ಜ.31, ಫೆ.1 : ಪಡುಬಿದ್ರಿ ಯುವವಾಹಿನಿಯಿಂದ ಬಿಲ್ಲವ ಮಹಿಳಾ ಕ್ರಿಕೆಟ್ ಪ್ರೀಮಿಯರ್ ಲೀಗ್
ಹೆಜಮಾಡಿಯ ಬಸ್ತಿಪಡ್ಡು ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯಾಟ
(Kaup) ಕಾಪು : ಯುವವಾಹಿನಿ ಪಡುಬಿದ್ರಿ ಘಟಕದ ಾಯೋಜನೆಯಲ್ಲಿ ಜ. 31, ಫೆ.1ರಂದು ಹೆಜಮಾಡಿಯ ಬಸ್ತಿಪಡ್ಡು ರಾಜೀವ್ ಗಾಂಧಿ ಕ್ರೀಡಾಂಗಣ ದಲ್ಲಿ ಬಿಲ್ಲವ ಪ್ರೀಮಿಯರ್ ಲೀಗ್-2026 ಮಹಿಳಾ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ ಎಂದು ಪಡುಬಿದ್ರಿ ಬಿಲ್ಲವ ಸಂಘದ ಅಧ್ಯಕ್ಷ ವೈ. ಸುಧೀರ್ ಕುಮಾರ್ ಹೇಳಿದ್ದಾರೆ.
ಕಾಪು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.
ದುಬೈ, ಕುವೈಟ್ 2, ಬೆಂಗಳೂರು, ಕೊಲ್ಯ, ಕಾರ್ಕಳ, ಪಡುಬಿದ್ರಿ ಮತ್ತು ಹೆಜಮಾಡಿಯ ಆಯ್ದ 8 ಮಹಿಳಾ ತಂಡಗಳು ಭಾಗವಹಿಸುವ ಲೀಗ್ ಮಾದರಿ ಕ್ರಿಕೆಟ್ ಪಂದ್ಯಾವಳಿಯ ಪ್ರತಿಯೊಂದು ತಂಡದಲ್ಲೂ ಇತರ ಸಮಾಜದ ಐವರು ಮಹಿಳಾ ಕ್ರಿಕೆಟಿಗರಿಗೆ ಅವಕಾಶ ಕಲ್ಪಿಸಲಾಗಿದೆ. ಗ್ರಾಮೀಣ ಮಹಿಳಾ ಕ್ರಿಕೆಟ್ ಪ್ರತಿಭೆಗಳಿಗೆ ಮುನ್ನೆಲೆಗೆ ಬರಲು ಉತ್ತಮ ಅವಕಾಶ ಕಲ್ಪಿಸಲಾಗಿದೆ ಎಂದರು.
ಜ. 31ರಂದು ಬೆಳಗ್ಗೆ 10ಕ್ಕೆ ಯುವ ವಾಹಿನಿ ಪಡುಬಿದ್ರಿ ಘಟಕದ ಅಧ್ಯಕ್ಷ ವಿಧಿತ್ ಪೂಜಾರಿ ಕರ್ನಿರೆ ಅಧ್ಯಕ್ಷತೆಯಲ್ಲಿ ಅಂತಾರಾಷ್ಟ್ರೀಯ ಕ್ರೀಡಾಪಟು ರಕ್ಷಾ ಪೂಜಾರಿ ಕಾರ್ಕಳ ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದಾರೆ.
ಮಾಜಿ ಸಚಿವ ವಿನಯಕುಮಾರ್ ಸೊರಕೆ, ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಮಹಿಳಾ ವಿಭಾಗದ ಅಧ್ಯಕ್ಷೆ ಗೀತಾಂಜಲಿ ಸುವರ್ಣ, ಭಾರತ್ ಕೋ- ಆಪರೇಟಿವ್ ಬ್ಯಾಂಕಿನ ಅಧ್ಯಕ್ಷ ಸೂರ್ಯಕಾಂತ್ ಜೆ. ಸುವರ್ಣ ಉಪಸ್ಥಿತರಿರುವರು.
ಫೆ.1ರಂದು ಸಂಜೆ 6 ಗಂಟೆಗೆ ನಡೆ ಯುವ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಯುವ ವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಡು, ಅಖಿಲ ಭಾರತ ಬಿಲ್ಲವರ ಮಹಿಳಾ ಸಂಘದ ಅಧ್ಯಕ್ಷೆ ಸುಮಲತಾ ಎನ್. ಸುವರ್ಣ ಮತ್ತು ಗಣ್ಯರು ಭಾಗವಹಿಸಲಿದ್ದಾರೆ.
ಲೀಗ್ ಮಾದರಿಯಲ್ಲಿ ತಲಾ 6 ಓವರ್ ಗಳ ಪಂದ್ಯ ನಡೆಯಲಿದ್ದು, ವಿಜೇತರಿಗೆ ಪ್ರಥಮ ಪ್ರಶಸ್ತಿ ಸಹಿತ ನಗದು 1 ಲಕ್ಷ ರೂ., ದ್ವಿತೀಯ 50 ಸಾವಿರ ರೂ., ತೃತೀಯ 25 ಸಾವಿರ ರೂ. ಜತೆಗೆ ಸರಣಿ ಶ್ರೇಷ್ಠರಿಗೆ ನಗದು 20 ಸಾವಿರ, ಅತ್ಯುತ್ತಮ ಬ್ಯಾಟರ್ ನಗದು 10 ಸಾವಿರ ರೂ., ಅತ್ಯುತ್ತಮ ಬೌಲರ್ ನಗದು 10 ಸಾವಿರ ವೈಯಕ್ತಿಕ ಬಹುಮಾನ ಗಳಿವೆ.
ಪತ್ರಿಗೋಷ್ಠಿಯಲ್ಲಿ ಯುವವಾಹಿನಿ ಪಡುಬಿದ್ರಿ ಘಟಕದ ಅಧ್ಯಕ್ಷ ವಿಧಿತ್ ಪೂಜಾರಿ ಕರ್ನಿರೆ, ಕುಮಾರಿ ಯಶೋದಾ ಪೂಜಾರಿ, ರವಿರಾಜ್ ಕೋಟ್ಯಾನ್ ಮತ್ತು ಅಶೋಕ್ ಪೂಜಾರಿ ಉಪಸ್ಥಿತರಿದ್ದರು.

