• Home  
  • ಬ್ಯಾಡಗಿ : ಆಟೋ ಚಾಲಕರ ಸಮಸ್ಯೆಗಳ ಕುರಿತು  ಶಾಸಕರ ಭೇಟಿ (Byadgi: Meeting with the MLA to submit a memorandum regarding the problems faced by auto-rickshaw drivers.)
- PROBLEMS

ಬ್ಯಾಡಗಿ : ಆಟೋ ಚಾಲಕರ ಸಮಸ್ಯೆಗಳ ಕುರಿತು  ಶಾಸಕರ ಭೇಟಿ (Byadgi: Meeting with the MLA to submit a memorandum regarding the problems faced by auto-rickshaw drivers.)

Share: ಬ್ಯಾಡಗಿ : ಆಟೋ ಚಾಲಕರ ಸಮಸ್ಯೆಗಳ ಕುರಿತು   ಶಾಸಕರ ಭೇಟಿ ಅಟೋ ಚಾಲಕರಿಂದ ಮನವಿ ಸ್ವೀಕರಿಸಿದ ಶಾಸಕರಾದ ಬಸವರಾಜ್ ಶಿವಣ್ಣ (Byadagi) ಬ್ಯಾಡಗಿ : ಬ್ಯಾಡಗಿ ಪಟ್ಟಣದ ಶ್ರೀ ಅಟಲ್ ಬಿಹಾರಿ ವಾಜಪೇಯಿ ಆಟೋ ನಿಲ್ದಾಣಕ್ಕೆ ಶಾಸಕರಾದ  ಬಸವರಾಜ್ ಶಿವಣ್ಣನವರು ಆಗಮಿಸಿದ್ದು, ಅವರಿಗೆ ಬ್ಯಾಡಗಿ ಪಟ್ಟಣದ ಆಟೋ ಚಾಲಕರು ಮತ್ತು ಮಾಲೀಕರ ವಿವಿಧ ಸಮಸ್ಯೆಗಳ ಕುರಿತು ಮನವಿ ಸಲ್ಲಿಸಲಾಯಿತು.   ಮಾನ್ಯ ಶಾಸಕರಿಗೆ ಭೀಮ್ ರಾಜ್ಯ ದಲಿತ ಸೇವಾ ಸಮಿತಿ   ಬೆಂಗಳೂರು ಇದರ ಹಾವೇರಿ ಜಿಲ್ಲಾ […]

(Byadagi) ಬ್ಯಾಡಗಿ : ಬ್ಯಾಡಗಿ ಪಟ್ಟಣದ ಶ್ರೀ ಅಟಲ್ ಬಿಹಾರಿ ವಾಜಪೇಯಿ ಆಟೋ ನಿಲ್ದಾಣಕ್ಕೆ ಶಾಸಕರಾದ  ಬಸವರಾಜ್ ಶಿವಣ್ಣನವರು ಆಗಮಿಸಿದ್ದು, ಅವರಿಗೆ ಬ್ಯಾಡಗಿ ಪಟ್ಟಣದ ಆಟೋ ಚಾಲಕರು ಮತ್ತು ಮಾಲೀಕರ ವಿವಿಧ ಸಮಸ್ಯೆಗಳ ಕುರಿತು ಮನವಿ ಸಲ್ಲಿಸಲಾಯಿತು.

  ಮಾನ್ಯ ಶಾಸಕರಿಗೆ ಭೀಮ್ ರಾಜ್ಯ ದಲಿತ ಸೇವಾ ಸಮಿತಿ   ಬೆಂಗಳೂರು ಇದರ ಹಾವೇರಿ ಜಿಲ್ಲಾ ಘಟಕದ ಅಧ್ಯಕ್ಷರಾದ ಚಂದ್ರಶೇಖರ್ ಪರಶುರಾಮ್ ಗದಗಕರ ಅವರ ನೇತ್ರತ್ವದಲ್ಲಿ ಬ್ಯಾಡಗಿ ಪಟ್ಟಣದ ಆಟೋ ಚಾಲಕರು ಹಾಗೂ ಮಾಲೀಕರ ವತಿಯಿಂದ ಮನವಿ ಸಲ್ಲಿಸಲಾಯಿತು.

ಮನವಿಯಲ್ಲಿ ಬ್ಯಾಡಗಿ ಪಟ್ಟಣದ ಎಲ್ಲಾ ಆಟೋ ಚಾಲಕರಿಗೆ ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು. ಆಟೋ ಚಾಲಕರಿಗೆ ಡಿಎಲ್ (ಚಾಲನಾ ಪರವಾನಗಿ) ಸಂಬಂಧಿತ ಸೌಲಭ್ಯಗಳನ್ನು ಒದಗಿಸಬೇಕು. ಪಟ್ಟಣದ ಪ್ರತಿಯೊಂದು ಆಟೋ ನಿಲ್ದಾಣಕ್ಕೂ ಪ್ರತ್ಯೇಕವಾಗಿ ಮೇಲ್ಚಾವಣಿ ವ್ಯವಸ್ಥೆ ಕಲ್ಪಿಸಬೇಕು.    ಆಟೋ ಚಾಲಕರು ಹಾಗೂ ಮಾಲೀಕರಿಗೆ ಅನುಕೂಲವಾಗುವಂತಹ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು.

  ಬ್ಯಾಡಗಿ ಪಟ್ಟಣದ ಸಮಸ್ತ ಆಟೋ ಚಾಲಕರು ಮತ್ತು ಮಾಲೀಕರ ಪರವಾಗಿ ಮುಖ್ಯಮಂತ್ರಿಗಳ ವಿಶೇಷ ನಿಧಿ ಅಥವಾ ಸೂಕ್ತ ಸರ್ಕಾರಿ ಅನುದಾನದ ಮೂಲಕ ಆಟೋ ಚಾಲಕರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕೆಂದು ಮನವಿ ಮಾಡಿದರು.

  ಆಟೋ ಚಾಲಕರು ಕೂಡ ಸಮಾಜದ ಅವಿಭಾಜ್ಯ ಅಂಗವಾಗಿದ್ದು, ಪ್ರತಿನಿತ್ಯ ಸಾರ್ವಜನಿಕರ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಶ್ರಮ ಮತ್ತು ಬದುಕಿನ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಹಾಗೂ ಜನಪ್ರತಿನಿಧಿಗಳು ಅಗತ್ಯ ಸೌಲಭ್ಯಗಳನ್ನು ಒದಗಿಸಿಕೊಡಬೇಕೆಂಬುದು ನಮ್ಮೆಲ್ಲರ ಆಶಯವಾಗಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.