ಸಮಸ್ತ ವಿದ್ವಾಂಸ ಸಂಘಟನೆಯ 100 ವರ್ಷದ ಪ್ರಯುಕ್ತ ಧ್ವಜಾರೋಹಣ
ಮಲ್ಲಾರು ಮಜೂರು ಬದ್ರಿಯಾ ಜುಮ್ಮಾ ಮಸ್ಜಿದ್ ನಲ್ಲಿ ನಡೆದ ಕಾರ್ಯಕ್ರಮ
(Majuru) ಮಜೂರು : ಸಮಸ್ತ ಎಂಬ ವಿದ್ವಾಂಸ ಸಂಘಟನೆಗೆ ನೂರು ವರ್ಷ ಪೂರೈಸಿದ ಪ್ರಯುಕ್ತ ಮಲ್ಲಾರು ಮಜೂರು ಬದ್ರಿಯಾ ಜುಮ್ಮಾ ಮಸ್ಜಿದ್ ನಲ್ಲಿ ಧ್ವಜಾರೋಹಣ ಕಾರ್ಯಕ್ರಮ ನೆರವೇರಿತು,
ಮಸೀದಿ ಅಧ್ಯಕ್ಷ ಡಾ. ಎಂ ಫಾರೂಕ್ ರವರು ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭ ಅವರು ಮಾತನಾಡಿ, 1926 ಜೂನ್ 26ರಂದು ಪ್ರಾರಂಭಗೊಂಡಂತಹ ಸಮಸ್ತ ಉಲಮಾ ಸಂಘಟನೆ 100 ವರ್ಷ ಪೂರೈಸಿದ್ದು ಬಹಳ ಹೆಮ್ಮೆಯ ವಿಷಯವಾಗಿದೆ. ಸಮುದಾಯದ ಏಳಿಗೆಗಾಗಿ, ಶೈಕ್ಷಣಿಕ ಪ್ರಗತಿಗಾಗಿ, ದೇಶದ ಸರ್ವತೋಮುಖ ಅಭಿವೃದ್ಧಿಗೆ ಪ್ರಮುಖ ಪಾತ್ರ ವಹಿಸಿ ಸೇವೆ ಗೈದ ಈ ಸಂಘಟನೆಯ ನೂರನೇ ವರ್ಷದ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮ ನಮ್ಮಿಂದ ನಡೆಯುತ್ತಿರುವುದು ಬಹಳ ಸಂತೋಷಕರವಾಗಿದೆ ಎಂದರು.
ಸ್ಥಳೀಯ ಖತಿಬ್ ಅಬ್ದುರ್ರಶೀದ್ ಸಖಾಫಿ ದುವಾ ಪ್ರಾರ್ಥನೆ ನಡೆಸಿದರು. ಸಮಸ್ತ ಮದರಸ ತಪಾಸಣಾಧಿಕಾರಿ ಹಸನ್ ಸಖಾಫಿ, ಸುನ್ನೀ ಅಧ್ಯಾಪಕರ ಒಕ್ಕೂಟ ಇದರ ಉಡುಪಿ ಜಿಲ್ಲಾ ಕಾರ್ಯದರ್ಶಿ ಅಬ್ದುಲ್ ರಹಮಾನ್ ಸಅದಿ, ಆಡಳಿತ ಸಮಿತಿಯ ಉಪಾಧ್ಯಕ್ಷ ಹಸನಬ್ಬ ಮಜೂರು, ಕಾರ್ಯದರ್ಶಿ ಅಶ್ರಫ್ ಮೂಸ, ಕೋಶಾಧಿಕಾರಿ ಇಬ್ರಾಹಿಂ ಪಿಎಂ, ಕೊಂಬು ಗುಡ್ಡೆ ಇಮಾಂ ತಾಜುದ್ದೀನ್ ಸಖಾಫಿ, ಅಶ್ರಫ್ ಮದನಿ, ಸದಸ್ಯರಾದ ಹಸನಬ್ಬ ಗುಡ್ಡಗೇರಿ, ಅಬ್ದುಲ್ಲ ಚಂದ್ರನಗರ, ಹಸನ್ ಪಕೀರ್ಣಕಟ್ಟೆ, ಮಾಜಿ ಅಧ್ಯಕ್ಷ ಎಮ್ ಎಚ್ ಅಬ್ದುಲ್ ಹಮೀದ್, ಹಾಜಬ್ಬ, ಮಾಜಿ ಕಾರ್ಯದರ್ಶಿ ಅಬ್ದುಲ್ ಹಮೀದ್, ಫೈಝಲ್ ಮಜೂರು, ಮುಹಮ್ಮದ್ ಕರಂದಾಡಿ, ಇಮ್ರಾನ್, ಅಬ್ದುಲ್ ಹಮೀದ್ ಮುಕ್ರಿ ಉಪಸ್ಥಿತರಿದ್ದರು.

