• Home  
  • ಎಸ್‌ವೈಎಸ್ “ಸೌಹಾರ್ದ ಸಂಚಾರ” ಜಾಥ : ಪಡುಬಿದ್ರಿಯಲ್ಲಿ ಸಮಾರೋಪ (SYS “Friendly Movement” procession: Concluding at Padubidri)
- PROBLEMS - social service

ಎಸ್‌ವೈಎಸ್ “ಸೌಹಾರ್ದ ಸಂಚಾರ” ಜಾಥ : ಪಡುಬಿದ್ರಿಯಲ್ಲಿ ಸಮಾರೋಪ (SYS “Friendly Movement” procession: Concluding at Padubidri)

Share: ಎಸ್‌ವೈಎಸ್ “ಸೌಹಾರ್ದ ಸಂಚಾರ” ಜಾಥ : ಪಡುಬಿದ್ರಿಯಲ್ಲಿ ಸಮಾರೋಪ (Padubidri) ಪಡುಬಿದ್ರಿ: ಎಸ್‌ವೈಎಸ್ ಕುಂದಾಪುರದಿಂದ ಸುಳ್ಯದವರೆಗೆ ಮೂರು ದಿನಗಳ ಕಾಲ ಕರಾವಳಿಯಾದ್ಯಂತ ಆಯೋಜಿಸಿದ ಮೊದಲ ದಿನದ “ಸೌಹಾರ್ದ ಸಂಚಾರ” ಜಾಥವು ಪಡುಬಿದ್ರಿಯಲ್ಲಿ ಸಮಾರೋಪಗೊಂಡಿತು. ಜೆಸಿಐ ರಾಷ್ಟ್ರೀಯ ಸಲಹಾ ಸಮಿತಿಯ ವೈ. ಸುಕುಮಾರ್  ಮಾತನಾಡಿ, ಒಬ್ಬರಿಗೊಬ್ಬರು ಪರಸ್ಪರ ಸ್ನೇಹ ಸಹಕಾರ ಮನೊಭಾವ ಬೆಳೆಸುವ ಮೂಲಕ ನಾವು ಭಾರತೀಯರು ಎಂಬ ನೆಲೆಯಲ್ಲಿ ಸಂಘಟಿತರಾಗಬೇಕು ಎಂದು ಕರೆ ನೀಡಿದರು. ಸಯ್ಯಿದ್ ಇಲ್ಯಾಸ್ ತಂಙಳ್, ಸಯ್ಯಿದ್ ಹಾಮೀಂ ತಂಙಳ್, ಸಯ್ಯಿದ್ ಶಿಹಾಬುದ್ದೀನ್ […]

(Padubidri) ಪಡುಬಿದ್ರಿ: ಎಸ್‌ವೈಎಸ್ ಕುಂದಾಪುರದಿಂದ ಸುಳ್ಯದವರೆಗೆ ಮೂರು ದಿನಗಳ ಕಾಲ ಕರಾವಳಿಯಾದ್ಯಂತ ಆಯೋಜಿಸಿದ ಮೊದಲ ದಿನದ “ಸೌಹಾರ್ದ ಸಂಚಾರ” ಜಾಥವು ಪಡುಬಿದ್ರಿಯಲ್ಲಿ ಸಮಾರೋಪಗೊಂಡಿತು.

ಜೆಸಿಐ ರಾಷ್ಟ್ರೀಯ ಸಲಹಾ ಸಮಿತಿಯ ವೈ. ಸುಕುಮಾರ್  ಮಾತನಾಡಿ, ಒಬ್ಬರಿಗೊಬ್ಬರು ಪರಸ್ಪರ ಸ್ನೇಹ ಸಹಕಾರ ಮನೊಭಾವ ಬೆಳೆಸುವ ಮೂಲಕ ನಾವು ಭಾರತೀಯರು ಎಂಬ ನೆಲೆಯಲ್ಲಿ ಸಂಘಟಿತರಾಗಬೇಕು ಎಂದು ಕರೆ ನೀಡಿದರು.

ಸಯ್ಯಿದ್ ಇಲ್ಯಾಸ್ ತಂಙಳ್, ಸಯ್ಯಿದ್ ಹಾಮೀಂ ತಂಙಳ್, ಸಯ್ಯಿದ್ ಶಿಹಾಬುದ್ದೀನ್ ತಂಙಳ್, ಪಡುಬಿದ್ರಿ ಗ್ರಾಮ ಪಂಚಾಯಿತಿ ಸದಸ್ಯರಾದ ನವೀನ್ ಎನ್. ಶೆಟ್ಟಿ, ರಮೀಝ್ ಹುಸೈನ್, ನಿಯಾಝ್ ಪಡುಬಿದ್ರಿ, ಬುಡಾನ್ ಸಾಹೇಬ್, ಅಡ್ವೋಕೇಟ್ ಹಂಝತ್ ಹೆಜಮಾಡಿ, ಕೆ.ಎಂ. ಅಬೂಬಕರ್ ಸಿದ್ದೀಕ್, ಎಸ್‌ವೈಎಸ್ ರಾಜ್ಯಾಧ್ಯಕ್ಷ ಬಶೀರ್ ಸಅದಿ ಬೆಂಗಳೂರು, ಎಸ್‌ವೈಎಸ್ ಪ್ರಧಾನ ಕೆ.ಎಂ. ಅಬೂಬಕ್ಕರ್ ಸಿದ್ದೀಕ್, ಎ.ಕೆ. ಸಯ್ಯದ್ ಆಲಿ, ಮನ್ಸೂರ್ ಶಿವಮೊಗ್ಗ, ಸಯ್ಯದ್ ಹಾಮೀಂ ತಂಬಳ್ ಬಾಳೆಹೊನ್ನೂರು, ಸಯ್ಯದ್ ಇಲ್ಯಾಸ್ ಅಲ್ ಹೈದ್ರೋಸ್ ತಂಜಳ್ ಕೊಡಗು, ಸಯ್ಯದ್ ಶಿಹಾಬುದ್ದೀನ್ ತಂಜಳ್, ಅಬ್ದುಲ್ಲತೀಫ್ ಫಾಳಿಲಿ ಮತ್ತಿತರರು ಉಪಸ್ಥಿತರಿದ್ದರು.

ರಕೀಬ್ ಕನ್ನಂಗಾರ್ ಸ್ವಾಗತಿಸಿದರು. ಕೆ.ಎ. ಅಬ್ದುರ್ರಹ್ಮಾನ್ ರಝ್ವಿ ಕಾರ್ಯಕ್ರಮ ನಿರೂಪಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.