ಮಜೂರಿನಲ್ಲಿ ಉಚಿತ ಮಹಿಳಾ ಯೋಗಕ್ಷೇಮ, ವೈದ್ಯಕೀಯ, ದಂತ ಚಿಕಿತ್ಸಾ ಶಿಬಿರ
ಗ್ರೀನ್ ವುಡ್ ರಿಸಾರ್ಟ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಪ್ರಾಯೋಜಕತ್ವ
(Kaup) ಕಾಪು: ಗ್ರೀನ್ ವುಡ್ ರಿಸಾರ್ಟ್ ಮಜೂರು, ಕಾಪು ತಾಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಪ್ರಾಯೋಜಕತ್ವದಲ್ಲಿ, ಜುಲೇಖ ಯೆನೆಪೋಯ ಇನ್ಸಿಟ್ಯೂಟ್ ಆಫ್ ಓಂಕಲಜಿ, ಯೆನೆಪೋಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಯೆನೆಪೋಯ ಪರಿಗಣಿಸಲ್ಲಟ್ಟ ವಿಶ್ವವಿದ್ಯಾಲಯ, ದೇರಳಕಟ್ಟೆ ಸಮುದಾಯ ದಂತ ಆರೋಗ್ಯ ವಿಭಾಗ ಯೆನೆಪೋಯ ದಂತ ಕಾಲೇಜು ಮತ್ತು ಆಸ್ಪತ್ರೆ, ದೇರಳಕಟ್ಟೆ ಇವರ ಸಹಯೋಗದಲ್ಲಿ ಭಾನುವಾರ ಉಚಿತ ಮಹಿಳಾ ಯೋಗಕ್ಷೇಮ, ವೈದ್ಯಕೀಯ ಮತ್ತು ದಂತ ಚಿಕಿತ್ಸಾ ಶಿಬಿರ ಮಜೂರಿನ ಗ್ರೀನ್ ವುಡ್ ಆರ್ ಕೆ ಹೋಮ್ ಸ್ಟೇನಲ್ಲಿ ನೆರವೇರಿತು.
ಕಾರ್ಯಕ್ರಮವನ್ನು ಉದ್ಯಮಿ ಪ್ರಭಾಕರ ಪೂಜಾರಿಯವರು ಉದ್ಘಾಟಿಸಿ, ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಮಲ್ಪೆಯ ಖ್ಯಾತ ಸಮಾಜ ಸೇವಕ ಈಶ್ವರ್ ಮಲ್ಪೆಯವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ದೇರಳಕಟ್ಟೆ ಯೆನೆಪೋಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯಾಧಿಕಾರಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಪು ತಾಲೂಕು ಯೋಜನಾಧಿಕಾರಿ ಶ್ರೀಮತಿ ಮಮತಾ ಶೆಟ್ಟಿ, ಕಾಪು ಯುವವಾಹಿನಿಯ ಅಧ್ಯಕ್ಷೆ ಶ್ರೀಮತಿ ಅನಿತಾ ಅಮೀನ್, ಕಲ್ಲುಗುಡ್ಡೆ ಬಿರುವೆರ್ ಟ್ರಸ್ಟ್ ಅಧ್ಯಕ್ಷ ಕಾರ್ತಿಕ್ ಅಮೀನ್ ಕಾಪು, ಆರ್ ಕೆ ಹೋಂ ಸ್ಟೇ ಮಾಲಕ ಮೊಹಮ್ಮದ್ ಅಕ್ರಂ ಸಲಾಹುದ್ದೀನ್, ದೀಪಕ್ ಕುಮಾರ್ ಎರ್ಮಾಳು, ಕಿಶೋರ್ ಕುಮಾರ್ ಮಲ್ಲಾರು, ಶರ್ಫೂದ್ಧೀನ್ ಶೇಖ್, ಶ್ರೀಮತಿ ಸಂದ್ಯಾ ಬಾಲಕೃಷ್ಣ ಉಪಸ್ಥಿತರಿದ್ದರು.
ದೀಪಕ್ ಎರ್ಮಾಳು ಸ್ವಾಗತಿಸಿ, ವಂದಿಸಿದರು.

