• Home  
  • ಬಂಟಕಲ್ ತಾಂತ್ರಿಕ ಕಾಲೇಜಿನಲ್ಲಿ “ಟೆಕ್ನಿಕಲ್ ಪ್ರಾಜೆಕ್ಟ್ ಐಡಿಯೇಶನ್” ಮಿನಿ ಪ್ರಾಜೆಕ್ಟ್ ಪ್ರದರ್ಶನ,  ಸ್ಪರ್ಧೆ(Project exhibition of I ,II & III year  students at Bantakal Engineering college)
- ಶಾಲಾ ಕಾಲೇಜು

ಬಂಟಕಲ್ ತಾಂತ್ರಿಕ ಕಾಲೇಜಿನಲ್ಲಿ “ಟೆಕ್ನಿಕಲ್ ಪ್ರಾಜೆಕ್ಟ್ ಐಡಿಯೇಶನ್” ಮಿನಿ ಪ್ರಾಜೆಕ್ಟ್ ಪ್ರದರ್ಶನ,  ಸ್ಪರ್ಧೆ(Project exhibition of I ,II & III year  students at Bantakal Engineering college)

Share:  ಬಂಟಕಲ್ ತಾಂತ್ರಿಕ ಕಾಲೇಜಿನಲ್ಲಿ “ಟೆಕ್ನಿಕಲ್ ಪ್ರಾಜೆಕ್ಟ್ ಐಡಿಯೇಶನ್” ಮಿನಿ ಪ್ರಾಜೆಕ್ಟ್ ಪ್ರದರ್ಶನ,  ಸ್ಪರ್ಧೆ (Bantakal) ಬಂಟಕಲ್:‌ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ಸಹ ಪಠ್ಯೇತರ ಕೋಶ, ಹವ್ಯಾಸಿ ಪ್ರಾಜೆಕ್ಟ್ ಕ್ಲಬ್, ಐಎಸ್‌ಟಿಇ ವಿದ್ಯಾರ್ಥಿ ಘಟಕ ಮತ್ತು ಇನ್ಸ್ಸ್ಟಿಟ್ಯೂಟ್ ಇನ್ನೋವೇಶನ್ ಕೌನ್ಸಿಲ್ ಸಹಯೋಗದೊಂದಿಗೆ  “ಟೆಕ್ನಿಕಲ್ ಪ್ರಾಜೆಕ್ಟ್ ಐಡಿಯೇಶನ್”ಎಂಬ ವಿಷಯದಡಿ  ಪ್ರಥಮ, ದ್ವಿತೀಯ ಮತ್ತು ತೃತೀಯ ವರ್ಷದ ವಿದ್ಯಾರ್ಥಿಗಳಿಗಾಗಿ  ಮಿನಿ ಪ್ರಾಜೆಕ್ಟ್ ಸ್ಪರ್ಧೆ ಮತ್ತು ಪ್ರದರ್ಶನ ಆಯೋಜಿಸಲಾಯಿತು.  ಕಾರ್ಯಕ್ರಮವನ್ನು ಸಂಸ್ಥೆ ಯ ಹಳೆವಿದ್ಯಾರ್ಥಿ ಭಾರ್ಗವ ರಾಮ್  […]

 ಬಂಟಕಲ್ ತಾಂತ್ರಿಕ ಕಾಲೇಜಿನಲ್ಲಿಟೆಕ್ನಿಕಲ್ ಪ್ರಾಜೆಕ್ಟ್ ಐಡಿಯೇಶನ್ಮಿನಿ ಪ್ರಾಜೆಕ್ಟ್ ಪ್ರದರ್ಶನ,  ಸ್ಪರ್ಧೆ

(Bantakal) ಬಂಟಕಲ್:‌ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ಸಹ ಪಠ್ಯೇತರ ಕೋಶ, ಹವ್ಯಾಸಿ ಪ್ರಾಜೆಕ್ಟ್ ಕ್ಲಬ್, ಐಎಸ್‌ಟಿಇ ವಿದ್ಯಾರ್ಥಿ ಘಟಕ ಮತ್ತು ಇನ್ಸ್ಸ್ಟಿಟ್ಯೂಟ್ ಇನ್ನೋವೇಶನ್ ಕೌನ್ಸಿಲ್ ಸಹಯೋಗದೊಂದಿಗೆ  “ಟೆಕ್ನಿಕಲ್ ಪ್ರಾಜೆಕ್ಟ್ ಐಡಿಯೇಶನ್”ಎಂಬ ವಿಷಯದಡಿ  ಪ್ರಥಮ, ದ್ವಿತೀಯ ಮತ್ತು ತೃತೀಯ ವರ್ಷದ ವಿದ್ಯಾರ್ಥಿಗಳಿಗಾಗಿ  ಮಿನಿ ಪ್ರಾಜೆಕ್ಟ್ ಸ್ಪರ್ಧೆ ಮತ್ತು ಪ್ರದರ್ಶನ ಆಯೋಜಿಸಲಾಯಿತು.

 ಕಾರ್ಯಕ್ರಮವನ್ನು ಸಂಸ್ಥೆ ಯ ಹಳೆವಿದ್ಯಾರ್ಥಿ ಭಾರ್ಗವ ರಾಮ್  ಉಡುಪರವರು ಉದ್ಘಾಟಿಸಿದರು.

  ಮಿನಿ ಪ್ರಾಜೆಕ್ಟ್ ಬಗ್ಗೆ ಮಾಹಿತಿ ನೀಡಿದ ಭಾರ್ಗವ್, ತಮ್ಮ ಕಾಲೇಜಿನ ದಿನಗಳಲ್ಲಿ ಪ್ರಾಜೆಕ್ಟ್ ಸ್ಪರ್ಧೆಯಲ್ಲಿ ಭಾಗವಹಿಸಿ ಅದರಿಂದ ಪಡೆದ ಪ್ರಯೋಜನದ ಬಗ್ಗೆ ಮಾಹಿತಿ ನೀಡಿದರು.

ಸಂಸ್ಥೆಯ ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್ (Principal Prof. Dr. Thirumaleshwara Bhat)ಮಾತನಾಡಿ, ಜ್ಞಾನವನ್ನು ನಮ್ಮಿಂದ ಯಾರು ಕಸಿದುಕೊಳ್ಳಲು ಸಾಧ್ಯವಿಲ್ಲ. ಇನ್ನೂ ಹೆಚ್ಚಿನ ಜ್ಞಾನವನ್ನು ಪಡೆಯಲು ವಿದ್ಯಾರ್ಥಿಗಳು ಇಂತಹ ಪ್ರಾಜೆಕ್ಟ್‌ಗಳಲ್ಲಿ ಭಾಗವಹಿಸಬೇಕು ಎಂದರು. 

 ಪ್ರಥಮ, ದ್ವಿತೀಯ ಮತ್ತು ತೃತೀಯ ವರ್ಷದ ವಿದ್ಯಾರ್ಥಿಗಳು ಒಟ್ಟು 66 ಪ್ರಾಜೆಕ್ಟ್‌ಗಳನ್ನು ಪ್ರದರ್ಶಿಸಿದರು.

  ಒಟ್ಟು 6 ಪ್ರಾಜೆಕ್ಟ್ಅನ್ನು ಅತ್ಯುತ್ತಮ ಪ್ರಾಜೆಕ್ಟ್ ಎಂದು ಆಯ್ಕೆ ಮಾಡಿ ನಗದು ಬಹುಮಾನವನ್ನು ನೀಡಲಾಯಿತು.

 ಸಂಸ್ಥೆಯ ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್, ಉಪ ಪ್ರಾಂಶುಪಾಲರಾದ ಡಾ. ಗಣೇಶ್ ಐತಾಳ್, ಡೀನ್‌ಗಳು, ವಿವಿಧ ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಈ ಪ್ರಾಜೆಕ್ಟ್ ಪ್ರದರ್ಶನಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.

 ಸಂಸ್ಥೆಯ ಸಹ ಪಠ್ಯೇತರ ಚಟುವಟಿಕೆಯ ಸಂಯೋಜಕರಾದ ಡಾ. ರೆನಿಟಾ ಶರೋನ್ ಮೋನಿಸ್ ಕಾರ್ಯಕ್ರಮವನ್ನು ಸಂಯೋಜಿಸಿದರು. ವಿದ್ಯಾರ್ಥಿನಿ ಧನ್ಯ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.