• Home  
  • ಪ್ರಾಸ್ತಾವಿತ ಕಂಚಿನಡ್ಕ ಟೋಲಿಗೆ ತಾತ್ಕಾಲಿಕ ತಡೆಯ ಆದೇಶ (Temporary Restraining order on proposed Kanchinaadka Tollgate
- PROBLEMS

ಪ್ರಾಸ್ತಾವಿತ ಕಂಚಿನಡ್ಕ ಟೋಲಿಗೆ ತಾತ್ಕಾಲಿಕ ತಡೆಯ ಆದೇಶ (Temporary Restraining order on proposed Kanchinaadka Tollgate

Share: ಪ್ರಾಸ್ತಾವಿತ ಕಂಚಿನಡ್ಕ ಟೋಲಿಗೆ ತಾತ್ಕಾಲಿಕ ತಡೆಯ ಆದೇಶ ಪಡುಬಿದ್ರಿ: ಮಾಜಿ ಸಚಿವ ವಿನಯಕುಮಾರ್‌ ಸೊರಕೆ ನೇತೃತ್ವದಲ್ಲಿ ಕಂಚನಡ್ಕದಲ್ಲಿ ಟೋಲ್ ಗೇಟ್ ರದ್ದು ಮಾಡಬೇಕೆಂದು ಆಗ್ರಹಿಸಿ ಕಳೆದ ಬುಧವಾರ ಪ್ರತಿಭಟನಾ ಸಭೆ ನಡೆಸಿ, ಶುಕ್ರವಾರ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿಯವರನ್ನು ಕಾಂಗ್ರೆಸ್‌ ನಿಯೋಗ ಬೆಂಗಳೂರಿನಲ್ಲಿ  ಭೇಟಿಯಾಗಿ ಸ್ಥಳೀಯ ಸಮಸ್ಯೆಗಳ ಬಗ್ಗೆ ವಿವರಿಸಿ ತಿಳಿಸಲಾಗಿತ್ತು. ಆಪ್ರಯುಕ್ತ ಮಾನ್ಯ ಸಚಿವರು ಕಂಚಿನಡ್ಕ ಟೋಲ್‌ಗೇಟ್‌ ತಾತ್ಕಾಲಿಕ ರದ್ಧರತಿಯ ಆದೇಶ ಹೊರಡಿಸಿದ್ದಾರೆ.  ಆದೇಶದಲ್ಲಿ, ಪಡುಬಿದ್ರಿ- ಬೆಳ್ಳಣ್ಣು-ಕಾರ್ಕಳ ರಾಜ್ಯ ಹೆದ್ದಾರಿಯ ಕಂಚಿನಡ್ಕ ಪ್ರದೇಶದಲ್ಲಿ ವಂತಹ […]

ಪ್ರಾಸ್ತಾವಿತ ಕಂಚಿನಡ್ಕ ಟೋಲಿಗೆ ತಾತ್ಕಾಲಿಕ ತಡೆಯ ಆದೇಶ

ಪಡುಬಿದ್ರಿ: ಮಾಜಿ ಸಚಿವ ವಿನಯಕುಮಾರ್‌ ಸೊರಕೆ ನೇತೃತ್ವದಲ್ಲಿ ಕಂಚನಡ್ಕದಲ್ಲಿ ಟೋಲ್ ಗೇಟ್ ರದ್ದು ಮಾಡಬೇಕೆಂದು ಆಗ್ರಹಿಸಿ ಕಳೆದ ಬುಧವಾರ ಪ್ರತಿಭಟನಾ ಸಭೆ ನಡೆಸಿ, ಶುಕ್ರವಾರ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿಯವರನ್ನು ಕಾಂಗ್ರೆಸ್‌ ನಿಯೋಗ ಬೆಂಗಳೂರಿನಲ್ಲಿ  ಭೇಟಿಯಾಗಿ ಸ್ಥಳೀಯ ಸಮಸ್ಯೆಗಳ ಬಗ್ಗೆ ವಿವರಿಸಿ ತಿಳಿಸಲಾಗಿತ್ತು. ಆಪ್ರಯುಕ್ತ ಮಾನ್ಯ ಸಚಿವರು ಕಂಚಿನಡ್ಕ ಟೋಲ್‌ಗೇಟ್‌ ತಾತ್ಕಾಲಿಕ ರದ್ಧರತಿಯ ಆದೇಶ ಹೊರಡಿಸಿದ್ದಾರೆ.

 ಆದೇಶದಲ್ಲಿ, ಪಡುಬಿದ್ರಿ- ಬೆಳ್ಳಣ್ಣು-ಕಾರ್ಕಳ ರಾಜ್ಯ ಹೆದ್ದಾರಿಯ ಕಂಚಿನಡ್ಕ ಪ್ರದೇಶದಲ್ಲಿ ವಂತಹ ಟೋಲ್‌ಗೇಟ್ ಉದ್ದೇಶಿಸಿರುವಂತಹ  ಸುಂಕ ವಸೂಲಾತಿ ಕೇಂದ್ರದಿಂದ ಉದ್ಭವಿಸಿರುವಂತಹ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು. ಕಂಚಿನಡ್ಕ ಪ್ರದೇಶವು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಹಾಗೂ ವಾಹನ ದಟ್ಟಣೆ ಇರುವ ರಸ್ತೆಯನ್ನು ಹೊಂದಿದ್ದು, ಈವರೆಗೂ ಡಿವೈಡರ್‌ಗಳ ನಿರ್ಮಾಣವಾಗಲಿ, ಸರ್ವಿಸ್ ರಸ್ತೆ, ಶೌಚಾಲಯ ನಿರ್ಮಾಣ, ವಿಶ್ರಾಂತಿ ಗೃಹವಾಗಲಿ ನಿರ್ಮಾಣವಾಗಿರುವುದಿಲ್ಲ.

 ಮುಂದುವರೆದಂತೆ, ಈಗಾಗಲೇ ಪಡುಬಿದ್ರಿ ಜಂಕ್ಷನ್‌ನಿಂದ ರಾಜ್ಯ ಹೆದ್ದಾರಿ-66 ರಲ್ಲಿನ ಪಡುಬಿದ್ರಿ ಜಂಕ್ಷನ್‌ನಿಂದ ಮಂಗಳೂರು ಕಡೆಗೆ 5 ಕಿ.ಮೀ. ನಲ್ಲಿರುವ ಹೆಜಮಾಡಿ ಬಳಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಟೋಲ್ ನಿರ್ಮಿಸಿ ಶುಲ್ಕ ಸಂಗ್ರಹಣೆ ಮಾಡಲಾಗುತ್ತಿದ್ದು, ಉದ್ದೇಶಿತ ಕಂಚಿನಡ್ಕ ಪ್ರದೇಶವು ಕೇವಲ 7.50 ಕಿ.ಮೀ. ದೂರದಲ್ಲಿರುವುದರಿಂದ, ಈ ಟೋಲ್ ಪ್ಲಾಜಾ ನಿರ್ಮಾಣ ಕಾರ್ಯವು ಆತುರದ ನಿರ್ಧಾರವಾಗಿರುವುದಲ್ಲದೇ, ಪ್ರತಿನಿತ್ಯ ಈ ರಸ್ತೆಯನ್ನೆ ಅವಲಿಂಬಿಸಿರುವ, ಸದರಿ ರಸ್ತೆಯಲ್ಲಿ ಓಡಾಡುವಂತಹ ಸುತ್ತಮುತ್ತಲಿನ ಗ್ರಾಮಸ್ಥರು, ವಿದ್ಯಾರ್ಥಿಗಳು, ಸಣ್ಣ ವ್ಯಾಪಾರಸ್ಥರು, ಕಾರ್ಮಿಕರು, ಕ್ಯಾಬ್ ಮತ್ತು ಆಟೋ ಚಾಲಕರುಗಳು ಎರಡು ಬಾರಿ ಶುಲ್ಕವನ್ನು ಭರಿಸಬೇಕಾಗುತ್ತದೆ. ಇದರಿಂದ ಆರ್ಥಿಕವಾಗಿ ಸದರಿಯವರುಗಳು ತೊಂದರೆಗೊಳಗಾಗುತ್ತಾರೆಂದು ಸಭೆಯಲ್ಲಿದ್ದ ಪ್ರತಿನಿಧಿಗಳು ಕಳವಳ ವ್ಯಕ್ತಪಡಿಸಿ, ಸುಂಕ ವಸೂಲಾತಿ ಕೇಂದ್ರವನ್ನು ರದ್ದುಪಡಿಸುವಂತೆ ಅಭಿಪ್ರಾಯ ವ್ಯಕ್ತಪಡಿಸಿರುತ್ತಾರೆ.

ಅಲ್ಲದೇ ಇಲಾಖೆಯ ಈ ಕ್ರಮದ ಬಗ್ಗೆ ದಿ: 24.08.2024ರ ಶನಿವಾರದಂದು ಸ್ಥಳೀಯ ಹೋರಾಟ ಸಮಿತಿಗಳೊಂದಿಗೆ ಕಾರ್ಕಳ ಪಡುಬಿದ್ರೆ ರಾಜ್ಯ ಹೆದ್ದಾರಿ ಸಂಪೂರ್ಣ ಬಂದ್‌ಗೆ ಕರೆ ನೀಡಿದ್ದು, ಪ್ರತಿಭಟನಾ ಸಭೆಯನ್ನೂ  ನಡೆಸುತ್ತಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಈಗಾಗಲೇ ಪತ್ರಿಕೆಗಳಲ್ಲೂ ಸಾರ್ವಜನಿಕ ಅಭಿಪ್ರಾಯ ವ್ಯಕ್ತವಾಗಿದ್ದು, ಪ್ರತಿಗಳನ್ನು ಈ ಪತ್ರದೊಂದಿಗೆ ಲಗತ್ತಿಸಿದೆ.

 ಈ ವಿಷಯವು ಸಾರ್ವಜನಿಕ ಹಿತದೃಷ್ಟಿಯಿಂದಾಗಿ ಸೂಕ್ಷ್ಮತೆಯಿಂದ ಕೂಡಿರುವುದರಿಂದ, ಮೇಲ್ಕಂಡಂತೆ ಕಂಚಿನಡ್ಕ ಪ್ರದೇಶದಲ್ಲಿ ಕಾರ್ಯಾರಂಭ ಮಾಡಲು ಉದ್ದೇಶಿಸಿರುವ ಸುಂಕ ವಸೂಲಾತಿ ಕೇಂದ್ರದ ಬಗ್ಗೆ ಮತ್ತೊಮ್ಮೆ ಕೂಲಂಕಷವಾಗಿ ಪರಿಶೀಲಿಸಿ, ಮತ್ತೊಮ್ಮೆ ಸಭೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳುವರೆಗೆ ಸದರಿ ಸಂಸ್ಥೆಗೆ ನೀಡಲಾಗಿರುವ ಕಾರ್ಯಾದೇಶ ಆದೇಶವನ್ನು ತಾತ್ಕಾಲಿಕವಾಗಿ ತಡೆಹಿಡಿದು, ಕಂಚಿನಡ್ಕ ಪ್ರದೇಶದಲ್ಲಿ ಸಂಚಾರ ವ್ಯವಸ್ಥೆಯನ್ನು ಯಥಾಸ್ಥಿತಿಯಲ್ಲಿ ಮುಂದುವರೆಸುವ ಬಗ್ಗೆ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದೆ.

 ಈ ಹೋರಾಟಕ್ಕೆ ಸಹಕರಿಸಿ ಬೆಂಬಲಿಸಿದ ಎಲ್ಲಾ ಸಾರ್ವಜನಿಕರಿಗೂ ಸಂಘಸಂಸ್ಥೆಗಳಿಗೂ. ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರಿಗೂ ಕಾರ್ಯಕರ್ತರಿಗೆ ಮಾಜಿ ಸಚಿವ ವಿನಯಕುಮಾರ್‌ ಸೊರಕೆ ಧನ್ಯವಾದ ಸಮರ್ಪಿಸಿದ್ದಾರೆ.

 ಸಂದು ಸಂಜೆ ಪಡುಬಿದ್ರಿಯಲ್ಲಿ ವಿಜಯೋತ್ಸವ : ಟೋಲ್‌ ಗೇಟ್‌ ತಾತ್ಕಾಲಿಕ ರದ್ದತಿ ಬಗ್ಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿಯವರು ನೀಡಿದ ಆದೇಶಕ್ಕೆ ಅನುಗುಣವಾಗಿ ಶನಿವಾರ ಸಂಜೆ ಪಡುಬಿದ್ರಿ ಪೇಟೆಯಲ್ಲಿ ಸಿಹಿತಿಂಡಿ ಹಂಚಿ ವಿಜಯೋತ್ಸವ ಆಚರಿಸಲಾಗುವುದು ಎಂದು ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್‌ ಅಧ್ಯಕ್ಷ  ಕರುಣಾಕರ ಪೂಜಾರಿ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.  

Leave a comment

Your email address will not be published. Required fields are marked *

eMedia Kannada  @2025. All Rights Reserved.