(Belapu) ಬೆಳಪು : ಮೌಲನಾ ಅಜಾದ್ ಮಾದರಿ ಶಾಲೆಯ ವಾರ್ಷಿಕ ಕ್ರೀಡಾಕೂಟ
ಬೆಳಪು: ಬೆಳಪುವಿನ ಮೌಲನಾ ಅಜಾದ್ ಮಾದರಿ ಶಾಲೆಯ ವಾರ್ಷಿಕ ಕ್ರೀಡಾಕೂಟವು ಉರ್ದು ಶಾಲೆಯ ಕ್ರೀಡಾಂಗಣದಲ್ಲಿ ನೆರವೇರಿತು.
ಈ ಕ್ರೀಡಾಕೂಟದ ಪಥ ಸಂಚಲನದ ವಂದನಾ ಸ್ವೀಕಾರವನ್ನು ಗೃಹ ರಕ್ಷಕದಳದ ಮಹೇಶ್ ಬೆಳಪುರವರು ಸ್ವೀಕರಿಸಿ ಶುಭ ಹಾರೈಸಿದರು.
ಸಭಾಧ್ಯಕ್ಷತೆಯನ್ನು ಮುಸ್ತಾಕ್ ಬೆಳಪು ಅವರು ವಹಿಸಿದ್ದರು.
ಈ ಕ್ರೀಡಾಕೂಟದ ಉದ್ಘಾಟನೆಯನ್ನು ಬೆಳಪು ಸ್ಪೋರ್ಟ್ಸ್ ಕ್ಲಬ್ ಇದರ ಅಧ್ಯಕ್ಷ ಶಹನವಾಜ್ ಫಾಝಲೂದ್ದಿನ್ ಉದ್ಘಾಟಿಸಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕಾಪು ತಾಲ್ಲೂಕು ಕ್ರೀಡಾಧಿಕಾರಿ ರಿತೇಶ್ ಶೆಟ್ಟಿ, ಮಲ್ಲಾರು ಮೌಲನ ಅಜಾದ್ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ವಿದ್ಯಾ, ಕಾರ್ಕಳ ಮೌಲನಾ ಅಜಾದ್ ಶಾಲೆ ಶಿಕ್ಷಕ ಸಂತೋಷ್, ಜಮಾ ತೇ ಇಸ್ಲಾಂ ಹಿಂದ್ ಕಾಪು ಇದರ ಅಧ್ಯಕ್ಷ ಅನ್ವರ್ ಅಲಿ, ಶಾಹಿದ್, ಫಾರೂಕ್, ರಾಜೇಂದ್ರ, ವೀಣಾ, ಖಾತುನ್ ಬಿ ಭಾಗವಹಿಸಿದ್ದರು.
ನದಾಶ್ ಬಾನು ಸ್ವಾಗತಿಸಿದರು. ನೀಹಾ ನಿರೂಪಿಸಿದರು. ದಾಕ್ಷಾಯಣಿ ಶೆಟ್ಟಿ ವಂದಿಸಿದರು.

