, ಕೊರ್ನಾಯ ಶ್ರೀಪತಿ ರಾವ್, ಕಂಬಕಟ್ಟ ಶಿವರಾಜ್ ತಂತ್ರಿ, ಕೊರ್ನಾಯ ಪದ್ಮನಾಭರಾವ್, ನಟರಾಜ ರಾವ್ ಪಿ. ಎಸ್., ರಘುಪತಿ ಆಚಾರ್ಯ, ನಂದಕುಮಾರ್ ಆಚಾರ್ಯ, ಬ್ರಹ್ಮಸ್ಥಾನದ ಪಾತ್ರಿಗಳಾದ ಹರಿನಾರಾಯಣ ರಾವ್, ಸುಬ್ರಹ್ಮಣ್ಯ ರಾವ್, ವೈ. ಎನ್. ರಾಮಚಂದ್ರ ರಾವ್, ವೈ. ಸುರೇಶ್ ರಾವ್, ವೈ. ಸುಧೀರ್ ಕುಮಾರ್, ನವೀನ್‌ಚಂದ್ರ ಜೆ. ಶೆಟ್ಟಿ ನವೀನ್ ಎನ್. ಶೆಟ್ಟಿ ಪ್ರೇಮನಾಥ್ ಶೆಟ್ಟಿ, ರಮಾಕಾಂತ ರಾವ್, ಮಾಧವ ಶೆಟ್ಟಿ, ಅನಿಲ್ ಕುಮಾರ್ ಶೆಟ್ಟಿ ಸುರೇಶ್ ಪಡುಬಿದ್ರಿ, ಜಯ ಶೆಟ್ಟಿ ಪದ್ರ, ಶಶಿಕಾಂತ್ ಪಡುಬಿದ್ರಿ, ಗಣೇಶ್ ಎನ್. ಕೋಟ್ಯಾನ್, ಭರತ್ ದೇವಾಡಿಗ, ಮುರಳೀನಾಥ ಶೆಟ್ಟಿ ಸುಧಾಕರ ರಾವ್ ಮತ್ತಿತರರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.