• Home  
  • ಬೆಳಪುವಿನಲ್ಲಿ ವಿವಾಹಿತ ಮಹಿಳೆ ನಾಪತ್ತೆ.
- Uncategorised

ಬೆಳಪುವಿನಲ್ಲಿ ವಿವಾಹಿತ ಮಹಿಳೆ ನಾಪತ್ತೆ.

Share:  ಶಿರ್ವ:  ಕಾಪುವಿನ ಬಟ್ಟೆ ಅಂಗಡಿಗೆ ಕೆಲಸಕ್ಕೆ ಹೋಗುತ್ತೇನೆಂದು ಹೋದ ವಿವಾಹಿತ ಮಹಿಳೆ ನಾಪತ್ತೆ ಆದ ಬಗ್ಗೆ ಶಿರ್ವ ಠಾಣೆಯಲ್ಲಿ ದೂರು ದಾಖಲಾಗಿದೆ. ಬೆಳಪು ಅಂಬೇಡ್ಕರ್ ರಸ್ತೆ ಬಳಿಯ ನಿವಾಸಿ ಸೌಜನ್ಯ (22) ನಾಪತ್ತೆ ಆದವರು. ಸೌಜನ್ಯ ಮನೆಗೆ ಬಾರದೆ ಕಾಣೆಯಾದ ಘಟನೆ ಜೂನ್ 17ರಂದು ನಡೆದಿದೆ. ಸುಮಾರು ಒಂದೂವರೆ ವರ್ಷದ ಹಿಂದೆ ಮಂಗಳೂರು ಮೂಲದ ಸುಜಿತ್ ನೊಂದಿಗೆ ಮದುವೆಯಾದ ಈಕೆ ಗಂಡನ ಮನೆಯಲ್ಲಿ ಒಂದು ತಿಂಗಳು ಇದ್ದು, ನಂತರ ತಾಯಿ ಮನೆ ಬೆಳಪುವಿಗೆ ಬಂದು ವಾಸವಾಗಿದ್ದರು. […]

 ಶಿರ್ವ:  ಕಾಪುವಿನ ಬಟ್ಟೆ ಅಂಗಡಿಗೆ ಕೆಲಸಕ್ಕೆ ಹೋಗುತ್ತೇನೆಂದು ಹೋದ ವಿವಾಹಿತ ಮಹಿಳೆ ನಾಪತ್ತೆ ಆದ ಬಗ್ಗೆ ಶಿರ್ವ ಠಾಣೆಯಲ್ಲಿ ದೂರು ದಾಖಲಾಗಿದೆ.

ಬೆಳಪು ಅಂಬೇಡ್ಕರ್ ರಸ್ತೆ ಬಳಿಯ ನಿವಾಸಿ ಸೌಜನ್ಯ (22) ನಾಪತ್ತೆ ಆದವರು.

ಸೌಜನ್ಯ ಮನೆಗೆ ಬಾರದೆ ಕಾಣೆಯಾದ ಘಟನೆ ಜೂನ್ 17ರಂದು ನಡೆದಿದೆ.

ಸುಮಾರು ಒಂದೂವರೆ ವರ್ಷದ ಹಿಂದೆ ಮಂಗಳೂರು ಮೂಲದ ಸುಜಿತ್ ನೊಂದಿಗೆ ಮದುವೆಯಾದ ಈಕೆ ಗಂಡನ ಮನೆಯಲ್ಲಿ ಒಂದು ತಿಂಗಳು ಇದ್ದು, ನಂತರ ತಾಯಿ ಮನೆ ಬೆಳಪುವಿಗೆ ಬಂದು ವಾಸವಾಗಿದ್ದರು. ಜು. 17ರಂದು ಬೆಳಿಗ್ಗೆ 9:00ಗೆ ಊಟದ ಬುತ್ತಿ ತೆಗೆದುಕೊಂಡು ಕಾಪುವಿನ ಬಟ್ಟೆ ಅಂಗಡಿಗೆ ಕೆಲಸಕ್ಕೆ ಹೋದ ಸೌಜನ್ಯ ಕೆಲಸಕ್ಕೂ ಹೋಗದೆ, ಸಂಜೆ ಮನೆಗೂ ಬಾರದೇ ಇದ್ದು ಕಾಣೆಯಾಗಿದ್ದಾರೆ.

  ಆಸುಪಾಸಿನಲ್ಲಿ ಹುಡುಕಾಡಿ ಸಂಬಂಧಿಕರಲ್ಲಿ ವಿಚಾರಿಸಿದಾಗಲೂ ಪತ್ತೆಯಾಗದೆ  ಇದ್ದು, ಆಕೆಯ ತಾಯಿ ಮಂಜುಳಾ ನೀಡಿದ ದೂರನಂತೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.