ಬೆಳಪು ಅಬ್ದುಲ್ ಶೂಕುರ್ ಸಾಹೇಬ್ ನಿಧನ
ಇಂದು ಮುಂಜಾನೆ ಉಸಿರಾಟದ ತೊಂದರೆಯಿಂದ ನಿಧನ
(Kaup) ಕಾಪು : ಸಾಮಾಜಿಕ ಕಾರ್ಯಕರ್ತ ಬೆಳಪು ನಿವಾಸಿ ಅಬ್ದುಲ್ ಶೂಕುರ್ ಸಾಹೇಬ್(66)ರವರು ಬುಧವಾರ ಮುಂಜಾನೆ ಉಸಿರಾಟದ ತೊಂದರೆಯಿಂದ ನಿಧನ ಹೊಂದಿದರು.
ಇವರು ಸಹೋದರ ಅನ್ವರ್ ಆಲಿ ಕಾಪು, ಪತ್ನಿ, ಒಂದು ಹೆಣ್ಣು 3 ಗಂಡು ಮಕ್ಕಳು ಮತ್ತು ಅಪಾರ ಬಂಧುಗಳನ್ನು, ಕುಟುಂಬಿಕರನ್ನು ಮತ್ತು ಹಿತೈಷಿಗಳನ್ನು ಅಗಲಿದ್ದಾರೆ.

