ಮಣಿಪಾಲ ಮಾಧವ ಕೃಪಾ ಶಾಲಾ ಶಿಕ್ಷಕಿ ದಿವ್ಯಾ ಕುಮಾರಿ ಅವರಿಗೆ ಪಿಎಚ್‌ಡಿ ಪದವಿ
(Manipal)ಮಣಿಪಾಲ: ಮಣಿಪಾಲದ ಮಾಧವ ಕೃಪಾ ಶಾಲೆಯ ರಸಾಯನಶಾಸ್ತ್ರ ವಿಭಾಗದ ಶಿಕ್ಷಕಿ ಶ್ರೀಮತಿ ದಿವ್ಯಾ ಕುಮಾರಿಯವರಿಗೆ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಇವರು ಬಂಟಕಲ್ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ (Bantakal Shri Madhva Vadiraja Engineering College) ಸಂಶೋಧನಾ ಕೇಂದ್ರದರಸಾಯನಶಾಸ್ತ್ರ ವಿಭಾಗದ ಮಾಜಿ ಮುಖ್ಯಸ್ಥರಾದ ಡಾ. ರೀನಾ ಕುಮಾರಿ ಪಿ ಡಿ ಇವರ ಮಾರ್ಗದರ್ಶನದಲ್ಲಿ ಮಂಡಿಸಿದ ʼಕಂಪೇರಿಟೀವ್ ಸ್ಟಡಿ ಆಫ್ ಕೋರೋಶನ್ ಇನ್ಹಿಬೀಶನ್ ಆಫ್ ಅಲ್ಯುಮಿನಿಯಂ ಆ್ಯಂಡ್ ಅಲ್ಯುಮಿನಿಯಂ ಅಲಾಯ್ 6063 ಇನ್ ಅಸಿಡಿಕ್ ಮಿಡಿಯಂ ಬೈ ಸಂಮ್ ಇಕೋಫ್ರೆಂಡ್ಲಿ ಇನ್ಹಿಬೀಟರ್ಸ್ʼ(“Comparative Study of Corrosion Inhibition of Aluminium and Aluminium Alloy 6063 in Acidic Medium by some ecofriendly Inhibitors”)ಎಂಬ ಸಂಶೋಧನಾ ಪ್ರಬಂಧಕ್ಕೆ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಇವರ ಈ ಸಾಧನೆಗೆ ಬಂಟಕಲ್ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದನೆ ವ್ಯಕ್ತಪಡಿಸಿದ್ದಾರೆ.

