ಬೆಳಪು ಸಹಕಾರಿ ಸಂಘದ ನವೋದಯ ಸ್ವ ಸಹಾಯ ಸಂಘಗಳ ಆಯೋಜನೆಯಲ್ಲಿ ಇಫ್ತಾರ್ ಕೂಟ
ಬೆಳಪು ಡಾ. ದೇವಿಪ್ರಸಾದ್ ಶೆಟ್ಟಿಯವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮ
(Uchila) ಉಚ್ಚಿಲ : ಬೆಳಪು ವ್ಯವಸಾಯ ಸಹಕಾರಿ ಸಂಘ ಪಣಿಯೂರು ಇದರ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ಇವರ ನೇತೃತ್ವದಲ್ಲಿ ನವೋದಯ ಸ್ವ ಸಹಾಯ ಸಂಘಗಳ ವತಿಯಿಂದ ಉಚ್ಚಿಲದ ಸಹಕಾರಿ ಮಹಲ್ ನ ನವೋದಯ ಸಭಾಂಗಣದಲ್ಲಿ ಬುಧವಾರ ಸಂಜೆ ಸೌಹಾರ್ದ ಇಫ್ತಾರ್ ಕೂಟವು ಜರಗಿತು.
ಈ ಸಂದರ್ಭ ಬೆಳಪು ವ್ಯವಸಾಯ ಸಹಕಾರಿ ಸಂಘ ನಿ. ಪಣಿಯೂರು ಇದರ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಶೆಟ್ಟಿಯವರು ಮಾತನಾಡಿ, ನವೋದಯ ಒಕ್ಕೂಟದ ಮೂಲಕ ಮಹಿಳೆಯರಿಗಾಗಿ ಇಫ್ತಾರ್ ಕೂಟ ಆಯೋಜನೆಯು ಸಮಾನತೆ ಸಾರುವ ಉದ್ದೇಶವಾಗಿದೆ. ಧರ್ಮ ಧರ್ಮದ ಆಚರಣೆಗಳು ಸಮಾನತೆ ಮರ್ಮವಾಗಿದೆ. ರಂಜಾನ್ ಸಮಯ ಸಂಪೂರ್ಣ ಉಪವಾಸದ ಮೂಲಕ ಸರ್ವರ ಏಳಿಗೆಗಾಗಿ ಮಾಡುವ ಧಾರ್ಮಿಕ ಕಾರ್ಯಕ್ರಮ. ಇದು ಪ್ರೀತಿ ವಿಶ್ವಾಸ ತ್ಯಾಗದ ಸಂಕೇತ ಎಂದರು.
ಸನ್ಮಾನ : ಹಲವಾರು ಅಪಘಾತ ನಡೆದಾಗ ಜೀವಗಳನ್ನು ಉಳಿಸಲು ಸಹಾಯ ಮಾಡುತ್ತಿರುವ ಸಮಾಜ ಸೇವಕ ಜಲಾಲುದ್ದೀನ್ ಉಚ್ಚಿಲರವರನ್ನು ಸನ್ಮಾನಿಸಲಾಯಿತು.
ಉದ್ಯಮಿ ಗುಲಾಂ ಅಹಮದ್ ಮಾತನಾಡಿ, ಯಾವುದೇ ಸಹಕಾರಿ ಸಂಸ್ಥೆಯಲ್ಲಿ ಇಫ್ತಾರ್ ಆಯೋಜನೆಯಿಲ್ಲ. ಇಂತಹ ಕಾರ್ಯ ಆಯೋಜಿಸಿದ ಬೆಳಪು ವ್ಯವಸಾಯ ಸಹಕಾರಿ ಸಂಘ ಪಣಿಯೂರು ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ದೇವರಿಗೆ ಅಂತ್ಯವಿಲ್ಲ. ಅವನ ಸ್ಮರಣೆಯೇ ಅತಿಯೇಂದ್ರ ಸುಖ. ಸರ್ವರಿಗೂ ಒಳಿತಾಗಲಿ ಎಂದು ಸುಲೇಮಾನ್ ಉಡುಪಿ ಹೇಳಿದರು.
ಈ ಸಂದರ್ಭ ನವೋದಯ ಗುಂಪಿನ ಮೇಲ್ವಿಚಾರಕಿ ಕಾಂತಿ ಆಚಾರ್ಯ, ಕಾಪು ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ಯು ಸಿ ಶೇಖಬ್ಬ, ಕಾಪು ಪುರಸಭಾ ಸದಸ್ಯೆ ರಾಧಿಕಾ, ಬೆಳಪು ವ್ಯವಸಾಯ ಸಹಕಾರಿ ಸಂಘ ನಿ. ಪಣಿಯೂರು ಇದರ ಉಪಾಧ್ಯಕ್ಷರಾದ ದ್ಯುಮಣಿ ಆರ್ ಭಟ್, ನಿರ್ದೇಶಕ ಪಾಂಡು ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಪತ್ರಕರ್ತ ರಾಕೇಶ್ ಕುಂಜೂರು ನಿರೂಪಿಸಿದರು. ಕಾಂತಿ ಆಚಾರ್ಯ ವಂದಿಸಿದರು.

