• Home  
  • ಪಡುಬೆಳ್ಳೆ : ವಿವಿಧ ಸಂಘಟನೆಗಳಿಂದ ಉಚಿತ ವೈದ್ಯಕೀಯ ತಪಾಸಣಾ ಶಿಬಿರ (Padubelle: Free medical check-up camp by various organizations)
- health - social service

ಪಡುಬೆಳ್ಳೆ : ವಿವಿಧ ಸಂಘಟನೆಗಳಿಂದ ಉಚಿತ ವೈದ್ಯಕೀಯ ತಪಾಸಣಾ ಶಿಬಿರ (Padubelle: Free medical check-up camp by various organizations)

Share:  ಪಡುಬೆಳ್ಳೆ : ವಿವಿಧ ಸಂಘಟನೆಗಳಿಂದ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಶ್ರೀನಿವಾಸ ಆಸ್ಪತ್ರೆ ಮುಕ್ಕ, ಸುರತ್ಕಲ್ ಇವರಿಂದ ವೈದ್ಯಕೀಯ ತಪಾಸಣೆ (Padu Belle) ಪಡುಬೆಳ್ಳೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿಸಿ ಟ್ರಸ್ಟ್ ಪಡುಬೆಳ್ಳೆ ಒಕ್ಕೂಟ ಕಾಪು ತಾಲೂಕು, ಗೆಳೆಯರ ಬಳಗ (ರಿ) ಮಧ್ವ ನಗರ ಪಡುಬೆಳ್ಳೆ ಸುವರ್ಣ ಮಹೋತ್ಸವ ಸಮಿತಿ ಮತ್ತು ರೋಟರಿ ಕ್ಲಬ್ ಉಡುಪಿ ಇವರ ಸಹಭಾಗಿತ್ವದಲ್ಲಿ ಸುರತ್ಕಲ್‌ ಶ್ರೀನಿವಾಸ ಆಸ್ಪತ್ರೆ ಮುಕ್ಕ, ಸುರತ್ಕಲ್, ಇವರ ಆಶಯದಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ […]

ಶ್ರೀನಿವಾಸ ಆಸ್ಪತ್ರೆ ಮುಕ್ಕ, ಸುರತ್ಕಲ್ ಇವರಿಂದ ವೈದ್ಯಕೀಯ ತಪಾಸಣೆ

(Padu Belle) ಪಡುಬೆಳ್ಳೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿಸಿ ಟ್ರಸ್ಟ್ ಪಡುಬೆಳ್ಳೆ ಒಕ್ಕೂಟ ಕಾಪು ತಾಲೂಕು, ಗೆಳೆಯರ ಬಳಗ (ರಿ) ಮಧ್ವ ನಗರ ಪಡುಬೆಳ್ಳೆ ಸುವರ್ಣ ಮಹೋತ್ಸವ ಸಮಿತಿ ಮತ್ತು ರೋಟರಿ ಕ್ಲಬ್ ಉಡುಪಿ ಇವರ ಸಹಭಾಗಿತ್ವದಲ್ಲಿ ಸುರತ್ಕಲ್‌ ಶ್ರೀನಿವಾಸ ಆಸ್ಪತ್ರೆ ಮುಕ್ಕ, ಸುರತ್ಕಲ್, ಇವರ ಆಶಯದಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ನಡೆಯಿತು.

 ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಹರೀಶ್ ಶೆಟ್ಟಿ   ವಹಿಸಿದ್ದರು.

 ಮುಖ್ಯ ಅತಿಥಿಯಾಗಿ ಕಾಪು ತಾಲೂಕು ಯೋಜನಾಧಿಕಾರಿ ಶ್ರೀಮತಿ ಮಮತಾ ಶೆಟ್ಟಿ, ಕಾಪು ತಾಲೂಕು ಯುವ ಸಬಲೀಕರಣ ಅಧಿಕಾರಿ ರಿತೇಶ್ ಶೆಟ್ಟಿ ಸೂಡ, ರೋಟರಿ ಕ್ಲಬ್ ಉಡುಪಿ ಅಧ್ಯಕ್ಷ ಸೂರಜ್, ಮುಕ್ಕ ಶ್ರೀನಿವಾಸ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ರಿಶಬ್ ಶೆಟ್ಟಿ, ಗೆಳೆಯರ ಬಳಗದ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ಸುವರ್ಣ ಮಹೋತ್ಸವ ಸಮಿತಿ ಕಾರ್ಯದರ್ಶಿ ಅತುಲ್ ಕುಮಾರ್ ಶೆಟ್ಟಿ, ಗೆಳೆಯರ ಬಳಗದ ಕೋಶಾಧಿಕಾರಿ ರವಿಕಾಂತ್ ಸುವರ್ಣ, ಹಿರಿಯ ಸದಸ್ಯರಾದ ಡಾ. ವಿನ್ಸೆಂಟ್ ಆಳ್ವಾ, ಎವರೆಸ್ಟ್ ಆಳ್ವ, ಭಾಸ್ಕರ್ ಪೂಜಾರಿ ಮತ್ತು ಬಳಗದ ಹಿರಿಯ ಮತ್ತು ಕಿರಿಯ ಸದಸ್ಯರು, ಮುಕ್ಕ ಶ್ರೀನಿವಾಸ ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. 

    ರಾಘವೇಂದ್ರ ಶೆಟ್ಟಿ ಸ್ವಾಗತಿಸಿದರು. ಗೆಳೆಯರ ಬಳಗದ ಕಾರ್ಯದರ್ಶಿ ಕೃಷ್ಣ ಸಾಲಿಯನ್ ನಿರೂಪಿಸಿದರು.

 ಅತುಲ್ ಕುಮಾರ್ ಶೆಟ್ಟಿ ಅವರು ವಂದಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.