• Home  
  •   ಬಚ್ಚಲು ಕೋಣೆಯ ವೀಡಿಯೋ ಚಿತ್ರೀಕರಿಸುತ್ತಿದ್ದ ಸುಮಂತ್ ಹಿಂದೂ ಸಂಘಟನೆಯ ಕಾರ್ಯಕರ್ತನಲ್ಲ –  ಬಜರಂಗದಳ ಮುಖಂಡರಿಂದ ಸ್ಪಷ್ಟನೆ
- ಅಪರಾಧ - ಕರಾವಳಿ

  ಬಚ್ಚಲು ಕೋಣೆಯ ವೀಡಿಯೋ ಚಿತ್ರೀಕರಿಸುತ್ತಿದ್ದ ಸುಮಂತ್ ಹಿಂದೂ ಸಂಘಟನೆಯ ಕಾರ್ಯಕರ್ತನಲ್ಲ –  ಬಜರಂಗದಳ ಮುಖಂಡರಿಂದ ಸ್ಪಷ್ಟನೆ

Share:   ಬಚ್ಚಲು ಕೋಣೆಯ ವೀಡಿಯೋ ಚಿತ್ರೀಕರಿಸುತ್ತಿದ್ದ ಸುಮಂತ್ ಹಿಂದೂ ಸಂಘಟನೆಯ ಕಾರ್ಯಕರ್ತನಲ್ಲ –  ಬಜರಂಗದಳ ಮುಖಂಡರಿಂದ ಸ್ಪಷ್ಟನೆ  ಮೂಲ್ಕಿ:  ಮಂಗಳೂರು ಕಮೀಷನರೇಟ್ ನ ಮುಲ್ಕಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನೆರೆಮನೆಯ ಬಚ್ಚಲು ಕೋಣೆಯ ದೃಶ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸುತ್ತಿದ್ದ ವೇಳೆ ಪಕ್ಷಿಕೆರೆ ಹೊಸಕಾಡು ನಿವಾಸಿ ಸುಮಂತ್ ಪೂಜಾರಿ (22) ಸಿಕ್ಕಿಬಿದ್ದಿರುವ ಘಟನೆ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.  ಇದೀಗ ಕೆಲವೊಂದು ಮಾಧ್ಯಮಗಳು ಸುಮಂತ್ ಸಂಘ ಪರಿವಾರದಲ್ಲಿ ಗುರುತಿಸಿಕೊಂಡಿದ್ದಾನೆ. ಜಾಗರಣ ವೇದಿಕೆ, ಬಜರಂಗದಳದ ಕಾರ್ಯಕರ್ತ ಎಂದು ಹೇಳಿವೆ. ಆದರೆ ಇದನ್ನು […]

  ಬಚ್ಚಲು ಕೋಣೆಯ ವೀಡಿಯೋ ಚಿತ್ರೀಕರಿಸುತ್ತಿದ್ದ ಸುಮಂತ್ ಹಿಂದೂ ಸಂಘಟನೆಯ ಕಾರ್ಯಕರ್ತನಲ್ಲ –  ಬಜರಂಗದಳ ಮುಖಂಡರಿಂದ ಸ್ಪಷ್ಟನೆ

 ಮೂಲ್ಕಿ:  ಮಂಗಳೂರು ಕಮೀಷನರೇಟ್ ನ ಮುಲ್ಕಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನೆರೆಮನೆಯ ಬಚ್ಚಲು ಕೋಣೆಯ ದೃಶ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸುತ್ತಿದ್ದ ವೇಳೆ ಪಕ್ಷಿಕೆರೆ ಹೊಸಕಾಡು ನಿವಾಸಿ ಸುಮಂತ್ ಪೂಜಾರಿ (22) ಸಿಕ್ಕಿಬಿದ್ದಿರುವ ಘಟನೆ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

 ಇದೀಗ ಕೆಲವೊಂದು ಮಾಧ್ಯಮಗಳು ಸುಮಂತ್ ಸಂಘ ಪರಿವಾರದಲ್ಲಿ ಗುರುತಿಸಿಕೊಂಡಿದ್ದಾನೆ. ಜಾಗರಣ ವೇದಿಕೆ, ಬಜರಂಗದಳದ ಕಾರ್ಯಕರ್ತ ಎಂದು ಹೇಳಿವೆ. ಆದರೆ ಇದನ್ನು ನಿರಾಕರಿಸಿರುವ ಹಿಂದೂ ಸಂಘಟನೆ ಮುಖಂಡರು, ಸುಮಂತ್ ಯಾವುದೇ ಸಂಘಟನೆಯೊಂದಿಗೆ ಗುರುತಿಸಿಕೊಂಡಿಲ್ಲ. ಕೆಲವು ಮಾಧ್ಯಮಗಳು ತಪ್ಪು ಮಾಹಿತಿ ನೀಡುತ್ತಿವೆ ಎಂದು ಸ್ಪಷ್ಟಪಡಿಸಿದ್ದಾರೆ.

 ಸುಮಂತ್ ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದೇ ಬಜರಂಗದಳದ ಕಾರ್ಯಕರ್ತರು.

 ಮತ್ತೊಂದು ಮುಖ್ಯ ವಿಚಾರ ಎಂದರೆ ಮಹಿಳೆ ಸ್ನಾನ ಮಾಡುವಾಗ ವೀಡಿಯೋ ಚಿತ್ರೀಕರಣ ಮಾಡಲಾಗಿದೆ ಎನ್ನಲಾಗುತ್ತಿದೆ. ಆದರೆ ಇದು ಕೂಡ ತಪ್ಪು ಮಾಹಿತಿ. ಆಗ ಪುರುಷರೊಬ್ಬರು ಸ್ನಾನ ಮಾಡುತ್ತಿದ್ದರು. ಹಿಂದೂ ಸಂಘಟನೆ ಹೆಸರು ಕೆಡಿಸುವ ಪ್ರಯತ್ನ ನಡೆಯುತ್ತಿದ್ದು, ಇದನ್ನು ಖಂಡಿಸುತ್ತೇವೆ ಎಂದಿದ್ದಾರೆ.

 ಒಂದು ಕಡೆ ರಾಜ್ಯ ಸರಕಾರ ಬಜರಂಗ ದಳವನ್ನು ನಿಷೇದಿಸುತ್ತೇವೆ ಎನ್ನುತ್ತಿದೆ. ಇನ್ನೊಂದು ಕಡೆ ಹೆಸರು ಕೆಡಿಸುವ ಪ್ರಯತ್ನ ನಡೆಯುತ್ತಿದೆ. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದೇವೆ ಎಂದು ಹಿಂದೂ ಸಂಘಟನೆ ಮುಖಂಡರು ಹೇಳಿದ್ದಾರೆ.

 ಈ ಬಗ್ಗೆ ಹೊಸಕಾಡು ಬಜರಂಗದಳ ಘಟಕದ ಸಂಚಾಲಕ ಗೌತಮ್, ಪ್ರಖಂಡದ ಸುರಕ್ಷಾ ಪ್ರಮುಖ್ ರಾಜೇಶ್ ಅವರನ್ನು ಸುದ್ದಿ ಸಂಸ್ಥೆ ಮಾತನಾಡಿಸಿದ್ದು, ಆರೋಪಿ ಸುಮಂತ್ ನಿಗೆ ಕೆಟ್ಟ ಚಟಗಳು ಇರುವ ಕಾರಣ ನಾವು ಸಂಘಟನೆಗೆ ಸೇರಿಸಿಕೊಂಡಿಲ್ಲ. ಕೇಸರಿ ಶಾಲು ಹಾಕಿಕೊಂಡಿರುವ ಆರೋಪಿಯ ಫೋಟೋ ಶೇರ್ ಮಾಡಿ ಬಜರಂಗದಳದ ಕಾರ್ಯಕರ್ತ ಎಂಬಂತೆ ಬಿಂಬಿಸುವುದು ಸರಿಯಲ್ಲ. ಕೇಸರಿ ನಮಗೆ ಪವಿತ್ರವಾದುದು, ಕೇಸರಿ ಹಾಕಿದವರು ಅದರ ಗೌರವ ಕಾಪಾಡಿದಾಗ ಮಾತ್ರ ಅದರ ಮೌಲ್ಯ ಉಳಿಯಲು ಸಾಧ್ಯ  ಎಂದು ಗೌತಮ್ ಹೇಳಿಕೆ ನೀಡಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.