• Home  
  • ಭಾರತ್ ಜೋಡೋ ಯಾತ್ರೆಯ ಮಹಾರಾಷ್ಟ್ರದ ಸಮನ್ವಯಕರಾಗಿ ಸುರೇಶ್ ಶೆಟ್ಟಿ ಯೆಯ್ಯಾಡಿ ಆಯ್ಕೆ(Bharath Jodo)
- ರಾಜಕೀಯ

ಭಾರತ್ ಜೋಡೋ ಯಾತ್ರೆಯ ಮಹಾರಾಷ್ಟ್ರದ ಸಮನ್ವಯಕರಾಗಿ ಸುರೇಶ್ ಶೆಟ್ಟಿ ಯೆಯ್ಯಾಡಿ ಆಯ್ಕೆ(Bharath Jodo)

Share: ಭಾರತ್ ಜೋಡೋ ನ್ಯಾಯ ಯಾತ್ರೆ’ಯ ಮಹಾರಾಷ್ಟ್ರದ – ಜತೆ ಸಮನ್ವಯಕರಾಗಿ ಸುರೇಶ್ ಶೆಟ್ಟಿ ಯೆಯ್ಯಾಡಿ ಆಯ್ಕೆ ಮುಂಬಯಿ, ಫೆ.25- ರಾಷ್ಟ್ರೀಯ ಕಿಸಾನ್ ಕಾಂಗ್ರೆಸ್‌ನ ಅಧ್ಯಕ್ಷ ಸುಖ್‌ಪಾಲ್ ಸಿಂಗ್ ಖೇರ್ (Sukhpal Singh Kher)ಅವರು ಮಹಾರಾಷ್ಟ್ರ ಪ್ರದೇಶ ಕಿಸಾನ್ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷ ಸುರೇಶ್ ಶೆಟ್ಟಿ ಯೆಯ್ಯಾಡಿಯವರನ್ನು (Suresh Shetty Yeyyadi)ಭಾರತ್ ಜೋಡೋ ನ್ಯಾಯ ಯಾತ್ರೆ’ಯ ಮಹಾರಾಷ್ಟ್ರ ಜತೆ ಸಮನ್ವಯಕರಾಗಿ ಆಯ್ಕೆ ಮಾಡಿದ್ದಾರೆ. ರಾಹುಲ್ ಗಾಂಧಿಯವರು ಭಾರತ್ ಜೋಡೋ ‘ನ್ಯಾಯ ಯಾತ್ರೆ’ಯನ್ನು ಜ.14 ರಂದು ಮಣಿಪುರದಲ್ಲಿ ಆರಂಭಿಸಿ […]

ಭಾರತ್ ಜೋಡೋ ನ್ಯಾಯ ಯಾತ್ರೆ’ಯ ಮಹಾರಾಷ್ಟ್ರದ – ಜತೆ ಸಮನ್ವಯಕರಾಗಿ ಸುರೇಶ್ ಶೆಟ್ಟಿ ಯೆಯ್ಯಾಡಿ ಆಯ್ಕೆ

ಮುಂಬಯಿ, ಫೆ.25- ರಾಷ್ಟ್ರೀಯ ಕಿಸಾನ್ ಕಾಂಗ್ರೆಸ್‌ನ ಅಧ್ಯಕ್ಷ ಸುಖ್‌ಪಾಲ್ ಸಿಂಗ್ ಖೇರ್ (Sukhpal Singh Kher)ಅವರು ಮಹಾರಾಷ್ಟ್ರ ಪ್ರದೇಶ ಕಿಸಾನ್ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷ ಸುರೇಶ್ ಶೆಟ್ಟಿ ಯೆಯ್ಯಾಡಿಯವರನ್ನು (Suresh Shetty Yeyyadi)ಭಾರತ್ ಜೋಡೋ ನ್ಯಾಯ ಯಾತ್ರೆ’ಯ ಮಹಾರಾಷ್ಟ್ರ ಜತೆ ಸಮನ್ವಯಕರಾಗಿ ಆಯ್ಕೆ ಮಾಡಿದ್ದಾರೆ.

ರಾಹುಲ್ ಗಾಂಧಿಯವರು ಭಾರತ್ ಜೋಡೋ ‘ನ್ಯಾಯ ಯಾತ್ರೆ’ಯನ್ನು ಜ.14 ರಂದು ಮಣಿಪುರದಲ್ಲಿ ಆರಂಭಿಸಿ ಅದೀಗ ನಾಗಾಲ್ಯಾಂಡ್, ಅಸ್ಸಾಂ, ಮೇಘಾಲಯ, ಪ.ಬಂಗಾಳ, ಬಿಹಾರ್, ಜಾರ್ಖಂಡ್, ಒಡಿಸ್ಸಾ, ಛತ್ತೀಸ್‌ಗಢ, ಉ.ಪ್ರದೇಶ, ಮ.ಪ್ರದೇಶ,

ರಾಜಸ್ಥಾನ್, ಗುಜರಾತ್, ನಂತರ ಮಹಾರಾಷ್ಟ್ರದ ಮುಂಬಯಿಯಲ್ಲಿ ಮಾ.20 ರಂದು ಕೊನೆಗೊಳ್ಳಲಿದೆ.

ದೇಶದ ಬೆನ್ನೆಲುಬು, ದೇಶಕ್ಕೆ ಅನ್ನ ನೀಡುವ ರೈತರಿಗೆ ನ್ಯಾಯ, ಯುವಕರಿಗೆ ನ್ಯಾಯ, ಮಹಿಳೆಯರಿಗೆ ನ್ಯಾಯ, ಶ್ರಮಿಕ ವರ್ಗದವರಿಗೆ ನ್ಯಾಯ ಕೊಡುವ ಉದ್ದೇಶದಿಂದ ರಾಹುಲ್ ಗಾಂಧಿಯವರು (Rahul Gandhi) ಈ ಯಾತ್ರೆಯನ್ನು ಕೈಗೊಂಡಿದ್ದಾರೆ.

66 ದಿನಗಳ ಈ ಯಾತ್ರೆಯು 110 ಜಿಲ್ಲೆ ಹಾಗೂ 14 ರಾಜ್ಯಗಳನ್ನು ಕ್ರಮಿಸಿ ಬರಲಿದೆ. ಮಹಾರಾಷ್ಟ್ರದಲ್ಲಿ ಅದು ನಂದುರ್‌ಬಾರ್ ಮುಖಾಂತರ ಧುಳೆ, ಜಲ್ಟಾಂವ್, ನಾಸಿಕ್, ಠಾಣೆಯ ನಂತರ ಮುಂಬಯಿಯಲ್ಲಿ ಸಮಾಪನಗೊಳ್ಳಲಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.