• Home  
  • ಬೆಳಪು ಹಕ್ಕುಪತ್ರ ಇಲ್ಲದ ನಿವೇಶನಗಳಿಗೆ ತಹಶೀಲ್ದಾರ್ ಭೇಟಿ : ಪರಿಶೀಲನೆ (Tahsildar visits sites without land title deeds: Inspection)
- help - ಕಾಪು ತಾಲೂಕು ಆಡಳಿತ

ಬೆಳಪು ಹಕ್ಕುಪತ್ರ ಇಲ್ಲದ ನಿವೇಶನಗಳಿಗೆ ತಹಶೀಲ್ದಾರ್ ಭೇಟಿ : ಪರಿಶೀಲನೆ (Tahsildar visits sites without land title deeds: Inspection)

Share: ಬೆಳಪು ಹಕ್ಕುಪತ್ರ ಇಲ್ಲದ ನಿವೇಶನಗಳಿಗೆ ತಹಶೀಲ್ದಾರ್ ಭೇಟಿ : ಪರಿಶೀಲನೆ (Belapu) ಬೆಳಪು : ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಬೆಳಪು ಗ್ರಾಮದ ಸರಕಾರಿ ಜಾಗದಲ್ಲಿ ವಾಸಿಸುವ ಬಡವರಿಗೆ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ಪಂಚಾಯತ್ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪುರವರು ತಹಶೀಲ್ದಾರರಿಗೆ ಮನವಿ ಸಲ್ಲಿಸಿ, ಸ್ಥಳ ಪರಿಶೀಲನೆ ನಡೆಸಿ ವಾಸ್ತವಿಕ ತಿಳಿದುಕೊಳ್ಳುವಂತೆ ಕೋರಿದ್ದರು. ಅದರಂತೆ ಗುರುವಾರ ಕಾಪು ತಹಶೀಲ್ದಾರ್‌  ಪ್ರತಿಭಾರವರು ಇಲಾಖಾಧಿಕಾರಿಗಳೊಂದಿಗೆ ಭೇಟಿ ನೀಡಿದರು. ಜನ ನಿಬಿಡ ಪ್ರದೇಶ ಇದಾಗಿದ್ದು, ಪೇಟೆಗೆ ತಾಗಿಕೊಂಡಿರುವ ಜಾಗದಲ್ಲಿ […]

(Belapu) ಬೆಳಪು : ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಬೆಳಪು ಗ್ರಾಮದ ಸರಕಾರಿ ಜಾಗದಲ್ಲಿ ವಾಸಿಸುವ ಬಡವರಿಗೆ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ಪಂಚಾಯತ್ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪುರವರು ತಹಶೀಲ್ದಾರರಿಗೆ ಮನವಿ ಸಲ್ಲಿಸಿ, ಸ್ಥಳ ಪರಿಶೀಲನೆ ನಡೆಸಿ ವಾಸ್ತವಿಕ ತಿಳಿದುಕೊಳ್ಳುವಂತೆ ಕೋರಿದ್ದರು.

ಅದರಂತೆ ಗುರುವಾರ ಕಾಪು ತಹಶೀಲ್ದಾರ್‌  ಪ್ರತಿಭಾರವರು ಇಲಾಖಾಧಿಕಾರಿಗಳೊಂದಿಗೆ ಭೇಟಿ ನೀಡಿದರು.

ಜನ ನಿಬಿಡ ಪ್ರದೇಶ ಇದಾಗಿದ್ದು, ಪೇಟೆಗೆ ತಾಗಿಕೊಂಡಿರುವ ಜಾಗದಲ್ಲಿ ಬಹಳ ವರ್ಷಗಳಿಂದ ವಾಸಿಸುವ ಜನರ ಅಹವಾಲುಗಳನ್ನು ಸ್ವೀಕರಿಸಿದ ತಹಶೀಲ್ದಾರವರು, ಇಲ್ಲಿ ಯಾವುದೇ ಕಾಡಿನ ಸ್ವರೂಪ ಇಲ್ಲದಿರುವುದು, ಜನ ವಾಸಿಸುವ ಮಧ್ಯ ಮಧ್ಯದಲ್ಲಿ ಹಕ್ಕುಪತ್ರ ನೀಡದಿರುವ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದರು.

ಈ ಬಗ್ಗೆ  ಮೇಲಾಧಿಕಾರಿಗಳೊಂದಿಗೆ ಹಾಗೂ ಅರಣ್ಯ ಇಲಾಖೆಯವರೊಂದಿಗೆ ಚರ್ಚಿಸಿ ಶೀಘ್ರದಲ್ಲಿಯೇ ಹಕ್ಕುಪತ್ರ ನೀಡುವ ಭರವಸೆ ನೀಡಿದರು.

ಅನೇಕ ಸಂದರ್ಭಗಳಲ್ಲಿ ‘ಪಂಚಾಯತ್ ಕಾಡು’ ಪಹಣಿಯಲ್ಲಿ ಸರಕಾರವೆಂದು ಬದಲಾಯಿಸಿ ನೀಡಿರುವ ದಾಖಲೆಗಳನ್ನು ತಹಶೀಲ್ದಾರರಿಗೆ ನೀಡಿದ ದೇವಿಪ್ರಸಾದ್ ಶೆಟ್ಟಿಯವರು 3 ಸೆಂಟ್ಸ್ ನಲ್ಲಿ ವಾಸಿಸುವ ಬಡವರಿಗೂ ಅನ್ಯಾಯವಾಗದಂತೆ ಹಕ್ಕುಪತ್ರ ನೀಡಲು ಸಹಕರಿಸಿ ಎಂದು ಪಂಚಾಯತ್ ಪರವಾಗಿ ಮನವಿ ನೀಡಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.