ಚುನಾಯಿತ ಜನ ಪ್ರತಿನಿಧಿಗಳು ಇಲ್ಲದಿದ್ದರೂ ಮಹತ್ವ ಪಡೆದುಕೊಂಡ ಬಂಟಕಲ್ಲು ವಾರ್ಡ್ ಸಭೆ
ವಾರ್ಡ್ ಸಭೆಯಲ್ಲಿ ಗ್ರಾಮಸ್ಥರಿಗಾಗಿ ಮಧುಮೇಹ, ರಕ್ತದೊತ್ತಡ ತಪಾಸಣೆ
(Bantakal) ಬಂಟಕಲ್: ಗ್ರಾಮ ಪಂಚಾಯತ್ ಪ್ರತಿನಿಧಿಗಳು ಇಲ್ಲದಿದ್ದರೂ ಶಿರ್ವ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಂಟಕಲ್ಲು ವಾರ್ಡ್ನ ವಾರ್ಡ್ ಸಭೆಯ ಹಲವು ಪ್ರಾಮುಖ್ಯ ವಿಚಾರಗಳ ನಿರ್ಣಯಗಳಿಂದ ಮಹತ್ವ ಪಡೆಯಿತು.
ಗ್ರಾ ಪಂ ಚುನಾವಣೆ, ಪೂರ್ಣಕಾಲಿಕ ಅಭಿವೖದ್ದಿ ಅಧಿಕಾರಿ ನೇಮಕ ಸೇರಿದಂತೆ ಕೆಲವು ಪ್ರಾಮುಖ್ಯ ವಿಚಾರಗಳ ನಿರ್ಣಯ ಪಂಚಾಯತ್ ರಾಜ್ ಅಧಿನಿಯಮ ಗಳ ಪ್ರಕಾರ ಪ್ರತಿ ಆರು ತಿಂಗಳಿಗೊಮ್ಮೆ ವಾರ್ಡ್ ಸಭೆ ಗ್ರಾಮ ಸಭೆ ನಡೆ ನಡೆಸಬೇಕಾಗಿರುವುದು ಉಲ್ಲೇಖನೀಯ.
ಈ ಬಾರಿ ಜನಪ್ರತಿನಿಧಿಗಳಿಲ್ಲದಿದ್ದರೂ, ಬಂಟಕಲ್ಲು ಅಂಗನವಾಡಿ ಕೇಂದ್ರದಲ್ಲಿ ನಡೆದ ಬಂಟಕಲ್ಲು ವಾರ್ಡ್ ನ ವಾರ್ಡ್ ಸಭೆಯು ಹಲವು ಮಹತ್ವದ ವಿಚಾರಗಳ ನಿರ್ಣಯಗಳ ಮೂಲಕ ಗಮನಸೆಳೆದಿದೆ.
ಶಿರ್ವ ಗ್ರಾಮ ಪಂಚಾಯತ್ ಕಾರ್ಯದರ್ಶಿ ಚಂದ್ರಮಣಿಯವರು ನಡೆಸಿಕೊಟ್ಟ ಈ ವಾರ್ಡ್ ಸಭೆಯಲ್ಲಿ ವಾರ್ಡಿನ ಸುಮಾರು 75 ಮಂದಿ ಮತದಾರರು ಭಾಗವಹಿಸಿದ್ದರು.
ಗ್ರಾಮದ ಅಭಿವೖದ್ದಿ ಕುಂಠಿತವಾಗಿರುವುದು, ಅನುದಾನವಿಲ್ಲದೆ ಗ್ರಾಮದ ಗ್ರಾಮಸ್ಥರು ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿರುವುದು, ವಾರ್ಡ್ ಗಳಲ್ಲಿ ಯಾವುದೇ ಅಭಿವೖದ್ದಿ ಕಾಮಗಾರಿಗಳು ನಡೆಯದೆ ಇರುವುದಕ್ಕೆ ಮುಖ್ಯ ಕಾರಣವಾದ ಚುನಾಯಿತ ಸದಸ್ಯರಿಲ್ಲದಿರುವುದರ ಬಗ್ಗೆ ಮತದಾರರು ಆಕ್ಷೇಪ ವ್ಯಕ್ತಪಡಿಸಿದರು.
ಶಿರ್ವ ಗ್ರಾಮ ಪಂಚಾಯತ್ ನಲ್ಲಿ ಪೂರ್ಣಕಾಲಿಕ ಅಭಿವೃದ್ಧಿ ಅಧಿಕಾರಿಯವರು ಇಲ್ಲದೆ ಇರುವುದರಿಂದ ಗ್ರಾಮಸ್ಥರಿಗೆ ಸಮಸ್ಯೆ ಯಾಗಿರುವ ಬಗ್ಗೆ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಕೆ ಆರ್ ಪಾಟ್ಕರ್ ರವರು ಮಂಡಿಸಿದ ಬೇಡಿಕೆಗೆ ವಾರ್ಡ್ ನ ಮತದಾರರು ಸಮ್ಮತಿಸಿ ಈ ಬಗ್ಗೆ ಮೇಲಾಧಿಕಾರಿಗಳಿಗೆ ಬರೆದುಕೊಳ್ಳುವಂತೆ ನಿರ್ಣಯವನ್ನು ಮಂಡಿಸಿದರು.
ಆಶಾ ಕಾರ್ಯಕರ್ತೆಯರ ವೇತನದ ಬಗ್ಗೆ ನಡೆಯುತ್ತಿರುವ ಹೋರಾಟಕ್ಕೆ ನಮ್ಮ ವಾರ್ಡ್ ನ ಮತದಾರರ ಬೆಂಬಲ ಹಾಗೂ ಅವರ ಸೇವೆಗೆ ಕನಿಷ್ಠ ವೇತನವನ್ನು ನೀಡುವಂತೆ ಸರಕಾರಕ್ಕೆ ತಿಳಿಸುವಂತೆ ನಿರ್ಣಯಿಸಲಾಯಿತು.
ಪಾದೂರಿನ ಐ ಎಸ್ ಪಿ ಆರ್ ಎಲ್ ನ ಎರಡನೇ ಹಂತದ ಕಾಮಗಾರಿಯಲ್ಲಿ ನಡೆಯುವ ಬಂಡೆ ಸ್ಪೋಟದ ಪರಿಣಾಮ ಮನೆಗಳಲ್ಲಿ ಬಿರುಕು ಬಂದಿರುವುದು, ನೆಲ ಅದುರಿದಂತೆ ಭಾಸವಾಗಿರುವ ಬಗ್ಗೆ ಮತದಾರರು ದೂರಿ ಕೊಂಡರು. ಈ ಬಗ್ಗೆ ಜಿಲ್ಲಾಧಿಕಾರಿಯವರಿಗೆ ಬರೆದುಕೊಳ್ಳುವಂತೆ ಮನವಿ ಮಾಡಿಕೊಂಡರು.
ರಸ್ತೆ ದುರಸ್ಥಿ, ನೀರು ಸರಬರಾಜು, ಕಸ ವಿಲೇವಾರಿ ವಿದ್ಯುತ್ ಸಮಸ್ಯೆಗಳು, ಮುಂತಾದ ವಿಚಾರಗಳ ಬಗ್ಗೆ ಆರೋಗ್ಯಕರ ಚರ್ಚೆ ನಡೆದು ನಿರ್ಣಯ ಕೖಗೊಳ್ಳಲಾಯಿತು.
ಗ್ರಾ ಪಂ ನ ಮಾಜಿ ಸದಸ್ಯರಾದ ಸತೀಶ್, ವೈಲೆಟ್ ಕೆಸ್ತಲಿನೊ, ಪಂಚಾಯತ್ ಸಿಬ್ಬಂದಿ ಯೋಗಿಶ್, ಸ್ಥಳೀಯ ಪ್ರಾ. ಶಾಲಾ ಮುಖ್ಯ ಶಿಕ್ಷಕಿ ಸಂಗೀತ ಪಾಟ್ಕರ್, ಅಂಗನವಾಡಿ ಕಾರ್ಯಕರ್ತೆ ವಿನಯ ಕುಂದರ್, ಸಹಾಯಕಿ ಸಂಧ್ಯಾ, ಆಶಾ ಕಾರ್ಯಕರ್ತೆಯರಾದ ಸವಿತಾ,ಕಮಲ ಉಪಸ್ಥಿತರಿದ್ದರು.
ಮಧುಮೇಹ, ರಕ್ತದೊತ್ತಡ ಉಚಿತ ತಪಾಸಣೆ: ಇದೇ ಸಂದರ್ಭದಲ್ಲಿ ವಾರ್ಡಿನ ಗ್ರಾಮಸ್ಥರಿಗಾಗಿ ಅಮೃತ್ ಡಯಾಗ್ನೋಸ್ಟಿಕ್ ಸೆಂಟರ್ ಉಡುಪಿ ಇವರಿಂದ ಉಚಿತವಾಗಿ ಮಧುಮೇಹ ಹಾಗೂ ರಕ್ತದೊತ್ತಡ ತಪಾಸಣೆಯೂ ನಡೆಯಿತು.

