• Home  
  • ಪಣಿಯೂರು – ಪಡುಬಿದ್ರಿ ರೈಲ್ವೆ ನಿಲ್ದಾಣದ ಕಾಂಕ್ರಿಟ್‌ ಸಂಪರ್ಕ ರಸ್ತೆಯ ಅನಾವರಣ (Paniyur – Padubidri railway station concrete connection road unveiled)
- social service - ವ್ಯವಹಾರ - ಸಂಘ, ಸಂಸ್ಥೆಗಳು

ಪಣಿಯೂರು – ಪಡುಬಿದ್ರಿ ರೈಲ್ವೆ ನಿಲ್ದಾಣದ ಕಾಂಕ್ರಿಟ್‌ ಸಂಪರ್ಕ ರಸ್ತೆಯ ಅನಾವರಣ (Paniyur – Padubidri railway station concrete connection road unveiled)

Share: ಪಣಿಯೂರು – ಪಡುಬಿದ್ರಿ ರೈಲ್ವೆ ನಿಲ್ದಾಣದ ಕಾಂಕ್ರಿಟ್‌ ಸಂಪರ್ಕ ರಸ್ತೆಯ ಅನಾವರಣ ಅದಾನಿ ಸಿಎಸ್‌ಆರ್ ರೂ. 20 ಲಕ್ಷ ಯೋಜನಾ ವೆಚ್ಚದಲ್ಲಿ ನಿರ್ಮಾಣವಾದ ರಸ್ತೆ (Padubidri) ಪಡುಬಿದ್ರಿ : ಅದಾನಿ ಸಿಎಸ್‌ಆರ್ ರೂ. 20 ಲಕ್ಷ ಯೋಜನಾ ವೆಚ್ಚದಲ್ಲಿ ನೂತನವಾಗಿ ಕಾಂಕ್ರೆಟೀಕರಣಗೊಂಡ ಪಣಿಯೂರು-ಪಡುಬಿದ್ರಿ ರೈಲ್ವೆ ನಿಲ್ದಾಣದ ಸಂಪರ್ಕ ರಸ್ತೆಯನ್ನುಅದಾನಿ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ಉದ್ಘಾಟಿಸಿದರು. ಇದೇ ಸಂದರ್ಭ ರೈಲ್ವೆ ನಿಲ್ದಾಣದವರೆಗೆ ಸುಮಾರು ೫೮೦ ಮೀಟರ್ ಉದ್ದದ ರೂ. 20 ಲಕ್ಷ ವೆಚ್ಚದ ರಸ್ತೆಯ […]

(Padubidri) ಪಡುಬಿದ್ರಿ : ಅದಾನಿ ಸಿಎಸ್‌ಆರ್ ರೂ. 20 ಲಕ್ಷ ಯೋಜನಾ ವೆಚ್ಚದಲ್ಲಿ ನೂತನವಾಗಿ ಕಾಂಕ್ರೆಟೀಕರಣಗೊಂಡ ಪಣಿಯೂರು-ಪಡುಬಿದ್ರಿ ರೈಲ್ವೆ ನಿಲ್ದಾಣದ ಸಂಪರ್ಕ ರಸ್ತೆಯನ್ನುಅದಾನಿ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ಉದ್ಘಾಟಿಸಿದರು.

ಇದೇ ಸಂದರ್ಭ ರೈಲ್ವೆ ನಿಲ್ದಾಣದವರೆಗೆ ಸುಮಾರು ೫೮೦ ಮೀಟರ್ ಉದ್ದದ ರೂ. 20 ಲಕ್ಷ ವೆಚ್ಚದ ರಸ್ತೆಯ ವಿಸ್ತರಣಾ ಕಾಮಗಾರಿಗೆ ಭೂಮಿ ಪೂಜೆಯನ್ನು ನೆರವೇರಿಸಲಾಯಿತು.

  ಅದಾನಿ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ಮಾತನಾಡಿ, ಪಡುಬಿದ್ರಿ ರೈಲ್ವೆ ನಿಲ್ದಾಣ ಈ ಭಾಗದ ಪ್ರಮುಖ ಪ್ರವೇಶ ದ್ವಾರವಾಗಿದೆ.  ಈ ರಸ್ತೆಯ ಸುಧಾರಣೆಗಾಗಿ ಬೆಳಪು ಗ್ರಾಮ ಪಂಚಾಯತ್ 2024 -25ರ ಕಾರ್ಯಯೋಜನೆಯಲ್ಲಿ ನಮಗೆ ವಿನಂತಿಸಿತ್ತು. ಅದಾನಿ ಸಂಸ್ಥೆಯು ತಕ್ಷಣ ಕ್ರಮ ಕೈಗೊಂಡು ಮೊದಲ ಹಂತದಲ್ಲಿ 416 ಮೀಟರ್ ರಸ್ತೆ ಕಾಂಕ್ರೀಟೀಕರಣ ಪೂರ್ಣಗೊಳಿಸಿದೆ.  ಉಳಿದ ಹಂತವನ್ನು ಈ ಆರ್ಥಿಕ ವರ್ಷದ ಕ್ರಿಯಾ ಯೋಜನೆಯಲ್ಲಿ ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದರು. 

 ಬೆಳಪು ಗ್ರಾಮ ಪಂಚಾಯತ್ ಇದುವರೆಗೂ ಸುಮಾರು ರೂ. 2 ಕೋಟಿ ಮೌಲ್ಯದ ಮೂಲಭೂತ ಸೌಕರ್ಯ ಕಾಮಗಾರಿಗಳ ಲಾಭ ಅದಾನಿ ಸಿಎಸ್‌ಆರ್ ಯೋಜನೆಯಲ್ಲಿ ಪಡೆದಿದ್ದು, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲೂ ಸಹ ಹಲವಾರು ಸಾಮಾಜಿಕ ಬೆಳವಣಿಗೆಯ ಯೋಜನೆಗಳ ಸವಲತ್ತನ್ನು ಗ್ರಾಮಗಳಿಗೆ ತಲುಪಿಸುತ್ತಿದೆ ಎಂದು ಆಳ್ವ ಅವರು ಹೇಳಿದರು.

ಈ ಸಂದರ್ಭ ಬೆಳಪು ಗ್ರಾಪಂ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ, ಉಪಾಧ್ಯಕ್ಷೆ ಶೋಭಾ ಭಟ್, ಪಂಚಾಯತ್ ಸದಸ್ಯರಾದ ಶರತ್ ಕುಮಾರ್, ಸುಲೈಮಾನ್, ನಫಿಸಾ, ಮಾಜಿ ಸದಸ್ಯರಾದ ಕರುಣಾಕರ ಶೆಟ್ಟಿ, ಮಾಜಿ ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಯು.ಶೇಖಬ್ಬ, ಅದಾನಿ ಪವರ್ ಲಿಮಿಟೆಡ್‌ನ ಅಸೋಸಿಯೇಟ್ ಜನರಲ್ ಮ್ಯಾನೆಜರ್ ರವಿ ಆರ್. ಜೇರೆ, ಅದಾನಿ ಫೌಂಡೇಶನ್‌ನ    ಅನುದೀಪ್, ಗ್ರಾಮಸ್ಥರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.