ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯಿಂದ ಪಡುಬಿದ್ರಿ ಠಾಣೆಗೆ ಕಂಪ್ಯೂಟರ್ ಹಸ್ತಾಂತರ
ಸೊಸೈಟಿ ಅಧ್ಯಕ್ಷ ವೈ. ಸುಧೀರ್ ಕುಮಾರ್ ರವರಿಂದ ಠಾಣಾಧಿಕಾರಿ ಸಕ್ತಿವೇಲುರವರಿಗೆ ಹಸ್ತಾಂತರ
(Padubidri) ಪಡುಬಿದ್ರಿ: 72 ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಮಂಗಳವಾರ ಬೆಳಿಗ್ಗೆ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ವತಿಯಿಂದ ಪಡುಬಿದ್ರಿ ಆರಕ್ಷಕ ಠಾಣೆಗೆ ಕಂಪ್ಯೂಟರ್ ಹಸ್ತಾಂತರ ಕಾರ್ಯಕ್ರಮ ನೆರವೇರಿತು.
ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ಅಧ್ಯಕ್ಷರಾದ ವೈ. ಸುಧೀರ್ ಕುಮಾರ್ ರವರು ಪಡುಬಿದ್ರಿ ಠಾಣಾಧಿಕಾರಿ ಸಕ್ತಿವೇಲು ಅವರಿಗೆ ಕಂಪ್ಯೂಟರ್ ಹಸ್ತಾಂತರಿಸಿದರು.
ಈ ಸಂಧರ್ಭದಲ್ಲಿ ಕಾಪು ತಾಲೂಕು ಮಾಜಿ ಉಪಾಧ್ಯಕ್ಷರಾದ ಯುಸಿ ಶೇಕಬ್ಬ, ಸೊಸೈಟಿಯ ನಿರ್ದೇಶಕರಾದ ರಸೂಲ್ ವೈಜಿ, ರಾಜಾರಾಮ ರಾವ್, ಮಾಧವ ಆಚಾರ್ಯ, ಜಿತೇಂಡ್ರ ಪುರ್ಟಾಡೊ, ಕೃಷ್ಣ ಬಂಗೇರ ಮತ್ತು ಸೊಸೈಟಿಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ನಿಶ್ಮಿತಾ ಪಿ ಎಚ್ ಉಪಸ್ಥಿತರಿದ್ದರು.

