• Home  
  • ಬಂಟಕಲ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ 13ನೇ ಪದವಿ ಪ್ರದಾನ ಸಮಾರಂಭ( 13th Graduation Ceremony at SMVITM, Bantakal)
- ಶಾಲಾ ಕಾಲೇಜು

ಬಂಟಕಲ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ 13ನೇ ಪದವಿ ಪ್ರದಾನ ಸಮಾರಂಭ( 13th Graduation Ceremony at SMVITM, Bantakal)

Share:  ಬಂಟಕಲ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ 13ನೇ ಪದವಿಪ್ರದಾನ ಸಮಾರಂಭ  ಪೂಜ್ಯ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮ.    (Bantakal) ಬಂಟಕಲ್:‌ ಬಂಟಕಲ್‌ನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ 13ನೇ “ಪದವಿ ಪ್ರದಾನ”ಸಮಾರಂಭವು ಭಾನುವಾರ  ಕಾಲೇಜಿನ ಆವರಣದಲ್ಲಿ ನಡೆಯಿತು.   ದಾವಣಗೆರೆ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಪತಿಗಳಾದ ಡಾ. ಬಿ ಇ ರಂಗಸ್ವಾಮಿಯವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.   ಅವರು ಮಾತನಾಡಿ, ವಿದ್ಯಾರ್ಥಿಗಳ ಸಾಧನೆಯಲ್ಲಿ ಪೋಷಕರ ಮತ್ತು ಶಿಕ್ಷಕ ವರ್ಗದ ಕೊಡುಗೆ ಶ್ಲಾಘನೀಯ. ಶಿಕ್ಷಣವು […]

   (Bantakal) ಬಂಟಕಲ್:‌ ಬಂಟಕಲ್‌ನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ 13ನೇ “ಪದವಿ ಪ್ರದಾನ”ಸಮಾರಂಭವು ಭಾನುವಾರ  ಕಾಲೇಜಿನ ಆವರಣದಲ್ಲಿ ನಡೆಯಿತು.

  ದಾವಣಗೆರೆ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಪತಿಗಳಾದ ಡಾ. ಬಿ ಇ ರಂಗಸ್ವಾಮಿಯವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

  ಅವರು ಮಾತನಾಡಿ, ವಿದ್ಯಾರ್ಥಿಗಳ ಸಾಧನೆಯಲ್ಲಿ ಪೋಷಕರ ಮತ್ತು ಶಿಕ್ಷಕ ವರ್ಗದ ಕೊಡುಗೆ ಶ್ಲಾಘನೀಯ. ಶಿಕ್ಷಣವು ಉಜ್ವಲ ಭವಿಷ್ಯದ ಅಡಿಪಾಯ. ನಾವೀನ್ಯತೆ, ಉದ್ಯಮಶೀಲತೆ ಮತ್ತು ಸ್ಟಾರ್ಟ್ ಅಪ್ ಇಂಡಿಯಾ ಯೋಜನೆಯ ಅವಕಾಶಗಳನ್ನು ಬಳಸಿಕೊಳ್ಳುವಂತೆ ಪದವೀಧರರಿಗೆ ಕರೆ ನೀಡಿದ ಅವರು, ದೊಡ್ಡ ಕನಸಿನೊಂದಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಿ ಯಶಸ್ವಿ ವೃತ್ತಿ ಜೀವನವನ್ನು ರೂಪಿಸಿಕೊಂಡು ಸಮಾಜಕ್ಕೆ ಅರ್ಥಪೂರ್ಣ ಕೊಡುಗೆ ನೀಡುವಂತೆ ಸಲಹೆ ನೀಡಿದರು.

  ಗೌರವ ಅತಿಥಿಗಳಾಗಿ ಧಾರವಾಡದ ಇಂಡಿಯನ್ ಇನ್ಸಿಟ್ಯೂಟ್‌ ಆಫ್ ಟೆಕ್ನಾಲಾಜಿ (ಐಐಟಿ)ಯ ನಿರ್ದೇಶಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 ಅವರು ಪದವೀಧರರನ್ನು ಅವರ ವೃತ್ತಿಜೀವನದ ಮಹತ್ವದ ಮೈಲಿಗಲ್ಲಿಗಾಗಿ ಅಭಿನಂದಿಸಿದರು. ನೈಜ ಜಗತ್ತಿನ ಸಮಸ್ಯೆಗಳಿಗೆ ಪರಿಣಾಮಕಾರಿ ಪರಿಹಾರಗಳನ್ನು ಕಂಡುಕೊಳ್ಳಲು ನಿರಂತರ ಕಲಿಕೆ, ಸಂಸೋಧನೆ ಮತ್ತು ನಾವೀನ್ಯತೆ ಅಗತ್ಯವೆಂದ ಹೇಳಿದ ಅವರು, “ಕಡಿಮೆ ಬಳಕೆ, ಮರುಬಳಕೆ ಮತ್ತು ಮರುಸಂಸ್ಕರಣೆ” ತತ್ವಗಳನ್ನು ಅಳವಡಿಸಿಕೊಳ್ಳುವಂತೆ ಹಾಗೂ ಸುಸ್ಥಿರ ಅಭಿವೃದ್ದಿ, ನೈತಿಕ ಮೌಲ್ಯಗಳು ಮತ್ತು ಸಮಾಜದ ಪ್ರಗತಿಗೆ ಆದ್ಯತೆ ನೀಡುವಂತೆ ಪದವೀಧರರಿಗೆ ಕರೆ ನೀಡಿದರು.

  ಶ್ರೀ ಸೋದೆ ವಾದಿರಾಜ ಮಠದ ಪರಮ ಪೂಜ್ಯ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿಯವರು ಅಧ್ಯಕ್ಷತೆ ವಹಿಸಿದ್ದರು.

  ಅವರು ತಮ್ಮ ಆಶೀರ್ವಚನ ಮತ್ತು ಅಧ್ಯಕ್ಷೀಯ ಭಾಷಣದಲ್ಲಿ ಪ್ರಾಮಾಣಿಕತೆ, ನೈತಿಕ ಮೌಲ್ಯಗಳು, ಸಾಮಾಜಿಕ ಜವಾಬ್ದಾರಿ, ನಿರಂತರ ಕಲಿಕೆ ಹಾಗೂ ಯಶಸ್ಸು ಮತ್ತು ವೈಫಲ್ಯಗಳನ್ನು ಧೈರ್ಯದಿಂದ ಎದುರಿಸುವ ಮಹತ್ವವನ್ನು ತಿಳಿಸಿದರು. ಪದವೀಧರರು ಸಮಾಜದ ಉನ್ನತಿಗೆ ಶ್ರಮಿಸುವಂತೆ, ಪೋಷಕರ ತ್ಯಾಗ ಮತ್ತು ಶಿಕ್ಷಕರ ಸಮರ್ಪಣೆಯನ್ನು ಸ್ಮರಿಸುವಂತೆ  ಹೇಳಿದ ಅವರು, ಪದವೀಧರರ ಉಜ್ವಲ ಹಾಗೂ ಅರ್ಥಪೂರ್ಣ ಭವಿಷ್ಯಕ್ಕಾಗಿ ಆಶೀರ್ವದಿಸಿರು.

  ಕಾರ್ಯದರ್ಶಿಗಳಾದ ರತ್ನಕುಮಾರ್  ಪದವೀಧರರನ್ನು ಅಭಿನಂದಿಸುತ್ತಾ, ಯಶಸ್ಸು ಮತ್ತು ವೈಫಲ್ಯಗಳನ್ನು ಜೀವನದ ಅವಿಭಾಜ್ಯ ಅಂಗಗಳಾಗಿ ಸ್ವೀಕರಿಸುವ ಮಹತ್ವವನ್ನು ತಿಳಿಸಿದರು.  

  ಈ ಸಂದರ್ಭದಲ್ಲಿ ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಮತ್ತು ಡಾಟಾ ಸೈನ್ಸ್ ವಿಭಾಗದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 2025-26 ನೇ ಸಾಲಿನಲ್ಲಿ ನಾಲ್ಕನೇ ರ‍್ಯಾಂಕ್ ಪಡೆದ ಕುಮಾರಿ ಸಿಂಚನ ಇವರನ್ನು ಸನ್ಮಾನಿಸಲಾಯಿತು.

  ಮಂಗಳೂರಿನ ಪ್ರತಿಷ್ಠಿತ ಎಸ್. ಎಲ್. ಶೇಟ್ ಜ್ಯುವೆಲರ್ಸ್‌ ಇವರಿಂದ ಪ್ರಾಯೋಜಿತವಾದ ಚಿನ್ನದ ಪದಕಗಳನ್ನು ಪೂಜ್ಯ ಸ್ವಾಮೀಜಿಯವರು ಸಿಂಚನ, ಕೀರ್ತಿ, ಎಮ್ ಶಫಾಜ್ ಎ ಆರ್, ಹರ್ಷಿತ್ ರಾಜು, ಅನ್ನಪೂರ್ಣ ಶೆಣೈ, ವಿಕಾಸ್, ರಕ್ಷಾ ಸುಬ್ರಮಣ್ಯ ಶೆಟ್ಟಿ ಇವರ ಶೈಕ್ಷಣಿಕ ಸಾಧನೆಗಾಗಿ ನೀಡಿ ಆಶೀರ್ವದಿಸಿದರು.

  ಪ್ರಾಂಶುಪಾಲಡಾ. ನಾಗರಾಜ್ ಭಟ್ ಅತಿಥಿಗಳನ್ನು ಸ್ವಾಗತಿಸಿದರು. ಆಡಳಿತ ಮಂಡಳಿಯ ಸದಸ್ಯರಾದ ಡಾ. ಗುರುರಾಜ್ ಕಿದಿಯೂರ್, ಹರೀಶ್ ಬೆಳ್ಮಣ್, ಪ್ರೊ. ಬಿ ಎಸ್ ರೆವಣಕರ್, ಶ್ಯಾಮ ಸುಂದರ್, ನಂದಕುಮಾರ್ ಉಪಾಧ್ಯಾಯ, ಡೀನ್‌ಗಳಾದ ಡಾ. ಸುದರ್ಶನ್ ರಾವ್, ಡಾ. ನಾಗರಾಜ್ ಭಟ್, ಡಾ. ಸಚಿನ್ ಭಟ್ ಮತ್ತು ವಿವಿಧ ವಿಭಾಗಗಳ ಮುಖ್ಯಸ್ಥರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

  ಪ್ರಾಧ್ಯಾಪಕಿ ಡಾ. ಸುಬ್ಬುಲಕ್ಷ್ಮೀ ಎನ್ ಕಾರಂತ್ ಮುಖ್ಯ ಅತಿಥಿಗಳನ್ನು ಹಾಗೂ ಡಾ. ಲೊಲಿಟ ಪ್ರಿಯ ಕ್ಯಾಸ್ತಲಿನೊ ಇವರು ಗೌರವ ಅತಿಥಿಗಳನ್ನು ಪರಿಚಯಿಸಿದರು.

   ಡಾ. ಸುದರ್ಶನ್ ರಾವ್ ಅವರು ಪದವೀಧರರಿಗೆ ಪ್ರಮಾಣವಚನ ಭೋದಿಸಿದರು. ಡಾ. ಸೌಮ್ಯ ಜೆ ಭಟ್ ವಿವಿಧ ವಿಭಾಗಗಳಲ್ಲಿ ರ‍್ಯಾಂಕ್ ವಿಜೇತರ ಪಟ್ಟಿ ವಾಚಿಸಿದರು. ಡಾ. ಸಚಿನ್ ಎಸ್ ಭಟ್ ವಂದಿಸಿದರು. ವಿದ್ಯಾರ್ಥಿ ಶರಣ್ಯ ತಂತ್ರಿ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ಪ್ರಾಧ್ಯಾಪಕ ಶ್ರೀಮತಿ ಸಹನ ಎಸ್ ಆರ್ ಮತ್ತು ಡಾ. ಪುನೀತ್ ಬೇಕಲ್ ನಿರೂಪಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.