• Home  
  •   ಪ್ರತಿಭಾವಂತ ಟೆನ್ನಿಸ್ ಬಾಲ್ ಕ್ರಿಕೆಟಿಗ ವಿನ್ಸೆಂಟ್ ರವಿ ಫೆರ್ನಾಂಡೀಸ್ ನಿಧನ (Talented tennis ball cricketer Vincent Ravi Fernandes passes away)
- ನಿಧನ

  ಪ್ರತಿಭಾವಂತ ಟೆನ್ನಿಸ್ ಬಾಲ್ ಕ್ರಿಕೆಟಿಗ ವಿನ್ಸೆಂಟ್ ರವಿ ಫೆರ್ನಾಂಡೀಸ್ ನಿಧನ (Talented tennis ball cricketer Vincent Ravi Fernandes passes away)

Share:   ಪ್ರತಿಭಾವಂತ ಟೆನ್ನಿಸ್ ಬಾಲ್ ಕ್ರಿಕೆಟಿಗ ವಿನ್ಸೆಂಟ್ ರವಿ ಫೆರ್ನಾಂಡೀಸ್ ನಿಧನ ಟೆನ್ನಿಸ್‌ ಕ್ರಿಕೆಟ್‌ನಲ್ಲಿ ಹಲವು ದಾಖಲೆಗಳ ಸರದಾರನಾಗಿ ಮಿಂಚಿದ್ದ ವಿನ್ಸಿ (Padubidri) ಪಡುಬಿದ್ರಿ: ರಾಜ್ಯ, ರಾಷ್ಟ್ರ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್‌ನಲ್ಲಿ ಹಲವು ದಾಖಲೆಗಳ ಸರದಾರನಾಗಿ ಮಿಂಚಿದ್ದ ಪಡುಬಿದ್ರಿ ಬೇಂಗ್ರೆ ನಿವಾಸಿ ವಿನ್ಸಿ ಯಾನೆ ವಿನ್ಸೆಂಟ್ ರವಿ ಫೆರ್ನಾಂಡೀಸ್(48) ಅಲ್ಪ ಕಾಲದ ಅಸೌಖ್ಯದಿಂದ ಭಾನುವಾರ ಉಡುಪಿ ಖಾಸಗಿ ಅಸ್ಪತ್ರೆಯಲ್ಲಿ ನಿಧನರಾದರು.     ಅವರಿಗೆ ತಾಯಿ, ಪತ್ನಿ, ಪುತ್ರಿ ಇದ್ದಾರೆ.     ಪಡುಬಿದ್ರಿಯ ಪ್ರತಿಷ್ಠಿತ ಕ್ರಿಕೆಟ್ ತಂಡಗಳಾದ […]

(Padubidri) ಪಡುಬಿದ್ರಿ: ರಾಜ್ಯ, ರಾಷ್ಟ್ರ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್‌ನಲ್ಲಿ ಹಲವು ದಾಖಲೆಗಳ ಸರದಾರನಾಗಿ ಮಿಂಚಿದ್ದ ಪಡುಬಿದ್ರಿ ಬೇಂಗ್ರೆ ನಿವಾಸಿ ವಿನ್ಸಿ ಯಾನೆ ವಿನ್ಸೆಂಟ್ ರವಿ ಫೆರ್ನಾಂಡೀಸ್(48) ಅಲ್ಪ ಕಾಲದ ಅಸೌಖ್ಯದಿಂದ ಭಾನುವಾರ ಉಡುಪಿ ಖಾಸಗಿ ಅಸ್ಪತ್ರೆಯಲ್ಲಿ ನಿಧನರಾದರು.

    ಅವರಿಗೆ ತಾಯಿ, ಪತ್ನಿ, ಪುತ್ರಿ ಇದ್ದಾರೆ.

    ಪಡುಬಿದ್ರಿಯ ಪ್ರತಿಷ್ಠಿತ ಕ್ರಿಕೆಟ್ ತಂಡಗಳಾದ ಪಡುಬಿದ್ರಿ ಕ್ರಿಕೆಟರ್ಸ್‌ ಮತ್ತು ಫ್ರೆಂಡ್ಸ್ ಪಡುಬಿದ್ರಿ ತಂಡದ ಸವ್ಯಸಾಚಿ ಕ್ರಿಕೆಟಿಗರಾದ ವಿನ್ಸಿಯವರು ಮೂಲ್ಕಿಯಲ್ಲಿ ನಡೆದ ರಾಜ್ಯ ಮಟ್ಟದ ಮಾನಿಷ್ ಟ್ರೋಫಿ ಕ್ರಿಕೆಟ್ ಪಂದ್ಯಾಟದಲ್ಲಿ 16 ಎಸೆತಗಳಲ್ಲಿ 50 ರನ್ ಗಳಿಸಿದ ದಾಖಲೆ ಈವರೆಗೂ ಯಾರಿಂದಲೂ ಅಳಿಸಲಾಗಿಲ್ಲ.

    1990 -2015 ರ ಸಮಯ ಟೆನಿಸ್ ಬಾಲ್ ಕ್ರಿಕೆಟ್‌ನಲ್ಲಿ ನೂರಾರು ಪಂದ್ಯಾಟಗಳಲ್ಲಿ ಪ್ರಥಮ ಎಸೆತಕ್ಕೆ ಸಿಕ್ಸರ್ ಸಿಡಿಸುವ ಸಾಮರ್ಥ್ಯದ ವಿನ್ಸಿಯವರು ರಾಜ್ಯ, ರಾಷ್ಟ್ರ  ಮಟ್ಟದ ಕ್ರಿಕೆಟ್ ಟೂರ್ನಿಗಳಲ್ಲಿ ನೂರಾರು ಸರಣಿ ಶ್ರೇಷ್ಠ,  ಪಂದ್ಯಶ್ರೇಷ್ಟ ಪ್ರಶಸ್ತಿ ಪಡೆದ ದಾಖಲೆ ಹೊಂದಿದ್ದರು. ಅತ್ಯುತ್ತಮ ಬೌಲರ್ ಆಗಿ ಅವರು ಸಾಧನೆಗೈದಿದ್ದರು.  

    ಫ್ರೆಂಡ್ಸ್ ಪಡುಬಿದ್ರಿ ತಂಡದ ಉಪನಾಯಕನಾಗಿಯೂ ಅವರು ಸೇವೆ ಸಲ್ಲಿಸಿದ್ದರು. ಜೇಸಿಐ ಪಡುಬಿದ್ರಿಯ ಸದಸ್ಯರಾಗಿಯೂ ಗುರುತಿಸಿಕೊಂಡಿದ್ದರು. ರಾಷ್ಟ್ರದಲ್ಲಿಯೇ ಪ್ರಥಮ ಬಾರಿಗೆ 1990 ರಲ್ಲಿ ಪಡುಬಿದ್ರಿ ಕ್ರಿಕೆಟರ್ಸ್‌ ಆಯೋಜನೆಯಲ್ಲಿ ಪಡುಬಿದ್ರಿಯಲ್ಲಿ ನಡೆದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ ಆಯೋಜಕರ ಸದಸ್ಯರಾಗಿದ್ದರು.

   ವಿದೇಶದಲ್ಲಿ ಉದ್ಯೋಗದಲ್ಲಿದ್ದ ಅವರು ಬಳಿಕ ಪಡುಬಿದ್ರಿಯಲ್ಲಿ ಪಡುಬಿದ್ರಿ ಸ್ಪೋರ್ಟ್ಸ್ ಹೌಸ್ ಸ್ಥಾಪಿಸಿ ರಾಜ್ಯದಾದ್ಯಂತ ಕ್ರೀಡಾ ಪರಿಕರಗಳ ವಿತರಕರಾಗಿ ಗುರುತಿಸಿಕೊಂಡಿದ್ದರು. ಅವರದೇ ಹೆಸರಿನ ವಿನ್ಸಿ ಬ್ಯಾಟ್‌  ಬೆಂಗಳೂರು, ಚೆನೈ, ದಾವಣಗೆರೆ ಸಹಿತ ರಾಜ್ಯದಾದ್ಯಂತ ಅಪಾರ ಬೇಡಿಕೆ ಪಡೆದಿತ್ತು.

   ಉಚ್ಚಿಲ ಸೇಕ್ರೆಡ್ ಹಾರ್ಟ್ ಚರ್ಚ್‌ ನಲ್ಲಿ ಭಾನುವಾರ ಸಂಜೆ ಅವರ ಅಂತ್ಯಕ್ರಿಯೆ ನಡೆಯಿತು.

   ಪಡುಬಿದ್ರಿ ಕ್ರಿಕೆಟರ್ಸ್‌ ಮುಖ್ಯಸ್ಥ ವೈ. ಸುಧೀರ್ ಕುಮಾರ್, ಫ್ರೆಂಡ್ಸ್ ಪಡುಬಿದ್ರಿ ನಾಯಕ ಶರತ್ ಶೆಟ್ಟಿ, ನವೀನ್‌ಚಂದ್ರ ಜೆ. ಶೆಟ್ಟಿ ಸಹಿತ ಹಲವು ಗಣ್ಯರು ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.