ಬೆಳಪುವಿನಲ್ಲಿ ಭಾರೀ ಮಳೆಗೆ ಮನೆಯ ಗೋಡೆ ಕುಸಿದು ಮಹಿಳೆಗೆ ಗಾಯ
ಕಾಪು ತಹಶಿಲ್ದಾರ್ ಡಾ. ಪ್ರತಿಭಾ ಆರ್ ಸ್ಥಳಕ್ಕೆ ಭೇಟಿ, ಸಾಂತ್ವನ
(Kaup) ಕಾಪು : ಭಾರೀ ಮಳೆಯಿಂದಾಗಿ ಮಹಿಳೆಯೋರ್ವರ ಮೇಲೆ ಮನೆಯ ಗೋಡೆ ಕುಸಿದು ಗಾಯಗೊಂಡ ಘಟನೆ ಬೆಳಪು ಗ್ರಾಮದ ಮಲಂಗೋಳಿ ಎಂಬಲ್ಲಿ ಘಟಿಸಿದೆ.
ಗಾಯಗೊಂಡ ಶೋಭಾ ಪೂಜಾರ್ತಿ ಮಂಚದ ಮೇಲೆ ಮಲಗಿದ್ದ ಸಂದರ್ಭ ಅವರ ಮೇಲೆ ಮನೆಯ ಗೋಡೆ ಕುಸಿದಿದೆ.
ಭಾರೀ ಸದ್ದಿಗೆ ಮನೆಯ ಇನ್ನೊಂದು ಕೋಣೆಯಲ್ಲಿ ಮಲಗಿದ್ದ ಅಪ್ಪ, ಮಗಳು ಹಾಗೂ ನೆರೆಮನೆಯವರು ಅವಶೇಷಗಳಡಿ ಇದ್ದ ಶೋಭಾ ಪೂಜಾರ್ತಿಯವರನ್ನು ತಕ್ಷಣ ಹೊರಕ್ಕೆಳೆದು ಆರೈಕೆ ಮಾಡಿದ್ದಾರೆ.
ಗಾಯಗೊಂಡ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.
ತಹಶಿಲ್ದಾರ್ ಭೇಟಿ : ಕಾಪು ತಹಶಿಲ್ದಾರ್ ಡಾ. ಪ್ರತಿಭಾ ಆರ್ ಸ್ಥಳಕ್ಕೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿ ಪರಿಹಾರ ನೀಡುವ ಭರವಸೆ ನೀಡಿದ್ದಾರೆ.
ಈ ಸಂದರ್ಭ ರೆವಿನ್ಯೂ ಇನ್ಸ್ಪೆಕ್ಟರ್ ಇಜ್ಜಾರ್ ಸಾಬಿರ್, ಗ್ರಾಮಾಡಳಿತಾಧಿಕಾರಿ ಲೋಕನಾಥ್, ಸ್ಥಳೀಯ ಗ್ರಾಮ ಪಂಚಾಯತಿ ಸದಸ್ಯರು ಉಪಸ್ಥಿತರಿದ್ದರು.

