ಮಜೂರು : ಗಾಳಿ ಮಳೆಗೆ ಮನೆಗೆ ಮರ ಬಿದ್ದು ಹಾನಿ
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಜೂರು ಗ್ರಾಮ ಪಂಚಾಯತ್ ಅಧಿಕಾರಿಗಳು
(Kaup) ಕಾಪು : ಸೋಮವಾರ ರಾತ್ರಿ ಸುರಿದ ಗಾಳಿ ಮಳೆಗೆ ಮಜೂರು ಗ್ರಾಮದ ಉಳಿಯಾರು ದೇವಳ ಬಳಿಯ ಪುಷ್ಪಾ ನಾರಾಯಣ ಮೂಲ್ಯರ ಮನೆಗೆ ಮರ ಬಿದ್ದು ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಿದೆ.
ಭಾರೀ ಗಾಳಿ ಮಳೆಗೆ ಮನೆಯ ಮೇಲೆ ಅಶ್ವತ್ಥ ಮರ ಹಾಗೂ 2 ತೆಂಗಿನ ಮರ ಬಿದ್ದಿದೆ. ಮನೆಯ ಗೋಡೆ, ಮೆಟ್ಟಿಲುಗಳಿಗೆ ಹಾನಿಯಾಗಿದೆ. ಅದೃಷ್ಟವಶಾತ್ ಈ ಸಂದರ್ಭ ಯಾವುದೇ ಸಾವು, ನೋವು ಸಂಭವಿಸಿಲ್ಲ.
ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಸಹಿತ ಮಜೂರು ಗ್ರಾಮ ಪಂಚಾಯತ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

