Tag: GCPAS Head Prof. Varadesh Hiregange

ತಂತ್ರಜ್ಞಾನ

ಮಾಹೆಯ (ಜಿಸಿಪಿಎಎಸ್)ನ ಆಶ್ರಯದಲ್ಲಿ Unbearable being of lightness’ ಸಾಕ್ಷ್ಯಚಿತ್ರ ಪ್ರದರ್ಶನ 

ಮಾಹೆಯ (ಜಿಸಿಪಿಎಎಸ್)ನ ಆಶ್ರಯದಲ್ಲಿ Unbearable being of lightness’ ಸಾಕ್ಷ್ಯಚಿತ್ರ ಪ್ರದರ್ಶನ  ಉಡುಪಿ:ಸಾಕ್ಷ್ಯಚಿತ್ರಗಳು ವಾಸ್ತವವನ್ನು ಅದು ಇದ್ದ ಹಾಗೆ ಹಿಡಿಯಲು ಯತ್ನಿಸುತ್ತವೆ. ವಾಸ್ತವವಾದ ಎನ್ನುವುದು ವಾಸ್ತವತೆಗೆ ಕಲಾತ್ಮಕತೆಯ ಸ್ಪರ್ಶ ನೀಡುವ ಪ್ರಯತ್ನ ಮಾಡುತ್ತವೆ, ಎಂದು ಪ್ರಶಸ್ತಿ ವಿಜೇತ, ಚಲನಚಿತ್ರ ನಿರ್ದೇಶಕ ಪಿ.ಎನ್.ರಾಮಚಂದ್ರ ಹೇಳಿದರು. ತಮ್ಮ Unbearable being of  lightness’ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಿದ ಬಳಿಕ ವಿದ್ಯಾರ್ಥಿಗಳೊಂದಿಗೆ ಮಾತನಾಡುತ್ತಾ ಸಾಕ್ಷ್ಯಚಿತ್ರಗಳು ಹಸಿ ವಾಸ್ತವವನ್ನು ಸೆರೆಹಿಡಿಯುತ್ತಲೇ, ಒಂದು ವಾಸ್ತವವಾದಿ ಕಲಾತ್ಮಕತೆಯನ್ನು ಅನುಸರಿಸುತ್ತವೆ. ಕೆಲವು ಸಂದರ್ಭಗಳಲ್ಲಿ ಈ ಕಲಾತ್ಮಕತೆಗಿಂತಲೂ ಅವುಗಳ ವಿಷಯ ಹೆಚ್ಚಿನ ಪ್ರಾಧಾನ್ಯ ಪಡೆಯುತ್ತವೆ ಎಂದರು.  ಈ ಸಾಕ್ಷ್ಯಚಿತ್ರವನ್ನು ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆಂಡ್ ಸೈನ್ಸಸ್(ಜಿಸಿಪಿಎಎಸ್)ನ ಆಶ್ರಯದಲ್ಲಿ ಪ್ರದರ್ಶಿಸಲಾಯಿತು.   ಮೂಲತಃ ಉಡುಪಿಯವರಾದ ರಾಮಚಂದ್ರ ಇವರು ಪ್ರಸಿದ್ಧ ಪುಣೆ ಫಿಲ್ಮ್ ಇನ್ಸ್ಟಿಟ್ಯೂಟ್ ನಲ್ಲಿ ಚಿತ್ರ ನಿರ್ದೇಶನವನ್ನು ಅಭ್ಯಾಸಮಾಡಿ ನಂತರ ಮುಂಬೈಯಲ್ಲಿ ನೆಲೆಸಿದರು. ‘ಹಾರ್ಟ್ ಟ್ರಬಲ್ಸ್ ಆಫ್ ರಾಮಚಂದ್ ಯಾವತ್ಮಲ್ ತಿರಿಚುಯಿನಪಳ್ಳಿ ಅಜಮಘರ್’, ‘ಸುದ್ಧ’, ‘ಪುಟಾಣಿ ಪಾರ್ಟಿ’, ‘ರೈಸ್ ಆಂಡ್ ಸಾಂಬಾರ್’ ಇವು ಇವರ ರಾಷ್ಟ್ರೀಯ-ಅಂತಾರಾಷ್ಟ್ರೀಯ ಮನ್ನಣೆ ಪಡೆದ ಮುಖ್ಯ ಚಲನಚಿತ್ರಗಳಾಗಿವೆ.   ಅವರು ಈಗ ಗುಜರಾತಿನ ಕರ್ಣಾವತಿ ವಿಶ್ವವಿದ್ಯಾಲಯದ ಫಿಲ್ಮ್ ಸ್ಕೂಲಿನ ಮುಖ್ಯಸ್ಥರಾಗಿದ್ದಾರೆ. ಅವರ ಬಹುಚರ್ಚಿತ ಸಾಕ್ಷ್ಯಚಿತ್ರವಾದ ‘Unbearable being of Lightness’ ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದ ರೋಹಿತ್ ವೇಮುಲಾ ಆತ್ಮಹತ್ಯೆಯ ಸುತ್ತಮುತ್ತಲಿನ ಘಟನೆಗಳನ್ನು ಒಳಗೊಂಡಿದೆ. ರಾಮಚಂದ್ರ ಆ ಘಟನೆ ನಡೆಯುವ ಹೊತ್ತಿಗೆ ಅಲ್ಲಿಯಾ ಮೀಡಿಯಾ ವಿದ್ಯಾರ್ಥಿಗಳಿಗೆ ಕಾರ್ಯಾಗಾರ ನಡೆಸಿಕೊಡಲು ಹೈದರಾಬಾದ್ ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿದ್ದರು. ಹೀಗಾಗಿ ಈ ಸಾಕ್ಷ್ಯಾಚಿತ್ರ ತುಂಬಾ ಮಹತ್ವ ಪಡೆದಿದೆ. ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತಾ ಚಿತ್ರ ನಿರ್ದೇಶಕರಾದ ರಾಮಚಂದ್ರ ಆ ಸಂದರ್ಭದ ಅಪಾರ ವಿಷಾದವನ್ನು ಚಿತ್ರ, ಅಲ್ಲಿ ನಡೆದ ಘಟನೆಗಳು, ಪತ್ರಿಕಾ ವರದಿ ಹಾಗೂ ವಿದ್ಯಾರ್ಥಿಯ ಕೊನೆಯ ಪತ್ರ ಇವುಗಳನ್ನು ಆಧರಿಸಿ ಸೆರೆಹಿಡಿಯಲು ಯತ್ನಿಸಿದೆ ಎಂದರು.   ವಿದ್ಯಾರ್ಥಿಗಳು ಸಾಕ್ಷ್ಯಚಿತ್ರದ ಮೂಲಕ ತೋರಿಸಲ್ಪಡುವ ಸಾಮಾಜಿಕ ತಾರತಮ್ಯ, ದೃಶ್ಯ ರೂಪಕಗಳು, ಸಂಗೀತ, ಕಥನದ ಆಕೃತಿ, ಫೈಜ್ ಅಹಮದ್ ಫೈಜ್ ಕವಿತೆ ಇವೆಲ್ಲವನ್ನೂ ಚರ್ಚಿಸಿದರು. ಜಿಸಿಪಿಎಎಸ್ ನ ಮುಖ್ಯಸ್ಥ ಪ್ರೊ. ವರದೇಶ್ ಹಿರೇಗಂಗೆ, ಪ್ರೊ.ನೇಮಿರಾಜ್ ಶೆಟ್ಟಿ, ಡಾ. ಜನಾರ್ದನ್ ಹಾವಂಜೆ, ಡಾ. ಭ್ರಮರಿ ಶಿವಪ್ರಕಾಶ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.   ಈ ಸಾಕ್ಷ್ಯಚಿತ್ರದ ಶೀರ್ಷಿಕೆ ಪ್ರಸಿದ್ಧ ಫ್ರೆಂಚ್ ಲೇಖಕ ಮಿಲನ್ ಕುಂದೇರಾ ಅವರ ಕಾದಂಬರಿಯನ್ನು ನೆನಪಿಸುತ್ತದೆ.

ಫ್ಯಾಷನ್

ಮಾಹೆಯ  ಜಿಸಿಪಿಎಎಸ್ ಆಶ್ರಯದಲ್ಲಿ ಕೋಭಾರ್, ಮಂಜೂಷಾ ಸಾಂಪ್ರದಾಯಿಕ ಕಲಾ ಪ್ರಕಾರಗಳ ಕುರಿತ ಕಾರ್ಯಕ್ರಮ (Mahe: GCPAS: Kobhar and Manjusha Paintings)

ಮಾಹೆಯ  ಜಿಸಿಪಿಎಎಸ್ ಆಶ್ರಯದಲ್ಲಿ ಕೋಭಾರ್, ಮಂಜೂಷಾ ಸಾಂಪ್ರದಾಯಿಕ ಕಲಾ ಪ್ರಕಾರಗಳ ಕುರಿತ ಕಾರ್ಯಕ್ರಮ (Manipala)ಮಣಿಪಾಲ:ಕಲೆಯು ಜಾತಿ ಮತ್ತು ಧರ್ಮಗಳ ಅಡೆತಡೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ ಎಂದು ಬಿಹಾರದ ಕಲಾವಿದರಾದ ಶ್ರವಣ್ ಕುಮಾರ್ ಪಾಸ್ವಾನ್ ಮತ್ತು ಪವನ್ ಕುಮಾರ್ ( Shravan Kumar Paswan and Pavan Kumar)ಹೇಳಿದರು.  ಅವರು ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್(ಜಿಸಿಪಿಎಎಸ್)ನ ಆಶ್ರಯದಲ್ಲಿ ನಡೆದ ಕೋಭಾರ್ ಮತ್ತು ಮಂಜೂಷಾ ಸಾಂಪ್ರದಾಯಿಕ ಕಲಾ ಪ್ರಕಾರಗಳ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದರು.  ಈ ಸಾಂಪ್ರದಾಯಿಕ ಕಲೆಗಳು ಆರಂಭದಲ್ಲಿ ಕೆಲವು ಜಾತಿ ಮತ್ತು ಧರ್ಮಕ್ಕೆ ಸೀಮಿತವಾಗಿದ್ದರೂ, ಇಂದು ಅವುಗಳನ್ನು ಮೀರಿ ಆಚರಣೆಯಲ್ಲಿದೆ.  ಈ ಕಲೆಯ ಪ್ರಕ್ರಿಯೆಯಲ್ಲಿ ಜಾತಿ ಮತ್ತು ಧರ್ಮಗಳ ನಡುವೆ ಪರಸ್ಪರ ಅವಲಂಬನೆ ಇದೆ ಎಂದು ಅವರು ಹೇಳಿದರು.  ಕೋಭಾರ್ ಚಿತ್ರಕಲೆಯು ಮದುವೆಯ ಪೂರ್ವ ಆಚರಣೆಯ ಭಾಗವಾಗಿದೆ. ಮಂಜುಷಾ ಚಿತ್ರಕಲೆ ಪೌರಾಣಿಕ ವಿಷಯಗಳನ್ನು ಹೊಂದಿದೆ. ಬಿದಿರಿನ ಕುಂಚ ಮತ್ತು ನೈಸರ್ಗಿಕ ಬಣ್ಣಗಳನ್ನು ಸಾಮಾನ್ಯವಾಗಿ ಇದರಲ್ಲಿ ಬಳಸಲಾಗುತ್ತದೆ ಎಂದು ಅವರು ವಿವರಿಸಿದರು.  ಜಿ.ಸಿ.ಪಿ.ಎ.ಎಸ್ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ (GCPAS Head Prof. Varadesh hiregange), ಡಾ.ಜನಾರ್ದನ್ ಹಾವಂಜೆ  (Dr. Janardhan Havanje), ಡಾ.ರಾಜಾರಾಂ ತೋಳ್ಪಾಡಿ, ಡಾ.ಭ್ರಮರಿ ಶಿವಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.

ಶಾಲಾ ಕಾಲೇಜು

 ‘ದ್ವಮ್ದ್ವ’ ಚಿತ್ರದ ಉದ್ದೇಶ ಲಿಂಗ ಸಂಬಂಧೀ ವಿಷಯಗಳ ಬಗ್ಗೆ ಜನರಿಗೆ ಶಿಕ್ಷಣ ನೀಡುವುದಾಗಿದೆ :  ಕ್ಲಿಂಗ್ ಜಾನ್ಸನ್ (“The purpose of ‘Dvamdva’ is to educate people on matters of gender identity’ : Kling Johnson, 

 ‘ದ್ವಮ್ದ್ವ‘ ಚಿತ್ರದ ಉದ್ದೇಶ ಲಿಂಗ ಸಂಬಂಧೀ ವಿಷಯಗಳ ಬಗ್ಗೆ ಜನರಿಗೆ ಶಿಕ್ಷಣ ನೀಡುವುದಾಗಿದೆ :  ಕ್ಲಿಂಗ್ ಜಾನ್ಸನ್  (Manipal) ಮಣಿಪಾಲ:  ‘ದ್ವಮ್ದ್ವ’ ಚಿತ್ರದ ಉದ್ದೇಶವು ಲಿಂಗ ಸಂಬಂಧೀ ವಿಷಯಗಳ ಬಗ್ಗೆ ಜನರಿಗೆ ಶಿಕ್ಷಣ ನೀಡುವುದಾಗಿದೆ ಎಂದು ನಿರ್ದೇಶಕ ಕ್ಲಿಂಗ್ ಜಾನ್ಸನ್ ಹೇಳಿದರು   ಅವರ ಚಲನಚಿತ್ರ ‘ ದ್ವಮ್ದ್ವ’’ ಇತ್ತೀಚೆಗೆ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಥಮ ಪ್ರದರ್ಶನಗೊಂಡಿತು.  ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ (Gandhian Centre for Philosophical Arts and Sciences (GCPAS), MAHE) ಆಶ್ರಯದಲ್ಲಿ ಚಲನಚಿತ್ರವನ್ನು ಪ್ರದರ್ಶಿಸಿದ ನಂತರ, ವಿದ್ಯಾರ್ಥಿಗಳು ಮತ್ತು ಇತರರೊಂದಿಗೆ ಸಂವಾದ ನಡೆಸಿದರು.  ಸಾಂಪ್ರದಾಯಿಕ ಸಮಾಜಗಳು ಲಿಂಗ ಸಂಬಂಧೀ ವಿಷಯಗಳ ಕುರಿತು ಪೂರ್ವಾಗ್ರಹ ಹೊಂದಿವೆ. ಲಿಂಗದ ಬಗ್ಗೆ, ಜ್ಞಾನದ ಬೆಳವಣಿಗೆಯೊಂದಿಗೆ, ನಮ್ಮ ದೃಷ್ಟಿಕೋನವು ಬದಲಾಗಬೇಕು ಮತ್ತು ಅದರಿಂದ ಸಮಾಜಗಳು ಶಿಕ್ಷಣ ಪಡೆಯಬೇಕು ಎಂದು ಅವರು ಅಭಿಪ್ರಾಯಪಟ್ಟರು. ‘ ದ್ವಮ್ದ್ವ‘, ‘ದೀಪವಿರದ ದಾರಿಯಲ್ಲಿ‘ (ಲೇಖಕ: ಸುಶಾಂತ್) ಕಾದಂಬರಿ ಆಧಾರಿತ ಚಲನಚಿತ್ರವಾಗಿದ್ದು, ಯುವ ಯಕ್ಷಗಾನ ಕಲಾವಿದನ ಕಥೆಯ ಮೂಲಕ ಇದು ಲಿಂಗ ಸಂಬಂಧೀ ಸಂಕೀರ್ಣತೆಗಳನ್ನು ತೆರೆದಿಡುತ್ತದೆ. ಮೊದಲು ಹಲವಾರು ಕಿರುಚಿತ್ರಗಳನ್ನು ನಿರ್ಮಿಸಿದ ಕ್ಲಿಂಗ್ ಜಾನ್ಸನ್ ಅವರ ಮೊದಲ ಪೂರ್ಣಪ್ರಮಾಣದ ಚಲನಚಿತ್ರವಾಗಿದೆ.  ಸ್ವತಃ ಬರಹಗಾರರಾದ ಅವರು ಕಸ್ತೂರ್ಬಾ ಆಸ್ಪತ್ರೆಯಲ್ಲಿ ಅಗ್ನಿಶಾಮಕ ಸುರಕ್ಷತಾ ಅಧಿಕಾರಿಯೂ ಆಗಿದ್ದಾರೆ. ನನ್ನ ಸ್ವಂತ ಸ್ನೇಹಿತರು ಮತ್ತು ಸಹಪಾಠಿಗಳನ್ನು ಒಳಗೊಂಡಿರುವ ಜನರಿಂದ ಕ್ರೌಡ್ ಫಂಡಿಂಗ್ ಮೂಲಕ ಹಣಕಾಸು ಸಂಗ್ರಹಿಸಿ ನಾನು ಈ ಚಲನ ಚಿತ್ರವನ್ನು ನಿರ್ಮಿಸಿದ್ದೇನೆ ” ಎಂದು ವಿವರಿಸಿದರು. ಮುಖ್ಯ ಅತಿಥಿ ಜಿಬು ಥಾಮಸ್, ಸಹಾಯಕ ನಿರ್ದೇಶಕ (ಯೋಜನೆ) ಕಸ್ತೂರ್ಬಾ ಆಸ್ಪತ್ರೆ(Mr. Jibu Thomas, Associate Director (Planning) Kasthurba  Hospital),  ಚಿತ್ರಕಲೆಯಂತಹ ಕಲೆಗಳ ಅಗತ್ಯವನ್ನು ಒತ್ತಿ ಹೇಳಿದರು. ಮತ್ತು ಶ್ರೀ ಕ್ಲಿಂಗ್ ಜಾನ್ಸನ್ ಅವರ ಪ್ರಯತ್ನವನ್ನು ಹೊಗಳಿದರು.   ಜಿಸಿಪಿಎಎಸ್ ಮುಖ್ಯಸ್ಥ ಪ್ರೊ. ವರದೇಶ್ ಹಿರೇಗಂಗೆ(GCPAS Head Prof. Varadesh  Hiregange, ಕ್ಲಿಂಗ್ ಅವರು ಸೂಕ್ಷ್ಮ ವಿಷಯವನ್ನು ಸಂವೇದನಾಶೀಲವಾಗಿ ಚಲನಚಿತ್ರ ಮಾಡಿದ್ದಾರೆ. ಸ್ಥಳೀಯ ಭಾಷೆ, ಸ್ಥಳೀಯತೆ ಮತ್ತು ಪಾತ್ರಗಳು ಚಿತ್ರವನ್ನು ಮನಮುಟ್ಟುವಂತೆ ಮಾಡಿದೆ ಎಂದರು.   ಲಿಂಗ ಸಂಬಂಧೀ ಬಿಕ್ಕಟ್ಟಿನಿಂದ ಬಳಲುತ್ತಿರುವವರ ಸೂಕ್ಷ್ಮತೆಗಳನ್ನು ಚಿತ್ರ ಹೊರತಂದಿದೆ ಎಂದು ಮನಶ್ಶಾಸ್ತ್ರಜ್ಞೆ ಡಾ. ಜಯಶ್ರೀ ಭಟ್ (Psychologist Dr Jayashree Bhat)ಹೇಳಿದರು.  ದ್ವಮ್ದ್ವ ಚಿತ್ರ ಕಲಾವಿದರು- ಸಿತೇಶ್ ಸಿ ಗೋವಿಂದ್ (ಸಹ ನಿರ್ದೇಶಕ), ರಾಜೇಂದ್ರ ನಾಯಕ್, ಬೆನ್ಸು ಪೀಟರ್, ಅಭಿಲಾಷ್ ಶೆಟ್ಟಿ, ಪ್ರಭಾಕರ ಕುಂದರ್, ಭಾಸ್ಕರ್ ಮಣಿಪಾಲ್, ಆಡನ್ ಕ್ಲಿಯೋನ್, ಗಣೇಶ್, ರಾಧಿಕಾ ಭಟ್, ಭಾರತಿ ತಮ್ಮ ಅನುಭವಗಳನ್ನು ಹಂಚಿಕೊಂಡರು. ಹಾಗೂ ಅವರನ್ನು ಸನ್ಮಾನಿಸಲಾಯಿತು.

ಶಾಲಾ ಕಾಲೇಜು

ಮಣಿಪಾಲ: ಮಾಹೆಯಲ್ಲಿ ಹವಾಮಾನ ಬದಲಾವಣೆ ಬಗ್ಗೆ ಕಾರ್ಯಾಗಾರ (Workshop At MAHE ’Climate Change in the Eastern Highlandʼ)

ಮಣಿಪಾಲ: ಮಾಹೆಯಲ್ಲಿ ಹವಾಮಾನ ಬದಲಾವಣೆ ಬಗ್ಗೆ ಕಾರ್ಯಾಗಾರ (Manipala)ಮಣಿಪಾಲ: ಹವಾಮಾನ ಬದಲಾವಣೆಯ ವಿದ್ಯಮಾನವು, ಇತರ ವಿಪತ್ತು ಪರಿಣಾಮಗಳ ಹೊರತಾಗಿ ಅಸ್ತಿತ್ವದಲ್ಲಿರುವ ಸಾಮಾಜಿಕ-ಆರ್ಥಿಕ ಅಸಮಾನತೆಗಳನ್ನು ಹೆಚ್ಚಿಸುತ್ತದೆ ಎಂದು ಪ್ರಾಧ್ಯಾಪಕಿ  ಡಾ ಮೈತ್ರೇಯಿ ಮಿಶ್ರಾ (Dr Maitreyee Mishra)ಹೇಳಿದರು. ಅವರು ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ (ಜಿಸಿಪಿಎಎಸ್) ಆಯೋಜಿಸಿದ್ದ ’Climate Change in the Eastern Highland‘ ವಿಷಯದ ಕುರಿತು ಮಾತನಾಡಿದ ಡಾ ಮೈತ್ರೇಯಿ, ಹವಾಮಾನ ಬದಲಾವಣೆಯು ಯಾವುದೇ  ಭೇದ ಭಾವವಿಲ್ಲದೆ ಪ್ರತಿಯೊಬ್ಬರ ಮೇಲೆ […]

ಪ್ರಚಲಿತ

 ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ನ ಆಶ್ರಯದಲ್ಲಿ ಉಪನ್ಯಾಸ-ನೃತ್ಯ ಪ್ರದರ್ಶನ (Gandhian Centre for Philosophical Arts and Sciences (GCPAS), MAHE, “Dance and Peace: an artist psychiatrist’s view”)

ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ನ ಆಶ್ರಯದಲ್ಲಿ ಉಪನ್ಯಾಸ-ನೃತ್ಯ ಪ್ರದರ್ಶನ (Manipala) ಮಣಿಪಾಲ: ನೃತ್ಯ ಕಲೆಯು ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಿ ಮನಃಶಾಂತಿಗೆ ಕಾರಣವಾಗಲು ಸಾಧ್ಯ ಎಂದು ಖ್ಯಾತ ಮನೋವೈದ್ಯೆ-ನೃತ್ಯ ಕಲಾವಿದೆ, ಲೇಖಕಿ ಡಾ. ಕೆ.ಎಸ್. ಪವಿತ್ರಾ (Dr. SK Pavitra) ಹೇಳಿದರು. ಅವರು ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ನ ಆಶ್ರಯದಲ್ಲಿ ನಡೆದ “ನೃತ್ಯ ಮತ್ತು ಶಾಂತಿ – ಕಲಾವಿದೆ ಮತ್ತು ಮನೋವೈದ್ಯೆಯ ಒಳನೋಟ” ಎಂಬ […]

eMedia Kannada  @2025. All Rights Reserved.