• Home  
  • ಮಣಿಪಾಲ: ಮಾಹೆಯಲ್ಲಿ ಹವಾಮಾನ ಬದಲಾವಣೆ ಬಗ್ಗೆ ಕಾರ್ಯಾಗಾರ (Workshop At MAHE ’Climate Change in the Eastern Highlandʼ)
- ಶಾಲಾ ಕಾಲೇಜು

ಮಣಿಪಾಲ: ಮಾಹೆಯಲ್ಲಿ ಹವಾಮಾನ ಬದಲಾವಣೆ ಬಗ್ಗೆ ಕಾರ್ಯಾಗಾರ (Workshop At MAHE ’Climate Change in the Eastern Highlandʼ)

Share: ಮಣಿಪಾಲ: ಮಾಹೆಯಲ್ಲಿ ಹವಾಮಾನ ಬದಲಾವಣೆ ಬಗ್ಗೆ ಕಾರ್ಯಾಗಾರ (Manipala)ಮಣಿಪಾಲ: ಹವಾಮಾನ ಬದಲಾವಣೆಯ ವಿದ್ಯಮಾನವು, ಇತರ ವಿಪತ್ತು ಪರಿಣಾಮಗಳ ಹೊರತಾಗಿ ಅಸ್ತಿತ್ವದಲ್ಲಿರುವ ಸಾಮಾಜಿಕ-ಆರ್ಥಿಕ ಅಸಮಾನತೆಗಳನ್ನು ಹೆಚ್ಚಿಸುತ್ತದೆ ಎಂದು ಪ್ರಾಧ್ಯಾಪಕಿ  ಡಾ ಮೈತ್ರೇಯಿ ಮಿಶ್ರಾ (Dr Maitreyee Mishra)ಹೇಳಿದರು. ಅವರು ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ (ಜಿಸಿಪಿಎಎಸ್) ಆಯೋಜಿಸಿದ್ದ ’Climate Change in the Eastern Highland‘ ವಿಷಯದ ಕುರಿತು ಮಾತನಾಡಿದ ಡಾ ಮೈತ್ರೇಯಿ, ಹವಾಮಾನ ಬದಲಾವಣೆಯು ಯಾವುದೇ  ಭೇದ ಭಾವವಿಲ್ಲದೆ ಪ್ರತಿಯೊಬ್ಬರ […]

ಮಣಿಪಾಲ: ಮಾಹೆಯಲ್ಲಿ ಹವಾಮಾನ ಬದಲಾವಣೆ ಬಗ್ಗೆ ಕಾರ್ಯಾಗಾರ

(Manipala)ಮಣಿಪಾಲ: ಹವಾಮಾನ ಬದಲಾವಣೆಯ ವಿದ್ಯಮಾನವು, ಇತರ ವಿಪತ್ತು ಪರಿಣಾಮಗಳ ಹೊರತಾಗಿ ಅಸ್ತಿತ್ವದಲ್ಲಿರುವ ಸಾಮಾಜಿಕ-ಆರ್ಥಿಕ ಅಸಮಾನತೆಗಳನ್ನು ಹೆಚ್ಚಿಸುತ್ತದೆ ಎಂದು ಪ್ರಾಧ್ಯಾಪಕಿ  ಡಾ ಮೈತ್ರೇಯಿ ಮಿಶ್ರಾ (Dr Maitreyee Mishra)ಹೇಳಿದರು.

ಅವರು ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ (ಜಿಸಿಪಿಎಎಸ್) ಆಯೋಜಿಸಿದ್ದ ’Climate Change in the Eastern Highland‘ ವಿಷಯದ ಕುರಿತು ಮಾತನಾಡಿದ ಡಾ ಮೈತ್ರೇಯಿ, ಹವಾಮಾನ ಬದಲಾವಣೆಯು ಯಾವುದೇ  ಭೇದ ಭಾವವಿಲ್ಲದೆ ಪ್ರತಿಯೊಬ್ಬರ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಿದರು.

 ಇದು ಆಹಾರ ಮತ್ತು ನೀರಿನಂತಹ ಜೀವನದ ಮೂಲಭೂತ ಅಗತ್ಯದ  ಮೂಲಗಳ ಮೇಲೆ ಗಂಭೀರವಾಗಿ ಪರಿಣಾಮ ಬೀರಬಹುದು. ಇದರಿಂದಾಗಿ ಅಸ್ತಿತ್ವದಲ್ಲಿರುವ ಅಸಮಾನತೆಗಳನ್ನು ವರ್ಧಿಸುತ್ತದೆ. ನಾವು ವಿಜ್ಞಾನಿಗಳ ಅಭಿಪ್ರಾಯ ಮಾತ್ರವಲ್ಲದೆ, ಜನರ ‘ದೇಸಿ’ ತಿಳುವಳಿಕೆಯನ್ನು ಗುರುತಿಸಬೇಕೆಂದರು.

ಈ ವಿದ್ಯಮಾನವು ‘Eastern Highlands’ ವಿಶೇಷವಾಗಿ ಒಡಿಸ್ಸಾದಲ್ಲಿ ಕಾಣಬಹುದು ಎಂದರು.

   ಡಾ ಮೈತ್ರೇಯಿ ಮಿಶ್ರಾ ಇವರು ಸದ್ಯ ಮಾಹೆಯ MICಯಲ್ಲಿ  ಪ್ರಾಧ್ಯಾಪಕರಾಗಿದ್ದು, ಜರ್ಮನಿಯ ಹೈಡೆಲ್ ಬರ್ಗ್  ವಿಶ್ವವಿದ್ಯಾಲಯದಿಂದ ಪಿ ಹೆಚ್ ಡಿ  ಪಡೆದಿದ್ದಾರೆ. 

  ಜಿಸಿಪಿಎಎಸ್ ಮುಖ್ಯಸ್ಥ, ಪ್ರೊ. ವರದೇಶ್ ಹಿರೇಗಂಗೆ (GCPAS Head Prof. Varadesh Hiregange) ಕಾರ್ಯಕ್ರಮವನ್ನು ನಿರ್ವಹಿಸಿದರು.

 ತನಿಷ್ಕಾ ಕೋಟ್ಯಾನ್ (Thanishka Kotian) ಕಾರ್ಯಕ್ರಮವನ್ನು ಸಂಯೋಜಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.