ಬೆಂಗಳೂರು: ಕುಮಾರ್ ಪೆರ್ನಾಜೆಯವರಿಗೆ ಜನತಾ ಅವಾರ್ಡ್ 2026 ಪ್ರಶಸ್ತಿ ಪ್ರದಾನ
ಬೆಂಗಳೂರು ಕೆಎಲ್ಇ ಕಾನೂನು ಕಾಲೇಜ್ ಬಳಿಯ ಅರಮನೆ ವೆನ್ಯುವಿನಲ್ಲಿ ಸನ್ಮಾನ
(Putturu) ಪುತ್ತೂರು: ಪೆರ್ನಾಜೆ: ಜನತಾ ನ್ಯೂಸ್ ಕನ್ನಡ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಕುಮಾರ ಪೆರ್ನಾಜೆ ಅವರನ್ನು ಬೆಂಗಳೂರಿನ ನಾಗರಬಾವಿ ಕೆಎಲ್ಇ ಕಾನೂನು ಕಾಲೇಜ್ ಹತ್ತಿರ ಅರಮನೆ ವೆನ್ಯು ನಲ್ಲಿ ಸನ್ಮಾನಿಸಲಾಯಿತು.
ಜೇನು ಕೃಷಿ ಕ್ಷೇತ್ರದಲ್ಲಿನ ಸಾಧನೆಗಳು ಮತ್ತು ಸಮಾಜದಲ್ಲಿ ಗಣನೀಯ ಸೇವೆ ಸಾಧನೆ ಮತ್ತು ಪ್ರತಿಭೆಯನ್ನು ಪರಿಗಣಿಸಿ ಜನತಾ ಕೃಷಿ ರತ್ನವನ್ನು ಆರ್ಯನ್ ಭಾರದ್ವಾಜ್ ಜನತಾ ನ್ಯೂಸ್ ಮ್ಯಾನೇಜಿಂಗ್ ಡೈರೆಕ್ಟರ್ ರವರು ಕುಮಾರ್ ಪೆರ್ನಾಜೆಯವರಿಗೆ ಪ್ರಶಸ್ತಿ ಪ್ರಧಾನಿಸಿದರು.
ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಶಿವರಾಮೇಗೌಡ ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಜನತಾ ನ್ಯೂಸ್ ಮುಖ್ಯ ಸಂಪಾದಕ, ರಾಜ್ಯಾಧ್ಯಕ್ಷ ಕೆ ಎಸ್ ಲಿಂಗೇಗೌಡ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಶ್ರೀಮತಿ ಮೋನಿಷಾ ಆರ್ಯನ್ ಭಾರದ್ವಾಜ್, ಪಿ ಎಸ್ ಭಟ್ ನೂಜಿ ಪುತ್ತೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶೋಭಾ ಹಾಗೂ ಹರಿಚೇತ್ ನಿರೂಪಿಸಿದರು.

