• Home  
  • ಬಂಟ್ವಾಳ: ಅಕ್ರಮ ಗೋವಾ ಮದ್ಯ ಸಾಗಾಟ‌ ಪತ್ತೆ, ಒರ್ವನ ಬಂಧನ (Bantwala: Illigal liquor found, One arrest)
- ಅಪರಾಧ

ಬಂಟ್ವಾಳ: ಅಕ್ರಮ ಗೋವಾ ಮದ್ಯ ಸಾಗಾಟ‌ ಪತ್ತೆ, ಒರ್ವನ ಬಂಧನ (Bantwala: Illigal liquor found, One arrest)

Share: ಬಂಟ್ವಾಳ: ಅಕ್ರಮ ಗೋವಾ ಮದ್ಯ ಸಾಗಾಟ‌ ಪತ್ತೆ, ಒರ್ವನ ಬಂಧನ  ಬಂಟ್ವಾಳ:  ತಾಲೂಕಿನ ಕುರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಡಿಪುವಿನಿಂದ- ನೆತ್ತಿಲಪದವು  ರಸ್ತೆಯ ಮೂಲಕ ಕೇರಳಕ್ಕೆ ಗೂಡ್ಸ್ ವಾಹನವೊಂದರಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಗೋವಾ ಮದ್ಯವನ್ನು‌ ಬಂಟ್ವಾಳ ವಲಯ ಅಬಕಾರಿ ನಿರೀಕ್ಷಕರು ಮತ್ತವರ ಸಿಬ್ಬಂದಿಗಳು ಪತ್ತೆ ಹಚ್ಚಿದ್ದು, ಈ ಸಂಬಂಧ ಒರ್ವನನ್ನು ಬಂಧಿಸಲಾಗಿದೆ.  ಉತ್ತರ ಕನ್ನಡ ಜಿಲ್ಲೆಯ‌ ಹೊನ್ನಾವರ ಬಜಾರ್ ರೋಡ್ ನಿವಾಸಿ ರಾಧಕೃಷ್ಣ ಕಾಮತ್ ಬಂಧಿತ ಆರೋಪಿಯಾಗಿದ್ದಾನೆ. ಈತನಿಂದ  ಗೂಡ್ಸ್ ವಾಹನ, 114 ಮದ್ಯದ […]

ಬಂಟ್ವಾಳ: ಅಕ್ರಮ ಗೋವಾ ಮದ್ಯ ಸಾಗಾಟಪತ್ತೆ, ಒರ್ವನ ಬಂಧನ

 ಬಂಟ್ವಾಳ:  ತಾಲೂಕಿನ ಕುರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಡಿಪುವಿನಿಂದ- ನೆತ್ತಿಲಪದವು  ರಸ್ತೆಯ ಮೂಲಕ ಕೇರಳಕ್ಕೆ ಗೂಡ್ಸ್ ವಾಹನವೊಂದರಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಗೋವಾ ಮದ್ಯವನ್ನು‌ ಬಂಟ್ವಾಳ ವಲಯ ಅಬಕಾರಿ ನಿರೀಕ್ಷಕರು ಮತ್ತವರ ಸಿಬ್ಬಂದಿಗಳು ಪತ್ತೆ ಹಚ್ಚಿದ್ದು, ಈ ಸಂಬಂಧ ಒರ್ವನನ್ನು ಬಂಧಿಸಲಾಗಿದೆ.

 ಉತ್ತರ ಕನ್ನಡ ಜಿಲ್ಲೆಯ‌ ಹೊನ್ನಾವರ ಬಜಾರ್ ರೋಡ್ ನಿವಾಸಿ ರಾಧಕೃಷ್ಣ ಕಾಮತ್ ಬಂಧಿತ ಆರೋಪಿಯಾಗಿದ್ದಾನೆ. ಈತನಿಂದ  ಗೂಡ್ಸ್ ವಾಹನ, 114 ಮದ್ಯದ ಪೆಟ್ಟಿಗೆ ಸಹಿತ ಅಂದಾಜು 6,87,720 ಲ. ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಲಾಗಿದೆ.

  ಖಚಿತ ವರ್ತಮಾನದ ಮೇರೆಗೆ ಮಂಗಳೂರು ವಿಭಾಗಅಬಕಾರಿ ಜಂಟಿ ಆಯುಕ್ತರ ನಿರ್ದೇಶನದಂತೆ ದ.ಕ.ಜಿಲ್ಲೆಯ ಅಬಕಾರಿ ಉಪ ಆಯುಕ್ತರ ಮಾರ್ಗದರ್ಶನದಲ್ಲಿ ಹಾಗು ಬಂಟ್ವಾಳ ಉಪವಿಭಾಗದ ಅಬಕಾರಿ ಉಪ-ಅಧೀಕ್ಷಕರ ನೇತೃತ್ವದಲ್ಲಿ ಅಬಕಾರಿ ನಿರೀಕ್ಷಕರಾದ ಲಕ್ಷ್ಮಣ್ ಶಿವಣಗಿ ಮತ್ತು ಸಿಬ್ಬಂದಿಗಳಾದ ಸುನೀಲ್ ಬೈಂದೂರು, ದೊಡ್ಡಪ್ಪ ಮತ್ತು ಸದಾಶಿವ ಹಕ್ಕೆ, ರವಿ ನಾರ್ವೆಕರ್, ಅರ್ಜುನ ಭಾಗೋಡಿ ಅವರು ‌ಕಾರ್ಯಾಚರಣೆ ನಡೆಸಿ ಈ ಅಕ್ರಮ ಮದ್ಯ ಸಾಗಾಟವನ್ನು ಪತ್ತೆ ಹಚ್ಚಿದ್ದಾರೆ.

 ಬಂಟ್ವಾಳ ವಲಯ ಅಬಕಾರಿ ನಿರೀಕ್ಷಕರು ಪ್ರಕರಣ ದಾಖಲಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.