• Home  
  • ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ನಿರ್ಮಾಣ ಸಂಕಲ್ಪ: ಮನವಿ ಪತ್ರ ಬಿಡುಗಡೆ (Resolution to build a bronze effigy of Madhav Mangala Pujarya: Request letter released)
- ಧಾರ್ಮಿಕ

ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ನಿರ್ಮಾಣ ಸಂಕಲ್ಪ: ಮನವಿ ಪತ್ರ ಬಿಡುಗಡೆ (Resolution to build a bronze effigy of Madhav Mangala Pujarya: Request letter released)

Share: ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ನಿರ್ಮಾಣ ಸಂಕಲ್ಪ: ಮನವಿ ಪತ್ರ ಬಿಡುಗಡೆ ಮನವಿ ಪತ್ರ ಬಿಡುಗಡೆಗೊಳಿಸಿದ ಮೊಗವೀರ ಮುಖಂಡ ಡಾ. ಜಿ. ಶಂಕರ್  (Uchila) ಉಚ್ಚಿಲ: ಬೆಣ್ಣೆಕುದ್ರು ಶ್ರೀ ಕುಲಮಹಾಸ್ತ್ರೀ ಅಮ್ಮನವರ ದೇವಸ್ಥಾನದಲ್ಲಿ ಲಭ್ಯವಿರುವ ಲಿಖಿತ ಮಾಹಿತಿಯಂತೆ, ಸುಮಾರು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಗುರು ಪರಂಪರೆಯ 9ನೇ ಹಾಗೂ ಕೊನೆಯ ಗುರುಗಳಾದ ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಬೃಹತ್ ಕಂಚಿನ ಪುತ್ಥಳಿಯನ್ನು ಅಂದಾಜು ಮೂರು ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣ ಮಾಡಲು […]

ಮನವಿ ಪತ್ರ ಬಿಡುಗಡೆಗೊಳಿಸಿದ ಮೊಗವೀರ ಮುಖಂಡ ಡಾ. ಜಿ. ಶಂಕರ್

 (Uchila) ಉಚ್ಚಿಲ: ಬೆಣ್ಣೆಕುದ್ರು ಶ್ರೀ ಕುಲಮಹಾಸ್ತ್ರೀ ಅಮ್ಮನವರ ದೇವಸ್ಥಾನದಲ್ಲಿ ಲಭ್ಯವಿರುವ ಲಿಖಿತ ಮಾಹಿತಿಯಂತೆ, ಸುಮಾರು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಗುರು ಪರಂಪರೆಯ 9ನೇ ಹಾಗೂ ಕೊನೆಯ ಗುರುಗಳಾದ ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಬೃಹತ್ ಕಂಚಿನ ಪುತ್ಥಳಿಯನ್ನು ಅಂದಾಜು ಮೂರು ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣ ಮಾಡಲು ರೂಪಿಸಲಾದ ಮನವಿ ಪತ್ರ ಹಾಗೂ ರಶೀದಿ ಪುಸ್ತಕ ಬಿಡುಗಡೆ ಕಾರ್ಯಕ್ರಮವು ಶ್ರೀ ಕ್ಷೇತ್ರ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯಿತು.

    ಮನವಿ ಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಮೊಗವೀರ ಮುಖಂಡ ಡಾ. ಜಿ. ಶಂಕರ್, ಶ್ರೀ ಕ್ಷೇತ್ರದ ಜೀರ್ಣೋದ್ದಾರ ಸಂದರ್ಭ ನಡೆದ ಅಷ್ಟಮಂಗಲ ಪ್ರಶ್ನೆ ವೇಳೆ ಗುರುಗಳ ಪುತ್ಥಳಿಯನ್ನು ಉಚ್ಚಿಲದಲ್ಲಿ ನಿರ್ಮಿಸಬೇಕೆಂಬ ವಿಚಾರ ಪ್ರಸ್ತಾವವಾಗಿರುವುದನ್ನು ತಿಳಿಸಿದರು. ಸಮಾಜದ ಪ್ರತಿಯೊಂದು ಮನೆಯಿಂದಲೂ ಗುರು ಕಾಣಿಕೆ ರೂಪದಲ್ಲಿ ಗರಿಷ್ಠ ವಂತಿಗೆ ಸಲ್ಲಿಸಿ ಪುತ್ತಳಿ  ನಿರ್ಮಾಣಕ್ಕೆ ಸಹಕರಿಸಬೇಕೆಂದು ಮನವಿ ಮಾಡಿದರು.

   ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ರಶೀದಿ ಪುಸ್ತಕ ಬಿಡುಗಡೆಗೊಳಿಸಿದರು.

    ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಗಿರಿಧರ ಸುವರ್ಣ, ಪ್ರಮುಖರಾದ ಮೋಹನ್ ಬೆಂಗ್ರೆ, ಮನೋಜ್ ಉಳ್ಳಾಲ, ಪದ್ಮಾಕರ್ ಮಸ್ಕತ್, ಶರಣ್ ಕುಮಾರ್‌ ಮಟ್ಟು ಸತೀಶ್ ಕುಂದರ್‌ ಮಲೈ ರಾಜೇಶ್ ಉಳ್ಳಾಲ, ಪವನ್ ಆನಂದ್ ಎರ್ಮಾಳ್, ಶ್ರೀಮತಿ ಕವಿತಾ ಶರತ್, ವಾಸುದೇವ ಸಾಲ್ಯಾನ್, ದಿನೇಶ್ ಎರ್ಮಾಳ್, ಶಿವರಾಮ್ ಕೋಟ, ಶ್ರೀಮತಿ ಸುಗುಣ ಕರ್ಕೇರ, ಸದಾನಂದ ಬಂಗೇರ ಉಳ್ಳಾಲ, ಎಂ.ಎಸ್. ಸಂಜೀವ ಕೋಟ, ಅಶೋಕ್ ಉಪ್ಪಳ ಮತ್ತು ದೇವಳದ ಪ್ರಬಂಧಕ ಸತೀಶ್‌ ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.