• Home  
  • ಬೆಂಗಳೂರಿನಲ್ಲಿ ರಸ್ತೆ ಅಪಘಾತಕ್ಕೆ ಅಜಿಲಮೊಗರಿನ ನವವಿವಾಹಿತ ಮೃತ್ಯು (Newly wed from Ajilamogar dies in road accident in Bengaluru) 
- ಅಪಘಾತ

ಬೆಂಗಳೂರಿನಲ್ಲಿ ರಸ್ತೆ ಅಪಘಾತಕ್ಕೆ ಅಜಿಲಮೊಗರಿನ ನವವಿವಾಹಿತ ಮೃತ್ಯು (Newly wed from Ajilamogar dies in road accident in Bengaluru) 

Share: ಬೆಂಗಳೂರಿನಲ್ಲಿ ರಸ್ತೆ ಅಪಘಾತಕ್ಕೆ ಅಜಿಲಮೊಗರಿನ ನವವಿವಾಹಿತ ಮೃತ್ಯು ಬಂಟ್ವಾಳ ಕುಂಟಾಲಪಳಿಕೆ–ಕೆಳಗಿನ ಮನೆ ನಿವಾಸಿ ದಿ. ಅಹಮದ್ ರವರ ಮಗ ಹಾರಿಸ್ ಮೃತ ಯುವಕ (Bantwala) ಬಂಟ್ವಾಳ: ಬೆಂಗಳೂರಿನ ಕೂಡ್ಲು ಗೇಟ್ ಸಮೀಪ ನಡೆದ ರಸ್ತೆ ಅಪಘಾತದಲ್ಲಿ ಬಂಟ್ವಾಳ ತಾಲೂಕಿನ ನವ ವಿವಾಹಿತ ಯುವಕನೋರ್ವ ದಾರುಣವಾಗಿ ಮೃತಪಟ್ಟ ಘಟನೆ ಮಂಗಳವಾರ ಸಂಜೆ ನಡೆದಿದೆ.     ಮೃತ ಯುವಕನನ್ನು ಬಂಟ್ವಾಳ ತಾಲೂಕಿನ ಅಜಿಲಮೊಗರು ಸಮೀಪದ ಕುಂಟಾಲಪಳಿಕೆ-ಕೆಳಗಿನ ಮನೆ ನಿವಾಸಿ ದಿ. ಅಹಮದ್ ಎಂಬವರ ಪುತ್ರ ಮುಹಮ್ಮದ್ ಹಾರಿಸ್ (34) […]

(Bantwala) ಬಂಟ್ವಾಳ: ಬೆಂಗಳೂರಿನ ಕೂಡ್ಲು ಗೇಟ್ ಸಮೀಪ ನಡೆದ ರಸ್ತೆ ಅಪಘಾತದಲ್ಲಿ ಬಂಟ್ವಾಳ ತಾಲೂಕಿನ ನವ ವಿವಾಹಿತ ಯುವಕನೋರ್ವ ದಾರುಣವಾಗಿ ಮೃತಪಟ್ಟ ಘಟನೆ ಮಂಗಳವಾರ ಸಂಜೆ ನಡೆದಿದೆ. 

   ಮೃತ ಯುವಕನನ್ನು ಬಂಟ್ವಾಳ ತಾಲೂಕಿನ ಅಜಿಲಮೊಗರು ಸಮೀಪದ ಕುಂಟಾಲಪಳಿಕೆ-ಕೆಳಗಿನ ಮನೆ ನಿವಾಸಿ ದಿ. ಅಹಮದ್ ಎಂಬವರ ಪುತ್ರ ಮುಹಮ್ಮದ್ ಹಾರಿಸ್ (34) ಎಂದು ಗುರುತಿಸಲಾಗಿದೆ.

  ಬೆಂಗಳೂರಿನ ಎ.ಸಿ ಸಂಸ್ಥೆಯೊಂದರಲ್ಲಿ ಮೆಕ್ಯಾನಿಕ್ ಆಗಿದ್ದ  ಹಾರಿಸ್ ಮಂಗಳವಾರ ಸಂಜೆ ಕೆಲಸದ ನಿಮಿತ್ತ ತನ್ನ ಸಹೋದ್ಯೋಗಿ ಜೊತೆಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಟಾಟಾ ಏಸ್ ಗೂಡ್ಸ್ ವಾಹನ ಹಿಂದಿನಿಂದ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

    ರಸ್ತೆಗೆಸೆಯಲ್ಪಟ್ಟ ಹಾರಿಸ್ ಅಪಘಾತದ ತೀವ್ರತೆಗೆ ಅವರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟರೆ, ಸಹಸವಾರ ಸಹೋದ್ಯೋಗಿ ಒಡಿಶಾ ಮೂಲದ ವ್ಯಕ್ತಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ. 

   ಮೃತ ಹಾರಿಸ್ ಅವರ ಹೆತ್ತವರು ಹಾಗೂ ಓರ್ವ ಸಹೋದರ ಕೆಲ ತಿಂಗಳ ಹಿಂದೆಯಷ್ಠೆ ಅವಧಿಯಲ್ಲಿ ಮೃತಪಟ್ಟಿದ್ದರು.ಇವರ ಇನ್ನೋರ್ವ ಸಹೋದರ ಕೂಡಾ ಬೆಂಗಳೂರಿನಲ್ಲೇ ಜ್ಯುವೆಲ್ಲರಿ ಅಂಗಡಿಯೊಂದರಲ್ಲಿ ಉದ್ಯೋಗದಲ್ಲಿದ್ದಾರೆ.

   ಹಾರಿಸ್ ಗೆ  ಆರು ತಿಂಗಳ ಹಿಂದೆಯಷ್ಟೇ ಬಂಟ್ವಾಳ ತಾಲೂಕಿನ ಕುಕ್ಕಾಜೆ ಮೂಲದ ಯುವತಿಯನ್ನು ವಿವಾಹವಾಗಿದ್ದು, ಮನೆಯಲ್ಲಿ ಯಾರೂ ಇಲ್ಲದ್ದರಿಂದ ಪತ್ನಿಯನ್ನೂ ತನ್ನ ಜೊತೆ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದ. ಕಳೆದ ವಾರ  ಅಜಿಲಮೊಗರು ಉರೂಸ್ ಕಾರ್ಯಕ್ರಮದ ಹಿನ್ನಲೆಯಲ್ಲಿ ಪತ್ನಿಯೊಂದಿಗೆ ಊರಿಗೆ ಬಂದಿದ್ದ ಹಾರಿಸ್ ಪತ್ನಿಯನ್ನು ಮನೆಯಲ್ಲೇ ಬಿಟ್ಟು ಮೂರು ದಿನಗಳ ಹಿಂದಷ್ಟೇ ಮತ್ತೆ ಬೆಂಗಳೂರಿಗೆ ವಾಪಾಸ್ ಆಗಿದ್ದರೆನ್ನಲಾಗಿದೆ.

   ಮೃತದೇಹವನ್ನು ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಬುಧವಾರ ಮುಂಜಾನೆ ವೇಳೆ ಊರಿಗೆ ತರಲಾಗಿದ್ದು, ಪೆರಿಯಪಾದೆ ಜುಮಾ ಮಸೀದಿಯ ದಫನ ಭೂಮಿಯಲ್ಲಿ ತಂದೆ-ತಾಯಿ ಹಾಗೂ ಸಹೋದರ ಮೂವರ ದಫನ ನಡೆಸಿದ ಸ್ಥಳದ ಪಕ್ಕದಲ್ಲೇ ಈತನ ದಫನ ಕ್ರಿಯೆ ನಡೆಸಲಾಗಿದೆ ಎಂದು ತಿಳಿದು ಸ್ಥಳೀಯರು ಮಾಹಿತಿ ನೀಡಿದ್ದಾರೆ. 

    ಘಟನೆಗೆ ಸಂಬಂಧ ಎಚ್‌ ಎಸ್‌ ಆರ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.