ಮಜೂರು ಕರಂದಾಡಿ ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲಾ ಹಳೆ ವಿದ್ಯಾರ್ಥಿ ಸಂಘದ ಕ್ರೀಡಾಕೂಟ
ಕ್ರೀಡಾಕೂಟ ಉದ್ಘಾಟಿಸಿದ ಶ್ರೀನಿವಾಸ್ ರಾವ್ ಮಲ್ಲಾರು
(Kaup) ಕಾಪು: ಮಜೂರು ಕರಂದಾಡಿ ಶ್ರೀ ರಾಮ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕ ಕ್ರೀಡಾಕೂಟ ಸಂಪನ್ನಗೊಂಡಿತು.
ಕ್ರೀಡಾಕೂಟವನ್ನು ಮಜೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮಲ್ಲಾರು ಶ್ರೀನಿವಾಸ್ ರಾವ್ ಉದ್ಘಾಟಿಸಿ ಕ್ರೀಡಾ ಕೂಟಕ್ಕೆ ಶುಭ ಹಾರೈಸಿದರು.
ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೆ ವಾಸುದೇವ ರಾವ್ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಹಳೇ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಅಬ್ದುಲ್ ಕರೀಂ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಶಾನುಭಾಗರ ಮನೆ ಕೆ. ಪದ್ಮನಾಭ ಶಾನುಭಾಗ್ ಕರಂದಾಡಿ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ರವಿರಾಜ್ ಶೆಟ್ಟಿ ಪಂಜಿತ್ತೂರುಗುತ್ತು, ಕಾಪು ಪುರಸಭಾ ಸದಸ್ಯೆ ಮೋಹಿನಿ ಶೆಟ್ಟಿ, ಶಾಲಾ ಮುಖ್ಯ ಶಿಕ್ಷಕ ಆರ್ ಎಸ್ ಕಲ್ಲೂರ, ಮಜೂರು ಪಂಚಾಯತ್ ಸದಸ್ಯ ಭಾಸ್ಕರ್ ಕುಮಾರ್, ಸಿವಿಲ್ ಕಾಂಟ್ರಾಕ್ಟರ್ ದೇವೇಂದ್ರ ನಾಯ್ಕ್ ಮಲ್ಲಾರು, ನಿವೃತ್ತ ಮುಖ್ಯ ಶಿಕ್ಷಕ ನಿರ್ಮಲ್ ಕುಮಾರ್ ಹೆಗ್ಡೆ, ನಿವೃತ್ತ ಶಿಕ್ಷಕ ಕಿಟ್ಟು ಮಾಸ್ಟರ್, ಅಧ್ಯಕ್ಷರು ಕಲ್ಪವೃಕ್ಷ ಕನ್ನಡ ಶಾಲೆ ಶ್ರೀಧರ್ ಶೆಟ್ಟಿಗಾರ್, ಕಾಪು ಎಸ್ಕೆಪಿಎ ಅಧ್ಯಕ್ಷ ಸಂತೋಷ್ ನಾಯ್ಕ್ ಕಾಪು, ಉಚ್ಚಿಲ ಸರಸ್ವತಿ ಮಂದಿರ ಶಾಲಾ ದೈಹಿಕ ಶಿಕ್ಷಕ ಸುರೇಶ್ ಕುಲಾಲ್, ಮೋಹಿನಿ ಶೆಟ್ಟಿ ಗುಜ್ಜಿ, ರಿಯಾಜ್ ಕರಂದಾಡಿ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯದರ್ಶಿ ಇಬ್ರಾಹಿಂ ಸ್ವಾಗತಿಸಿದರು. ಕೋಶಾಧಿಕಾರಿ ನಾಗಭೂಷಣ್ ರಾವ್ ನಿರೂಪಿಸಿ ವಂದಿಸಿದರು.

