• Home  
  • ಶಿರ್ವ : ದ್ವಿಚಕ್ರ ವಾಹನ ಕಳವು ; ಆರೋಪಿ ಪೋಲಿಸ್ ವಶ (Shirva: Two-wheeler stolen; accused arrested by police)
- ಅಪರಾಧ

ಶಿರ್ವ : ದ್ವಿಚಕ್ರ ವಾಹನ ಕಳವು ; ಆರೋಪಿ ಪೋಲಿಸ್ ವಶ (Shirva: Two-wheeler stolen; accused arrested by police)

Share: ಶಿರ್ವ : ದ್ವಿಚಕ್ರ ವಾಹನ ಕಳವು ; ಆರೋಪಿ ಪೋಲಿಸ್ ವಶ ಅಂತರ್‌ ಜಿಲ್ಲಾ ಕಳ್ಳ ಓಂ ಕೋಲಾರ ಎಂಬಾತ ಕಳ್ಳತನದ ಆರೋಪಿ  (Shirva) ಶಿರ್ವ : ಶಿರ್ವ ಸಹಿತ ಕಾಪು, ಬೆಂಗಳೂರು ನಗರ ಠಾಣಾ ವ್ಯಾಪ್ತಿಯಲ್ಲಿ ಐದು ದ್ವಿಚಕ್ರ ವಾಹನಗಳನ್ನು ಕದ್ದ ಆರೋಪಿಯನ್ನು ಶಿರ್ವ ಪೋಲಿಸರು ಬಂಧಿಸಿದ್ದಾರೆ.    ಡಿ. 5ರಂದು ಬಂಟಕಲು ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ ಪಾರ್ಕಿಂಗ್ ಮಾಡಿದ್ದ ವಾಹನ ಕಳವಾದ ಬಗ್ಗೆ ಮಹಿಳೆಯೋರ್ವರು ನೀಡಿದ ದೂರಿನಂತೆ ಶಿರ್ವ ಪೋಲಿಸರು ತನಿಖೆ ಪ್ರಾರಂಭಿಸಿದ್ದರು. […]

ಅಂತರ್‌ ಜಿಲ್ಲಾ ಕಳ್ಳ ಓಂ ಕೋಲಾರ ಎಂಬಾತ ಕಳ್ಳತನದ ಆರೋಪಿ

 (Shirva) ಶಿರ್ವ : ಶಿರ್ವ ಸಹಿತ ಕಾಪು, ಬೆಂಗಳೂರು ನಗರ ಠಾಣಾ ವ್ಯಾಪ್ತಿಯಲ್ಲಿ ಐದು ದ್ವಿಚಕ್ರ ವಾಹನಗಳನ್ನು ಕದ್ದ ಆರೋಪಿಯನ್ನು ಶಿರ್ವ ಪೋಲಿಸರು ಬಂಧಿಸಿದ್ದಾರೆ.

   ಡಿ. 5ರಂದು ಬಂಟಕಲು ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ ಪಾರ್ಕಿಂಗ್ ಮಾಡಿದ್ದ ವಾಹನ ಕಳವಾದ ಬಗ್ಗೆ ಮಹಿಳೆಯೋರ್ವರು ನೀಡಿದ ದೂರಿನಂತೆ ಶಿರ್ವ ಪೋಲಿಸರು ತನಿಖೆ ಪ್ರಾರಂಭಿಸಿದ್ದರು.

   ಶಿರ್ವ ಪೊಲೀಸರಿಂದ ಆರೋಪಿ ಪತ್ತೆಗಾಗಿ ವಿಶೇಷ ತಂಡ ರಚಿಸಿ ಉಡುಪಿ, ಮಲ್ಪೆ ಕಾರ್ಕಳ, ಧರ್ಮಸ್ಥಳ ಕಡೆಗಳಲ್ಲಿ ಸಂಚರಿಸಿ ಆರೋಪಿತ ಓಂ ಕೋಲಾರ ಎಂಬಾತನನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ.

   ಬಂದಿತ ಆರೋಪಿಯಿಂದ ಶಿರ್ವ ಪೊಲೀಸ್ ಠಾಣೆಗೆ ಸಂಬಂದಿಸಿದ ಒಂದು ದ್ವಿಚಕ್ರ ವಾಹನ, ಕಾಪು, ಬೆಂಗಳೂರು ನಗರದಲ್ಲಿನ ಪೊಲೀಸ್ ಠಾಣೆಗಳಿಗೆ ಸಂಬಂದಿಸಿದ ಒಟ್ಟು ಐದು ದ್ವಿ ಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

    ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಹರಿರಾಂ ಶಂಕರ್ ರವರ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ ಎಸ್ ನಾಯ್ಕ್‌, ಕಾರ್ಕಳ ಸಹಾಯಕ ಪೊಲೀಸ್ ಅಧೀಕ್ಷಕರಾದ ಡಾ. ಹರ್ಷ ಪ್ರಿಯಂವದಾರವರ ಹಾಗೂ ಕಾಪು ವೃತ್ತ ನಿರೀಕ್ಷಕ  ಅಜಮತ್ ಆಲಿ ಮೇಲುಸ್ತುವಾರಿಯಲ್ಲಿ ಶಿರ್ವ ಪೊಲೀಸ್ ಠಾಣಾಧಿಕಾರಿರವರ ನೇತತೃತ್ವ ತಂಡ ಕಾರ್ಯಾಚರಣೆ ನಡೆಸಿದೆ.

    ಈ ಕಾರ್ಯಾಚರಣೆಯಲ್ಲಿ ಶಿರ್ವ ಠಾಣಾ ಉಪನಿರೀಕ್ಷಕ ಮಂಜುನಾಥ ಮರಬದ, ಲೋಹಿತ್ ಕುಮಾರ್ ಸಿ ಎಸ್, ಸಿಬ್ಬಂದಿಯವರಾದ ಮಂಜುನಾಥ ಅಡಿಗ, ದಯಾನಂದ ಪ್ರಭು, ಅನ್ವ‌ರ್ ಅಲಿ, ಸಿದ್ದರಾಯಪ್ಪ, ಮಂಜುನಾಥ ಹೊಸಮನಿ, ಕಿರಣ್, ಶಿವಾನಂದಪ್ಪ, ಬಸವರಾಜ್, ಆರ್ ಡಿಸಿ ವಿಭಾಗದ ದಿನೇಶ್ ರವರು ಭಾಗವಹಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.