• Home  
  • ಕಸದ ತೊಟ್ಟಿಯಂತಾದ ಜೂಗುಳ್ ಗ್ರಾಮ: ಅಧಿಕಾರಿಗಳ ನಿರ್ಲಕ್ಷ್ಯ (Jugul Village Turned into a Garbage Dump: Negligence by Officials)
- PROBLEMS

ಕಸದ ತೊಟ್ಟಿಯಂತಾದ ಜೂಗುಳ್ ಗ್ರಾಮ: ಅಧಿಕಾರಿಗಳ ನಿರ್ಲಕ್ಷ್ಯ (Jugul Village Turned into a Garbage Dump: Negligence by Officials)

Share: ಕಸದ ತೊಟ್ಟಿಯಂತಾದ ಜೂಗುಳ್ ಗ್ರಾಮ: ಅಧಿಕಾರಿಗಳ ನಿರ್ಲಕ್ಷ್ಯ ಗ್ರಾಮಸ್ಥರ ಆಕ್ರೋಶ, ಸಾಂಕ್ರಾಮಿಕ ರೋಗದ ಭೀತಿ ​(Kagavada) ಕಾಗವಾಡ : ಬೆಳಗಾವಿಯ ಜೂಗುಳ್ ಗ್ರಾಮದಲ್ಲಿ ಸ್ವಚ್ಛತೆ ಸಂಪೂರ್ಣವಾಗಿ ಮರೀಚಿಕೆಯಾಗಿದ್ದು, ಗ್ರಾಮದ ಪ್ರಮುಖ ರಸ್ತೆಗಳು ಹಾಗೂ ಜನವಸತಿ ಪ್ರದೇಶಗಳೆಲ್ಲವೂ ಕಸದ ತೊಟ್ಟಿಯಾಗಿ ಮಾರ್ಪಟ್ಟಿವೆ.    ಗ್ರಾಮ ಪಂಚಾಯತಿ ಆಡಳಿತದ ತೀವ್ರ ನಿರ್ಲಕ್ಷ್ಯದಿಂದಾಗಿ ಇಡೀ ಊರೇ ಗಬ್ಬೆದ್ದು ನಾರುತ್ತಿದ್ದು, ಸ್ಥಳೀಯ ನಿವಾಸಿಗಳು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ​ಕೊಳೆಯುತ್ತಿರುವ ತ್ಯಾಜ್ಯ, ಹೆಚ್ಚಿದ ದುರ್ವಾಸನೆ:   ಗ್ರಾಮ ಪಂಚಾಯತಿ ವತಿಯಿಂದ ನಿಯಮಿತವಾಗಿ ಮತ್ತು […]

​(Kagavada) ಕಾಗವಾಡ : ಬೆಳಗಾವಿಯ ಜೂಗುಳ್ ಗ್ರಾಮದಲ್ಲಿ ಸ್ವಚ್ಛತೆ ಸಂಪೂರ್ಣವಾಗಿ ಮರೀಚಿಕೆಯಾಗಿದ್ದು, ಗ್ರಾಮದ ಪ್ರಮುಖ ರಸ್ತೆಗಳು ಹಾಗೂ ಜನವಸತಿ ಪ್ರದೇಶಗಳೆಲ್ಲವೂ ಕಸದ ತೊಟ್ಟಿಯಾಗಿ ಮಾರ್ಪಟ್ಟಿವೆ.

   ಗ್ರಾಮ ಪಂಚಾಯತಿ ಆಡಳಿತದ ತೀವ್ರ ನಿರ್ಲಕ್ಷ್ಯದಿಂದಾಗಿ ಇಡೀ ಊರೇ ಗಬ್ಬೆದ್ದು ನಾರುತ್ತಿದ್ದು, ಸ್ಥಳೀಯ ನಿವಾಸಿಗಳು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ.

​ಕೊಳೆಯುತ್ತಿರುವ ತ್ಯಾಜ್ಯ, ಹೆಚ್ಚಿದ ದುರ್ವಾಸನೆ:

  ಗ್ರಾಮ ಪಂಚಾಯತಿ ವತಿಯಿಂದ ನಿಯಮಿತವಾಗಿ ಮತ್ತು ಸಮರ್ಪಕವಾಗಿ ಕಸ ವಿಲೇವಾರಿ ನಡೆಯದ ಕಾರಣ, ಮನೆಗಳ ಮುಂಭಾಗ, ಪ್ರಮುಖ ವೃತ್ತಗಳು ಹಾಗೂ ರಸ್ತೆ ಬದಿಗಳಲ್ಲಿ ಕಸದ ಗುಡ್ಡೆಗಳು ಬೆಟ್ಟದಂತೆ ಬೆಳೆದು ನಿಂತಿವೆ. ಕಸ ಕೊಳೆತು ವಿಪರೀತ ದುರ್ವಾಸನೆ ಬೀರುತ್ತಿರುವುದರಿಂದ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

​ಸಾಂಕ್ರಾಮಿಕ ರೋಗಗಳ ಆತಂಕ:

ತ್ಯಾಜ್ಯ ವಿಲೇವಾರಿಯಾಗದೆ  ಸೊಳ್ಳೆ ಮತ್ತು ನೊಣಗಳ ಕಾಟ ಮಿತಿಮೀರಿದೆ. ಇದರಿಂದ ಗ್ರಾಮದಲ್ಲಿ ಡೆಂಗ್ಯೂ, ಮಲೇರಿಯಾ, ಟೈಫಾಯಿಡ್ ಹಾಗೂ ಚಿಕೂನ್‌ಗುನ್ಯಾದಂತಹ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ವಿಶೇಷವಾಗಿ ಮಕ್ಕಳು ಮತ್ತು ವೃದ್ಧರ ಆರೋಗ್ಯದ ಮೇಲೆ ಇದು ಗಂಭೀರ ಪರಿಣಾಮ ಬೀರುತ್ತಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ಆದಷ್ಟು ಶೀಘ್ರವಾಗಿ ಸಮಸ್ಯೆ ಪರಿಹಾರಕ್ಕೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.