• Home  
  • ಮಜೂರು ಗ್ರಾಪಂ : ಆಸರೆ ಸಂಜೀವಿನಿ ಒಕ್ಕೂಟದ ವತಿಯಿಂದ ಆಟಿಡೊಂಜಿ ದಿನ (Majuru Grama Panchayath : Atidonji Dina by Asare Sanjeevini Okkuta)
- ತಾಲೂಕು ಆಡಳಿತ - ಸನ್ಮಾನ, ಅಭಿನಂದನೆ

ಮಜೂರು ಗ್ರಾಪಂ : ಆಸರೆ ಸಂಜೀವಿನಿ ಒಕ್ಕೂಟದ ವತಿಯಿಂದ ಆಟಿಡೊಂಜಿ ದಿನ (Majuru Grama Panchayath : Atidonji Dina by Asare Sanjeevini Okkuta)

Share: ಮಜೂರು ಗ್ರಾಪಂ : ಆಸರೆ ಸಂಜೀವಿನಿ ಒಕ್ಕೂಟದ ವತಿಯಿಂದ ಆಟಿಡೊಂಜಿ ದಿನ  ಸ್ತನ್ಯಪಾನ ಮಾಹಿತಿ, ಪೌಷ್ಟಿಕ ಆಹಾರ, ಕಾರ್ಯಕ್ರಮ (Kaup) ಕಾಪು : ಮಜೂರು ಗ್ರಾಮ ಪಂಚಾಯತ್‌ ಮಟ್ಟದ ಆಸರೆ ಸಂಜೀವಿನಿ ಒಕ್ಕೂಟದ ವತಿಯಿಂದ ಆಟಿಡೊಂಜಿ ದಿನ, ಸ್ತನ್ಯಪಾನ ಮಾಹಿತಿ, ಪೌಷ್ಟಿಕ ಆಹಾರ, ಕಾರ್ಯಕ್ರಮ ಮಜೂರು  ಅಂಗನವಾಡಿ ಕೇಂದ್ರದಲ್ಲಿ ನೆರವೇರಿತು. ಕಾರ್ಯಕ್ರಮವನ್ನು ಆಸರೆ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಶಶಿಫ್ರಭ ಶೆಟ್ಟಿ ದೀಪ ಬೆಳಗಿಸಿ, ಚೆನ್ನಮಣೆ ಆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.  ಮಜೂರು ಗ್ರಾಮ ಪಂಚಾಯತ್‌ ಉಪಾಧ್ಯಕ್ಷೆ […]

(Kaup) ಕಾಪು : ಮಜೂರು ಗ್ರಾಮ ಪಂಚಾಯತ್‌ ಮಟ್ಟದ ಆಸರೆ ಸಂಜೀವಿನಿ ಒಕ್ಕೂಟದ ವತಿಯಿಂದ ಆಟಿಡೊಂಜಿ ದಿನ, ಸ್ತನ್ಯಪಾನ ಮಾಹಿತಿ, ಪೌಷ್ಟಿಕ ಆಹಾರ, ಕಾರ್ಯಕ್ರಮ ಮಜೂರು  ಅಂಗನವಾಡಿ ಕೇಂದ್ರದಲ್ಲಿ ನೆರವೇರಿತು.

ಕಾರ್ಯಕ್ರಮವನ್ನು ಆಸರೆ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಶಶಿಫ್ರಭ ಶೆಟ್ಟಿ ದೀಪ ಬೆಳಗಿಸಿ, ಚೆನ್ನಮಣೆ ಆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

 ಮಜೂರು ಗ್ರಾಮ ಪಂಚಾಯತ್‌ ಉಪಾಧ್ಯಕ್ಷೆ ಮಂಜುಳಾ  ಆಚಾರ್ಯರವರು  ಆಟಿಯ  ಮಹತ್ವದ  ಬಗ್ಗೆ  ತಿಳಿಸಿದರು.

 ಹಿರಿಯ ಪ್ರಾಥಮಿಕ ಸುರಕ್ಷಾಧಿಕಾರಿ ನಿರ್ಮಲಾ ಎಂ ರವರು ಸ್ತನ್ಯಪಾನದ  ಬಗ್ಗೆ ಮಾಹಿತಿಯನ್ನು ನೀಡಿದರು.

 ಅಂಗನವಾಡಿ ಮೇಲ್ವಿಚಾರಕಿ ಪೂರ್ಣಿಮಾರವರು ಪೌಷ್ಠಿಕ ಆಹಾರದ ಕುರಿತು ಮಾಹಿತಿ ನೀಡಿದರು.

ಈ ಸಂದರ್ಭ ಹಿರಿಯ ನಾಟಿ ವೈದೈ ರಾಧ ಮಡಿವಾಳ್ತಿಯವರನ್ನು ಸನ್ಮಾನಿಸಲಾಯಿತು.

 ಸಂಜೀವಿನಿ ಸದಸ್ಯರಿಗೆ ಆಟೋಟ ಸ್ಪರ್ಧೆ ಏರ್ಪಡಿಸಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

 ಸಂಜೀವಿನಿ ಸದಸ್ಯರು ತಾವೇ ಮನೆಯಲ್ಲಿ ತಯಾರಿಸಿದ ಆಟಿಯ ವಿಶೇಷ ಖಾದ್ಯಗಳ ಸವಿಯನ್ನು ಸವಿಯಲಾಯಿತು. 

 ಈ ಸಂದರ್ಭ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಯಶೋಧ, ಪೂಜಾ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಪಂಚಾಯತ್‌ ಸದಸ್ಯರು,   ಕೃಷಿ ಸಖಿ, ಕೃಷಿ ಉದ್ಯೋಗ ಸಖಿ, ಪಂಚಾಯತ್‌ ಸಿಬ್ಬಂದಿಗಳು, ಒಕ್ಕೂಟದ ಪದಾಧಿಕಾರಿಗಳು, ಒಕ್ಕೂಟದ ಕೋಶಾಧಿಕಾರಿ ಸ್ವಾತಿ, ಜೊತೆ ಕಾರ್ಯದರ್ಶಿ ಸಪ್ನ ಹಾಗೂ  ಸಂಜೀವಿನಿ ಸದಸ್ಯರು ಉಪಸ್ಥಿತರಿದ್ದರು.

 ವಿಜಯಲಕ್ಷ್ಮಿ ಭಟ್‌ ಪ್ರಾರ್ಥಿಸಿದರು. ಒಕ್ಕೂಟದ ಕಾರ್ಯದರ್ಶಿ ಆಶಾ ಕಾರ್ಯಕ್ರಮ ನಿರೂಪಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.