• Home  
  • ಮಜೂರು ಗ್ರಾ.ಪಂ : 2025-26 ನೇ ಸಾಲಿನ ಗ್ರಾಮ ಪಂಚಾಯತ್‌ ಮಟ್ಟದ ಕೆಡಿಪಿ ಸಭೆ (Mazur Village: 2025-26 Village Panchayat Level KDP Meeting)
- ಕಾಪು ತಾಲೂಕು ಆಡಳಿತ

ಮಜೂರು ಗ್ರಾ.ಪಂ : 2025-26 ನೇ ಸಾಲಿನ ಗ್ರಾಮ ಪಂಚಾಯತ್‌ ಮಟ್ಟದ ಕೆಡಿಪಿ ಸಭೆ (Mazur Village: 2025-26 Village Panchayat Level KDP Meeting)

Share: ಮಜೂರು ಗ್ರಾ.ಪಂ : 2025-26 ನೇ ಸಾಲಿನ ಗ್ರಾಮ ಪಂಚಾಯತ್‌ ಮಟ್ಟದ ಕೆಡಿಪಿ ಸಭೆ ಮಜೂರು ಗ್ರಾ.ಪಂ ಅಧ್ಯಕ್ಷ ಪ್ರಸಾದ್‌ ಶೆಟ್ಟಿ ವಳದೂರು ಅಧ್ಯಕ್ಷತೆ ವಹಿಸಿದ್ದರು (Majuru) ಮಜೂರು: ಮಜೂರು ಗ್ರಾಮ ಪಂಚಾಯತಿನ  2025-26 ನೇ ಸಾಲಿನ ಗ್ರಾಮ ಪಂಚಾಯತ್‌ ಮಟ್ಟದ ಕರ್ನಾಟಕ ಅಭಿವೃದ್ದಿ ಕಾರ್ಯಕ್ರಮ (20 ಅಂಶ)  ಪ್ರಗತಿ ಪರಿಶೀಲನಾ ತ್ರೈಮಾಸಿಕ ಕೆಡಿಪಿ ಸಭೆಯು ದಿನಾಂಕ 19-01-2026 ರಂದು ಮಜೂರು ಗ್ರಾಮ ಪಂಚಾಯತ್‌ ಸಭಾಭವನದಲ್ಲಿ ನೆರವೇರಿತು.   ಮಜೂರು ಗ್ರಾಮ ಪಂಚಾಯತ್‌  ಅಧ್ಯಕ್ಷ ಪ್ರಸಾದ್‌ […]

(Majuru) ಮಜೂರು: ಮಜೂರು ಗ್ರಾಮ ಪಂಚಾಯತಿನ  2025-26 ನೇ ಸಾಲಿನ ಗ್ರಾಮ ಪಂಚಾಯತ್‌ ಮಟ್ಟದ ಕರ್ನಾಟಕ ಅಭಿವೃದ್ದಿ ಕಾರ್ಯಕ್ರಮ (20 ಅಂಶ)  ಪ್ರಗತಿ ಪರಿಶೀಲನಾ ತ್ರೈಮಾಸಿಕ ಕೆಡಿಪಿ ಸಭೆಯು ದಿನಾಂಕ 19-01-2026 ರಂದು ಮಜೂರು ಗ್ರಾಮ ಪಂಚಾಯತ್‌ ಸಭಾಭವನದಲ್ಲಿ ನೆರವೇರಿತು.

  ಮಜೂರು ಗ್ರಾಮ ಪಂಚಾಯತ್‌  ಅಧ್ಯಕ್ಷ ಪ್ರಸಾದ್‌ ಶೆಟ್ಟಿ ವಳದೂರುರವರು ಅಧ್ಯಕ್ಷತೆ ವಹಿಸಿದ್ದರು.

   ಮೆಸ್ಕಾಂ ಇಲಾಖೆ, ಪಶು ಸಂಗೋಪನಾ ಇಲಾಖೆ, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕಂದಾಯ ಇಲಾಖೆ, ಗ್ರಂಥಾಲಯ, ಕಾಪು ಸಿ.ಎ. ಬ್ಯಾಂಕ್‌, ಹಾಲು ಉತ್ಪಾದಕರ ಸಹಕಾರಿ ಸಂಘ, ಸಂಜೀವಿನಿ ಒಕ್ಕೂಟದ MBK, ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ವಿಭಾಗದ ಸಹಾಯಕ ಇಂಜಿನಿಯರ್‌, ವಾರಾಹಿ ಯೋಜನೆಯ ಇಂಜಿನಿಯರ್ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದು, ಇಲಾಖಾವಾರು ಪ್ರಗತಿಯ ಬಗ್ಗೆ ಚರ್ಚಿಸಲಾಯಿತು.

  ವರದಿ ಸಾಲಿನಲ್ಲಿ ಎರಡು ತಿಂಗಳು ಮಾತ್ರ ಉಳಿದಿದ್ದು, ಪ್ರತಿಶತ 100 ಗುರಿ ಪ್ರಗತಿಯನ್ನು ಸಾಧಿಸುವಂತೆ ಅಧಿಕಾರಿಗಳಿಗೆ ಸಭೆಯಲ್ಲಿ ಸೂಚಿಸಲಾಯಿತು.

ಮಜೂರು ಗ್ರಾಮ ಪಂಚಾಯತ್‌ ಉಪಾಧ್ಯಕ್ಷೆ ಶ್ರೀಮತಿ ಮಂಜುಳಾ ಆಚಾರ್ಯ, ಗ್ರಾ.ಪಂ ಸದಸ್ಯರಾದ ಸಂದೀಪ್‌ ರಾವ್‌, ಭಾಸ್ಕರ, ಸಹನಾ ತಂತ್ರಿ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

  ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ವಿಲಾಸಿನಿಯವರು ಸ್ವಾಗತಿಸಿ, ವಂದಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.