ಮಣೂರು ಪಡುಕರೆ ಸರ್ಕಾರಿ ಸಂಯುಕ್ತ ಪ್ರೌಢ ಶಾಲೆಯ ಮೂವರು ವಿದ್ಯಾರ್ಥಿಗಳು “ಪ್ರತಿಭಾ ಕಾರಂಜಿಯಲ್ಲಿ” ರಾಜ್ಯಮಟ್ಟಕ್ಕೆ ಆಯ್ಕೆ
(Kota) ಕೋಟ: ಶ್ರೀದುರ್ಗಾ ಆಂಗ್ಲ ಮಾಧ್ಯಮ ಪ್ರೌಢಶಾಲೆ ಕೊಕ್ಕರ್ಣೆ ಇಲ್ಲಿ ನಡೆದ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ 2024-25 ಸ್ಪರ್ಧೆಯಲ್ಲಿ ಇಲ್ಲಿನ ವಿದ್ಯಾರ್ಥಿಗಳಾದ ಅನುಶ್ರೀ, ಸಮೃದ್ಧಿ ಎಸ್ ಮೊಗವೀರ ಮತ್ತು ಹರ್ಷಿತರವರು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಅನುಶ್ರೀ ಚರ್ಚಾ ಸ್ಪರ್ಧೆಯಲ್ಲಿ ಪ್ರಥಮ, ಸಮೃದ್ಧಿ ಎಸ್ ಮೊಗವೀರ ಕನ್ನಡ ಭಾಷಣದಲ್ಲಿ ದ್ವಿತೀಯ ಹಾಗೂ ಹರ್ಷಿತ ಇವರು ರಂಗೋಲಿ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.
ಇವರನ್ನು ಶಾಲಾ ಆಡಳಿತ ಮಂಡಳಿ, ಶಿಕ್ಷಕ ವೃಂದ, ಗೀತಾನಂದ ಟ್ರಸ್ಟ್ ಅಭಿನಂದನೆ ಸಲ್ಲಿಸಿದೆ.

