• Home  
  • ಬೈಂದೂರು : ಮಗುಚಿದ ಮೀನುಗಾರಿಕಾದೋಣಿ,ಲೈಫ್‌ ಜಾಕೆಟಿನಿಂದಾಗಿ 9 ಮೀನುಗಾರರು ಪಾರು (Byndoor: Fishing boat capsizes, 9 fishermen escape thanks to life jackets)
- Mansoon - PROBLEMS

ಬೈಂದೂರು : ಮಗುಚಿದ ಮೀನುಗಾರಿಕಾದೋಣಿ,ಲೈಫ್‌ ಜಾಕೆಟಿನಿಂದಾಗಿ 9 ಮೀನುಗಾರರು ಪಾರು (Byndoor: Fishing boat capsizes, 9 fishermen escape thanks to life jackets)

Share:   ಬೈಂದೂರು : ಮಗುಚಿದ  ಮೀನುಗಾರಿಕಾ ದೋಣಿ, ಲೈಫ್‌ ಜಾಕೆಟಿನಿಂದಾಗಿ 9 ಮೀನುಗಾರರು ಪಾರು.    (Byndooru) ಬೈಂದೂರು : ಬೃಹತ್ ಅಲೆಯೊಂದಕ್ಕೆ  ಸಿಲುಕಿದ ಮೀನುಗಾರಿಕಾ ದೋಣಿಯೊಂದು ಮಗುಚಿ ಬಿದ್ದು, ಇದರಲ್ಲಿದ್ದ 9 ಮೀನುಗಾರರು ಲೈಫ್ ಜಾಕೇಟ್ ಧರಿಸಿದ್ದರಿಂದ ಅಪಾಯದಿಂದ ಪಾರಾಗಿ ದಡ ಸೇರಿದ ಘಟನೆ ನಡೆದಿದೆ. ಅಪಾಯದಿಂದ ಪಾರಾದ ಮೀನುಗಾರು ಉಪ್ಪುಂದ ಮೂಲದ ಚಂದ್ರ ಖಾರ್ವಿ, ಪ್ರಮೋದ್, ಪ್ರಜ್ವಲ್, ಗೌತಮ್, ಭಾಸ್ಕರ, ಯೋಗಿರಾಜ್, ಗೋವಿಂದ, ಬಾಬು ಖಾರ್ವಿ, ದೀಪಕ್ ಎಂದು ಗುರುತಿಸಲಾಗಿದೆ. ಇವರೆಲ್ಲ ಇಂದು […]

 (Byndooru) ಬೈಂದೂರು : ಬೃಹತ್ ಅಲೆಯೊಂದಕ್ಕೆ  ಸಿಲುಕಿದ ಮೀನುಗಾರಿಕಾ ದೋಣಿಯೊಂದು ಮಗುಚಿ ಬಿದ್ದು, ಇದರಲ್ಲಿದ್ದ 9 ಮೀನುಗಾರರು ಲೈಫ್ ಜಾಕೇಟ್ ಧರಿಸಿದ್ದರಿಂದ ಅಪಾಯದಿಂದ ಪಾರಾಗಿ ದಡ ಸೇರಿದ ಘಟನೆ ನಡೆದಿದೆ.

ಅಪಾಯದಿಂದ ಪಾರಾದ ಮೀನುಗಾರು ಉಪ್ಪುಂದ ಮೂಲದ ಚಂದ್ರ ಖಾರ್ವಿ, ಪ್ರಮೋದ್, ಪ್ರಜ್ವಲ್, ಗೌತಮ್, ಭಾಸ್ಕರ, ಯೋಗಿರಾಜ್, ಗೋವಿಂದ, ಬಾಬು ಖಾರ್ವಿ, ದೀಪಕ್ ಎಂದು ಗುರುತಿಸಲಾಗಿದೆ.

ಇವರೆಲ್ಲ ಇಂದು ಬೆಳಿಗ್ಗೆ ಉಪ್ಪುಂದ ಶಾರದಾ ಖಾರ್ವಿ ಎಂಬವರ ಮಾಲೀಕತ್ವದ ಶಿವಪ್ರಸಾದ್ ದೋಣಿಯಲ್ಲಿ  ಮೀನುಗಾರಿಕೆಗೆ ತೆರಳಿದ್ದರು.

  ಸಮುದ್ರದ ಅಲೆಗಳ ರಭಸಕ್ಕೆ ದೋಣಿ ಮಗುಚಿ ಬಿತ್ತು ಎಂದು ತಿಳಿದು ಬಂದಿದೆ.ಇದರಿಂದ ದೋಣಿಯಲ್ಲಿದ್ದ ಎಲ್ಲ 9 ಮಂದಿ ಮೀನುಗಾರರು ಕೂಡ ನೀರಿಗೆ ಬಿದ್ದರು.

 ಎಲ್ಲ ಮೀನುಗಾರರು ಲೈಪ್ ಜಾಕೆಟ್ ಧರಿಸಿದ್ದರಿಂದ ಸಮುದ್ರದಲ್ಲಿ ಈಜುತ್ತಿದ್ದರು. ಕೂಡಲೇ ದಡದಲ್ಲಿದ್ದ ಇತರು ಇವರನ್ನು ರಕ್ಷಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.