• Home  
  • ಬ್ರಹ್ಮಾವರ : ಹನೆಹಳ್ಳಿಯಲ್ಲಿ ದಲಿತ ಯುವಕನ ಶೂಟೌಟ್‌ ಪ್ರಕರಣ, ಸಮತಾ ಸೈನಿಕ ದಳದ  ಪ್ರತಿಭಟನೆ (Brahmavara : Hanehalli Shootout, Samatha Sainik Protest)
- ಅಪರಾಧ

ಬ್ರಹ್ಮಾವರ : ಹನೆಹಳ್ಳಿಯಲ್ಲಿ ದಲಿತ ಯುವಕನ ಶೂಟೌಟ್‌ ಪ್ರಕರಣ, ಸಮತಾ ಸೈನಿಕ ದಳದ  ಪ್ರತಿಭಟನೆ (Brahmavara : Hanehalli Shootout, Samatha Sainik Protest)

Share:  ಬ್ರಹ್ಮಾವರ : ಹನೆಹಳ್ಳಿಯಲ್ಲಿ ದಲಿತ ಯುವಕನ ಶೂಟೌಟ್‌ ಪ್ರಕರಣ: ಸಮತಾ ಸೈನಿಕ ದಳದ  ಪ್ರತಿಭಟನೆ (Brahmavara) ಬ್ರಹ್ಮಾವರ: ಉಡುಪಿ ಜಿಲ್ಲೆಯ ಬ್ರಹ್ಮಾವರದ ಹನೆಹಳ್ಳಿಯಲ್ಲಿ ಮೂರುವರೆ ತಿಂಗಳ ಹಿಂದೆ ನಡೆದ ದಲಿತ ಯುವಕ ಕೃಷ್ಣ ಅವರ ಶೂಟೌಟ್- ಹತ್ಯೆ ಪ್ರಕರಣದ ಆರೋಪಿಗಳು ಇನ್ನೂ ಪತ್ತೆಯಾಗಿಲ್ಲ. ಈ ಬಗ್ಗೆ ದಲಿತ ಸಂಘಟನೆಗಳು ನಿರಂತರ ಹೋರಾಟ ನಡೆಸಿದರೂ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ಆರೋಪಿಸಿ, ಇಂದು ಸಮತಾ ಸೈನಿಕ ದಳದ ಸದಸ್ಯರು, ಬ್ರಹ್ಮಾವರದಲ್ಲಿ ಪ್ರತಿಭಟನೆ ನಡೆಸಿ […]

 ಬ್ರಹ್ಮಾವರ : ಹನೆಹಳ್ಳಿಯಲ್ಲಿ ದಲಿತ ಯುವಕನ ಶೂಟೌಟ್‌ ಪ್ರಕರಣ: ಸಮತಾ ಸೈನಿಕ ದಳದ  ಪ್ರತಿಭಟನೆ

(Brahmavara) ಬ್ರಹ್ಮಾವರ: ಉಡುಪಿ ಜಿಲ್ಲೆಯ ಬ್ರಹ್ಮಾವರದ ಹನೆಹಳ್ಳಿಯಲ್ಲಿ ಮೂರುವರೆ ತಿಂಗಳ ಹಿಂದೆ ನಡೆದ ದಲಿತ ಯುವಕ ಕೃಷ್ಣ ಅವರ ಶೂಟೌಟ್- ಹತ್ಯೆ ಪ್ರಕರಣದ ಆರೋಪಿಗಳು ಇನ್ನೂ ಪತ್ತೆಯಾಗಿಲ್ಲ. ಈ ಬಗ್ಗೆ ದಲಿತ ಸಂಘಟನೆಗಳು ನಿರಂತರ ಹೋರಾಟ ನಡೆಸಿದರೂ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ಆರೋಪಿಸಿ, ಇಂದು ಸಮತಾ ಸೈನಿಕ ದಳದ ಸದಸ್ಯರು, ಬ್ರಹ್ಮಾವರದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದ್ದಾರೆ.

 ಪ್ರಕರಣವನ್ನು ಸಿಒಡಿ ತನಿಖೆಗೆ ನೀಡುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು. ಕಾಲ್ನಡಿಗೆ ಮೂಲಕ ಸಾಗಿ, ಬ್ರಹ್ಮಾವರದಲ್ಲಿ ಟಯರ್ ಗಳಿಗೆ ಬೆಂಕಿ ಹಚ್ಚಿ ಪ್ರತಿಭಟಿಸಿದ್ದಾರೆ.

  ಬ್ರಹ್ಮಾವರ ಬಸ್ ನಿಲ್ದಾಣದಿಂದ ಸಾಗಿ ಬಂದ ಪ್ರತಿಭಟನಾಕಾರರು, ಪೊಲೀಸ್ ಠಾಣೆಯ ಆವರಣದಲ್ಲಿ ಧರಣಿ ನಡೆಸಿದರು. ಪೊಲೀಸರ ವಿರುದ್ಧ ಧಿಕ್ಕಾರ ಕೂಗಿದ್ದಾರೆ.

ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರು ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು.

ಈ ಸಂದರ್ಭ ಕೋಟ ಶ್ರೀನಿವಾಸ ಪೂಜಾರಿಯವರು ಮಾತನಾಡಿ, ಗೃಹ ಸಚಿವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ತಾನು ಭೇಟಿಯಾಗಿ ಮನವಿ ಮಾಡುತ್ತೇನೆ. ಅಪರಾಧಿಗಳು ಎಷ್ಟೇ ಪ್ರಭಾವಿಯಾಗಿದ್ದರೂ ಪತ್ತೆ ಹಚ್ಚಬೇಕು, ಬಡ ದಲಿತ ಕುಟುಂಬಕ್ಕೆ ನ್ಯಾಯ ನೀಡಬೇಕು. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದಲ್ಲಿ ಎಲ್ಲರಿಗೂ ರಕ್ಷಣೆ ಇದೆ ಎಂದು ಭರವಸೆ ನೀಡಿದರು.  

  ದಲಿತ ಯುವಕನನ್ನು ಶೂಟ್ ಔಟ್ ಮಾಡುವ ಮೂಲಕ ಕೊಂದಿರುವ ಈ ಪ್ರಕರಣದ, ನೈಜ ಆರೋಪಿಗಳನ್ನು ಪತ್ತೆ ಹಚ್ಚುವುದು ಪೊಲೀಸರಿಗೆ ದೊಡ್ಡ ತಲೆ ನೋವಾಗಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.