ಬಿಜೆಪಿ ಅಭ್ಯರ್ಥಿ ಕೋಟ ಪೂಜಾರಿಯವರ ಮತಬೇಟೆ ಶುರು: ಬಟ್ಟೆ ಮಳಿಗೆಯಲ್ಲಿ ಮತಯಾಚನೆ
ಉಡುಪಿ: ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ (Kota Srinivasa Poojary) ಅವರು ಅಧಿಕೃತವಾಗಿ ಮತ ಬೇಟೆಗೆ ಇಳಿದಿದ್ದಾರೆ.
ಉಡುಪಿಯ ಪ್ರಸಿದ್ಧ ಬಟ್ಟೆ ಮಳಿಗೆಯೊಂದಕ್ಕೆ ತೆರಳಿದ ಕೋಟ, ಅಲ್ಲಿ ಉದ್ಯೋಗಿಗಳ ಜೊತೆ ಮತಯಾಚನೆ ನಡೆಸಿದರು.
ಉಡುಪಿ ಶಾಸಕ ಸುವರ್ಣ ಅವರು ಕೋಟ ಅವರಿಗೆ ಸಾಥ್ ನೀಡಿದರು.
ಕೆಲಹೊತ್ತು ಮಳಿಗೆಯ ನೂರಾರು ಸಿಬ್ಬಂದಿಗಳ ಜೊತೆ ಮಾತನಾಡಿದ ಬಿಜೆಪಿ ಅಭ್ಯರ್ಥಿ ಕೋಟ, ತಮಗೆ ಬೆಂಬಲ ನೀಡುವಂತೆ ಮನವಿ ಮಾಡಿದರು. ಮಳಿಗೆಯ ಮಾಲಕರು ಮತ್ತು ಸಿಬ್ಬಂದಿಗಳ ಜೊತೆ ಕೆಲಹೊತ್ತು ಹರಟೆ ಹೊಡೆದರು.
ಉಡುಪಿ ಶಾಸಕ ಯಶ್ ಪಾಲ್ ಸುವರ್ಣ(Udupi MLA Yashpal Suvarna), ಸ್ಥಳೀಯ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಈ ಸಂದರ್ಭ ಉಪಸ್ಥಿತರಿದ್ದರು.

