• Home  
  • ಮನುಷ್ಯ ಆರೋಗ್ಯವಂತನಾಗಿದ್ದರೆ,  ಸಮಾಜ  ಆರೋಗ್ಯಪೂರ್ಣ : ಎಮ್. ಎ  ಗಫೂರ್ (If a person is healthy, the society is healthy: M. A. Ghafoor)
- health

ಮನುಷ್ಯ ಆರೋಗ್ಯವಂತನಾಗಿದ್ದರೆ,  ಸಮಾಜ  ಆರೋಗ್ಯಪೂರ್ಣ : ಎಮ್. ಎ  ಗಫೂರ್ (If a person is healthy, the society is healthy: M. A. Ghafoor)

Share: ಮನುಷ್ಯ ಆರೋಗ್ಯವಂತನಾಗಿದ್ದರೆ,  ಸಮಾಜ  ಆರೋಗ್ಯಪೂರ್ಣ : ಎಮ್. ಎ.  ಗಫೂರ್ ಸಭಾಧ್ಯಕ್ಷತೆ ವಹಿಸಿದ ಕಾಪು ಘಟಕದ ಅಧ್ಯಕ್ಷರಾದ ಮುಹಮ್ಮದ್ ಇಕ್ಬಾಲ್ ಸಾಹೇಬ್ (Kaup) ಕಾಪು: ಗ್ರಾಮೀಣ ಪ್ರದೇಶದ ಜನರ ಆರೋಗ್ಯದ ಬಗ್ಗೆ ಕಾಳಜಿ ಇಟ್ಟು, ಅವರಿಗಾಗಿ ಆಯಯಾ ಸಂದರ್ಭದಲ್ಲಿ ವಿವಿಧ ಅಂಗಾಂಗದ  ತಪಾಸಣಾ ಶಿಬಿರ ಹಮ್ಮಿಕೊಂಡು, ಖ್ಯಾತ ಆಸ್ಪತ್ರೆಯ ವೈದ್ಯರ ಸಹಯೋಗದೊಂದಿಗೆ ಉಚಿತವಾಗಿ ಚಿಕಿತ್ಸೆ ನೀಡಿತ್ತಿರುವುದು ಶ್ಲಾಘನೀಯ ಎಂದು ಕರಾವಳಿ ಪ್ರಾಧಿಕಾರದ ಅಧ್ಯಕ್ಷ  ಎಮ್. ಎ. ಅಬ್ದುಲ್ ಗಫೂರ್  ಹೇಳಿದರು.  ಅವರು ಜಮೀಯ್ಯತುಲ್ ಫಲಾಹ್ ಕಾಪು […]

(Kaup) ಕಾಪು: ಗ್ರಾಮೀಣ ಪ್ರದೇಶದ ಜನರ ಆರೋಗ್ಯದ ಬಗ್ಗೆ ಕಾಳಜಿ ಇಟ್ಟು, ಅವರಿಗಾಗಿ ಆಯಯಾ ಸಂದರ್ಭದಲ್ಲಿ ವಿವಿಧ ಅಂಗಾಂಗದ  ತಪಾಸಣಾ ಶಿಬಿರ ಹಮ್ಮಿಕೊಂಡು, ಖ್ಯಾತ ಆಸ್ಪತ್ರೆಯ ವೈದ್ಯರ ಸಹಯೋಗದೊಂದಿಗೆ ಉಚಿತವಾಗಿ ಚಿಕಿತ್ಸೆ ನೀಡಿತ್ತಿರುವುದು ಶ್ಲಾಘನೀಯ ಎಂದು ಕರಾವಳಿ ಪ್ರಾಧಿಕಾರದ ಅಧ್ಯಕ್ಷ  ಎಮ್. ಎ. ಅಬ್ದುಲ್ ಗಫೂರ್  ಹೇಳಿದರು.

 ಅವರು ಜಮೀಯ್ಯತುಲ್ ಫಲಾಹ್ ಕಾಪು ಘಟಕ,  ಸಿ. ಎಸ್. ಐ. ಲೋOಬಾರ್ಡ್ ಸ್ಮಾರಕ ಆಸ್ಪತ್ರೆ, ಉಡುಪಿ, ಜಯಂಟ್ಸ್ ಬ್ರಹ್ಮಾವರ ಹಾಗೂ ವೈದ್ಯಕೀಯ ಪ್ರತಿನಿಧಿಗಳ ಸಂಘ ಕೆ. ಎಸ್. ಎಮ್ ಮತ್ತು ಎಸ್. ಆರ್. ಎ ಇವರ ಸಹಯೋಗದೊಂದಿಗೆ,  ಕಾಪು ಮಲ್ಲಾರು  ಗ್ರಾಮದಲ್ಲಿರುವ ಆಯುಷ್ ಕ್ಲಿನಿಕ್ ನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತಾಡಿದರು.

  ಮುಖ್ಯ ಅತಿಥಿ ಮದುಸೂಧನ್ ರವರು ಸಂದರ್ಭೋಚಿತವಾಗಿ ಮಾತಾಡಿದರು.

 ಸಭಾಧ್ಯಕ್ಷತೆಯನ್ನು ಕಾಪು ಘಟಕದ ಅಧ್ಯಕ್ಷರಾದ ಮುಹಮ್ಮದ್ ಇಕ್ಬಾಲ್ ಸಾಹೇಬ್ ವಹಿಸಿದ್ದರು.

  ಕಾರ್ಯಕ್ರಮವು ಉಸ್ಮಾನ್ ಆಲಿಮ್ ಖಾನ್ ರವರ ಕುರಾನ್‌ ಪಠಣದೊಂದಿಗೆ  ಪ್ರಾರಂಭವಾಯಿತು.

   ವೇದಿಕೆಯಲ್ಲಿ ಡಾ. ಕೆವಿನ್ ಪಾಂಡ್ಯನ್, ಅಣ್ಣಯ್ಯ ದಾಸ್, ಸುಂದರ ಪೂಜಾರಿ, ಡಾ. ಅಭಿನಯ್  ಅಶೋಕ್,  ಡಾ. ಅರ್ಜುನ್ ಬಲ್ಲಾಳ್,  ಡಾ. ರೆಬಕ್ಕ ಮೃದುಲಾ  ಸಿಂಗ್, ಡಾ. ವೈಭವ್, ಡಾ. ಪ್ರತೀಕ್ಷಾ, ರೋಹಿತ್ ರತ್ನಾಕರ ಕೋಟ್ಯಾನ್,  ಸಹಾಯಕಿ ಪ್ರತೀಕ್ಷಾ, ಡಾ. ನಹೀದಾ ಬೆಳಪು, ಸಹಾಯಕಿ ತಸ್ರೀನ್ ಬೆಳಪು, ವಾರ್ಡ್  ಪುರಸಭಾ ಸದಸ್ಯ ನೂರುದ್ದಿನ್, ಜಮೀಯ್ಯತುಲ್ ಫಲಾಹ್ ನ ಉಪಾಧ್ಯಕ್ಷ ಬುಡಾನ್ ಸಾಹೇಬ್ ಪಡುಬಿದ್ರಿ, ಸನಾವರ್ ಶೇಕ್, ಸಿರಾಜುದ್ದಿನ್ ಕಾಝಿ, ಮುಸ್ತಾಕ್ ಇಬ್ರಾಹಿಂ, ಜೋಹರ್ ಪಡುಬಿದ್ರಿ, ಬಷೀರ್ ಅಹಮದ್,  ಸುಲೇಮಾನ್, ಸಾದಿಕ್ ದೀನಾರ್ ಉಪಸ್ಥಿತರಿದ್ದರು. 

 ಜಮೀಯ್ಯತುಲ್ ಫಲಾಹ್ ಕಾಪು ಘಟಕದ  ಪ್ರಧಾನ ಕಾರ್ಯದರ್ಶಿ ಶಬೀಹ್ ಅಹಮದ್ ಖಾಝಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಉಪಾಧ್ಯಕ್ಷ ಅನ್ವರ್ ಅಲಿ ಕಾಪು ಕಾರ್ಯಕ್ರಮ ನಿರೂಪಿಸಿದರು. ಕಾಪು ಘಟಕದ ಕೋಶಾಧಿಕಾರಿ ನಸೀರ್ ಅಹಮದ್ ರವರು ವಂದಿಸಿದರು.  

ಸುಮಾರು 70 ಮಂದಿ ಸ್ತ್ರೀ,  ಪುರುಷರು ಶಿಬಿರದ ಪ್ರಯೋಜನ ಪಡೆದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.