• Home  
  •  ಮಲ್ಪೆ : ಮಹಿಳೆಗೆ ಥಳಿತ ಪ್ರಕರಣ – ಬಂಜಾರ ಸಮುದಾಯದ ಆಕ್ರೋಶ (Malpe: A case of beating a woman – Banjara community’s outrage)
- ಅಪರಾಧ

 ಮಲ್ಪೆ : ಮಹಿಳೆಗೆ ಥಳಿತ ಪ್ರಕರಣ – ಬಂಜಾರ ಸಮುದಾಯದ ಆಕ್ರೋಶ (Malpe: A case of beating a woman – Banjara community’s outrage)

Share: ಮಲ್ಪೆ : ಮಹಿಳೆಗೆ ಥಳಿತ ಪ್ರಕರಣ – ಬಂಜಾರ ಸಮುದಾಯದ ಆಕ್ರೋಶ (Udupi) ಉಡುಪಿ: ಪರಿಶಿಷ್ಟ ಜಾತಿಯ ಬಂಜಾರ ಸಮುದಾಯಕ್ಕೆ ಸೇರಿದ ಮಹಿಳೆಯನ್ನು ಮೀನು ಕದ್ದ ಆರೋಪದಲ್ಲಿ ಸಾರ್ವಜನಿಕವಾಗಿ ಮರಕ್ಕೆ ಕಟ್ಟಿ ಥಳಿಸಿದ್ದನ್ನು ಬಂಜಾರ ಸಮುದಾಯ ತೀವ್ರವಾಗಿ ಖಂಡಿಸಿದೆ. ಈ ಕೃತ್ಯ ಸಮಸ್ತ ನಾಗರಿಕ ಸಮಾಜ ತಲೆ ತಗ್ಗಿಸುವಂಥದ್ದು , ಈ ಕೃತ್ಯವನ್ನು ಖಂಡಿಸುತ್ತೇವೆ ಎಂದು ಹೇಳಿದೆ.  ಮಾಧ್ಯಮದ ಜೊತೆ ಮಾತನಾಡಿದ ಬಂಜಾರ ಸಮುದಾಯದ ಮುಖಂಡ ಗಿರೀಶ್ ಮಾತನಾಡಿ, ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಕೇವಲ ಐದು […]

(Udupi) ಉಡುಪಿ: ಪರಿಶಿಷ್ಟ ಜಾತಿಯ ಬಂಜಾರ ಸಮುದಾಯಕ್ಕೆ ಸೇರಿದ ಮಹಿಳೆಯನ್ನು ಮೀನು ಕದ್ದ ಆರೋಪದಲ್ಲಿ ಸಾರ್ವಜನಿಕವಾಗಿ ಮರಕ್ಕೆ ಕಟ್ಟಿ ಥಳಿಸಿದ್ದನ್ನು ಬಂಜಾರ ಸಮುದಾಯ ತೀವ್ರವಾಗಿ ಖಂಡಿಸಿದೆ. ಈ ಕೃತ್ಯ ಸಮಸ್ತ ನಾಗರಿಕ ಸಮಾಜ ತಲೆ ತಗ್ಗಿಸುವಂಥದ್ದು , ಈ ಕೃತ್ಯವನ್ನು ಖಂಡಿಸುತ್ತೇವೆ ಎಂದು ಹೇಳಿದೆ.

 ಮಾಧ್ಯಮದ ಜೊತೆ ಮಾತನಾಡಿದ ಬಂಜಾರ ಸಮುದಾಯದ ಮುಖಂಡ ಗಿರೀಶ್ ಮಾತನಾಡಿ, ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಕೇವಲ ಐದು ಜನರನ್ನು ಮಾತ್ರ ಬಂಧಿಸಿದ್ದಾರೆ. ಇನ್ನೂ ಸಾಕಷ್ಟು ಜನರು ಈ ಕೃತ್ಯದಲ್ಲಿ ಭಾಗಿಯಾಗಿದ್ದು, ಪೋಲಿಸರು ಕೃತ್ಯದಲ್ಲಿ ಭಾಗಿಯಾದವರನ್ನು ಕೂಡಲೇ ಬಂಧಿಸಿ ಕಾನೂನು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ.

ಕೃತ್ಯವನ್ನು ಸಮರ್ಥಿಸಿದ ಪ್ರಮೋದ್ ಮಧ್ವರಾಜ್ ಅವರು ಕೂಡಲೇ ಕ್ಷಮೆಯಾಚಿಸಬೇಕು. ಮಾಜಿ ಶಾಸಕ ರಘುಪತಿ ಭಟ್ ಅವರ ಹೇಳಿಕೆ ಕಾನೂನು ವಿರೋಧಿಯಾಗಿದ್ದು, ಕೂಡಲೇ ಬೇಷರತ್ ಕ್ಷಮೆಯಾಚಿಸಬೇಕು.

ಸಂತ್ರಸ್ತ ಮಹಿಳೆಗೆ  ‘ಪರಿಶಿಷ್ಟ ಜಾತಿ ಹಾಗೂ ಪಂಗಡ ದೌರ್ಜನ್ಯ ತಡೆ ಕಾಯ್ದೆ 1989 ಅಡಿ ನೀಡಲಾಗುವ ಪರಿಹಾರವನ್ನು ಒದಗಿಸಬೇಕು.

ಇನ್ನು ಮುಂದೆ ಇಂತಹ ಅಮಾನವೀಯ ಕೃತ್ಯ  ನಡೆಯದಂತೆ ಪೊಲೀಸ್ ಇಲಾಖೆ ಕ್ರಮ ವಹಿಸಬೇಕು. ಮೀನುಗಾರಿಕಾ ವೃತ್ತಿಯಲ್ಲಿ ತೊಡಗಿರುವ ಹೊರ ಊರಿನ ಪರಿಶಿಷ್ಟರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಈ ಸಂದರ್ಭ ಅಧ್ಯಕ್ಷ ಗಿರೀಶ್ ಡಿ ಆರ್ ರಾಜ್ಯ ಬಂಜಾರ ಯುವಕ ಮತ್ತು ವಿದ್ಯಾರ್ಥಿ ಸಂಘ ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.