• Home  
  • ಪ್ರವಾದಿಯವರ ಜೀವನ, ಸಂದೇಶ ಎಲ್ಲರಿಗೂ ಮಾದರಿ: ಸಿ.ಎ. ಮುಹಮ್ಮದ್ ಇಸ್ಹಾಕ್ (The Prophet’s life and message are an example for everyone: C.A. Muhammad Ishaq)
- ಧಾರ್ಮಿಕ - ಸೌಹಾರ್ಧ

ಪ್ರವಾದಿಯವರ ಜೀವನ, ಸಂದೇಶ ಎಲ್ಲರಿಗೂ ಮಾದರಿ: ಸಿ.ಎ. ಮುಹಮ್ಮದ್ ಇಸ್ಹಾಕ್ (The Prophet’s life and message are an example for everyone: C.A. Muhammad Ishaq)

Share: ಪ್ರವಾದಿಯವರ ಜೀವನ, ಸಂದೇಶ ಎಲ್ಲರಿಗೂ ಮಾದರಿ: ಸಿ.ಎ. ಮುಹಮ್ಮದ್ ಇಸ್ಹಾಕ್ ಪಡುಬಿದ್ರಿಯಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಕಾಪು ಆಯೋಜನೆಯಲ್ಲಿ ಸೀರತ್ ಅಭಿಯಾನ (Padubidri) ಪಡುಬಿದ್ರಿ: ಸಮಾಜದಲ್ಲಿ ಹಿಂದೆ ವ್ಯಾಪಕವಾಗಿದ್ದ ಅನಿಷ್ಟ ಪದ್ಧತಿಗಳನ್ನು ನಿರ್ಮೂಲಗೊಳಿಸುವ ನಿಟ್ಟಿನಲ್ಲಿ ಪ್ರವಾದಿ ಮುಹಮ್ಮದ್ ಅವರು ಸೃಷ್ಟಿಕರ್ತನ ಆದೇಶದಂತೆ ನಿರಂತರವಾಗಿ ಶ್ರಮಿಸಿದರು. ಅವರ ಪ್ರಯತ್ನದ ಫಲವಾಗಿ ಅರಬ್ ಸಮಾಜದಲ್ಲಿ ಮಹತ್ತರ ಸಾಮಾಜಿಕ ಹಾಗೂ ನೈತಿಕ ಪರಿವರ್ತನೆ ಉಂಟಾಯಿತು. ಅವರ ಜೀವನ ಹಾಗೂ ಸಂದೇಶ ಎಲ್ಲ ಕಾಲಕ್ಕೂ ಎಲ್ಲರಿಗೂ ಮಾದರಿಯಾಗಿದ್ದು, ಅನುಸರಣೀಯವಾಗಿದೆ ಎಂದು ಜಮಾಅತೆ […]

(Padubidri) ಪಡುಬಿದ್ರಿ: ಸಮಾಜದಲ್ಲಿ ಹಿಂದೆ ವ್ಯಾಪಕವಾಗಿದ್ದ ಅನಿಷ್ಟ ಪದ್ಧತಿಗಳನ್ನು ನಿರ್ಮೂಲಗೊಳಿಸುವ ನಿಟ್ಟಿನಲ್ಲಿ ಪ್ರವಾದಿ ಮುಹಮ್ಮದ್ ಅವರು ಸೃಷ್ಟಿಕರ್ತನ ಆದೇಶದಂತೆ ನಿರಂತರವಾಗಿ ಶ್ರಮಿಸಿದರು. ಅವರ ಪ್ರಯತ್ನದ ಫಲವಾಗಿ ಅರಬ್ ಸಮಾಜದಲ್ಲಿ ಮಹತ್ತರ ಸಾಮಾಜಿಕ ಹಾಗೂ ನೈತಿಕ ಪರಿವರ್ತನೆ ಉಂಟಾಯಿತು. ಅವರ ಜೀವನ ಹಾಗೂ ಸಂದೇಶ ಎಲ್ಲ ಕಾಲಕ್ಕೂ ಎಲ್ಲರಿಗೂ ಮಾದರಿಯಾಗಿದ್ದು, ಅನುಸರಣೀಯವಾಗಿದೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ಮಂಗಳೂರು ನಗರ ಶಾಖೆಯ ಅಧ್ಯಕ್ಷ ಸಿ.ಎ. ಮುಹಮ್ಮದ್ ಇಸ್ಹಾಕ್ ಪುತ್ತೂರು ಹೇಳಿದರು.

   ಅವರು ಪಡುಬಿದ್ರಿಯ ವ್ಯವಸಾಯಿಕ ಸಹಕಾರಿ ಸಂಘದ ಸಭಾಂಗಣದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಕಾಪು ಶಾಖೆಯ ವತಿಯಿಂದ ಆಯೋಜಿಸಿದ್ದ ‘ಕ್ರಾಂತಿಯ ಜ್ಯೋತಿ ಪ್ರವಾದಿ ಮುಹಮ್ಮದ್ (ಸ)’ ಸೀರತ್ ಅಭಿಯಾನದ ಪ್ರಯುಕ್ತ ನಡೆದ ವಿಚಾರ ವಿನಿಮಯ ಕಾರ್ಯಕ್ರಮದಲ್ಲಿ ಮಾತನಾಡಿದರು.

  ಪಡುಬಿದ್ರಿ ವ್ಯವಸಾಯಿಕ ಸಹಕಾರಿ ಸಂಘದ ಅಧ್ಯಕ್ಷ ವೈ. ಸುಧೀರ್ ಕುಮಾರ್ ಮಾತನಾಡಿ, ಇಂದು ಸಮಾಜದಲ್ಲಿ ಜನರಲ್ಲಿ ದ್ವೇಷ ಭಾವನೆಯನ್ನು ಮೂಡಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಪ್ರೀತಿ, ಸಹಬಾಳ್ವೆ, ಸಹೋದರತ್ವ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವ ಅಗತ್ಯವಿದೆ ಎಂದು ಹೇಳಿದರು.

  ಸಾಹಿತಿ ಹಾಗೂ ಗ್ರಂಥಕರ್ತ ಯೋಗೇಶ್ ಮಾಸ್ಟರ್ ರಚಿಸಿರುವ ಮಾನವ ಮನಸ್ಸಿನ ಕೃಷಿಕ ಮನದೊಡೆಯ ಪ್ರವಾದಿ ಮುಹಮ್ಮದ್ (ಸ) ಕೃತಿಯನ್ನು ವೈ. ಸುಧೀರ್ ಕುಮಾರ್ ಬಿಡುಗಡೆಗೊಳಿಸಿದರು.

  ವಾರ್ತಾಭಾರತಿ ದಿನಪತ್ರಿಕೆಯ ಪ್ರಧಾನ ಸಂಪಾದಕ ಅಬ್ದುಸ್ಸಲಾಂ ಪುತ್ತಿಗೆ ರಚಿಸಿರುವ ಸಮಗ್ರ ಕ್ರಾಂತಿಯ ಜ್ಯೋತಿ ಬೆಳಗಿದ ಪೈಗಂಬರ್ ಮುಹಮ್ಮದ್ (ಸ) ಕೃತಿಯನ್ನು ಬುಡನ್ ಸಾಹೇಬ್ ಬಿಡುಗಡೆಗೊಳಿಸಿದರು.

   ಜಮಾಅತೆ ಇಸ್ಲಾಮಿ ಹಿಂದ್ ಮಂಗಳೂರು ವಲಯ ಸಂಚಾಲಕ ಸಯೀದ್ ಇಸ್ಮಾಯಿಲ್ ಮಾತನಾಡಿದರು.

  ವಿಚಾರ ವಿನಿಮಯ ಕಾರ್ಯಕ್ರಮದಲ್ಲಿ ಸಭಿಕರು ಸಕ್ರಿಯವಾಗಿ ಭಾಗವಹಿಸಿ ವಿವಿಧ ವಿಷಯಗಳ ಕುರಿತು ತಮ್ಮ ಸಂಶಯಗಳನ್ನು ನಿವಾರಿಸಿಕೊಂಡರು.   ಕಾಪು ಶಾಖೆಯ ಅಧ್ಯಕ್ಷ ಅನ್ವರ್ ಅಲಿ ಸ್ವಾಗತಿಸಿದರು. ಮುಹಮ್ಮದ್ ಅಲಿ ವಂದಿಸಿದರು. ಮುಹಮ್ಮದ್ ಇಕ್ಬಾಲ್ ಸಾಹೇಬ್ ಕಾರ್ಯಕ್ರಮ ನಿರೂಪಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.