• Home  
  • ಮಲ್ಪೆ: ಯಾರಿಗೂ ಶಿಕ್ಷೆ ಆಗೋದು ಬೇಡ, ಅವರ ಪಾಡಿಗೆ ಅವರು ನಮ್ಮ ಪಾಡಿಗೆ ನಾವು ಇರುತ್ತೇವೆ : ಥಳಿತಕ್ಕೊಳಗಾದ ಸಂತ್ರಸ್ತೆ ಹೇಳಿಕೆ (Malpe: No one should be punished, they will be there for them, we will be there for us: Statement of the victim who was beaten up)
- ಅಪರಾಧ

ಮಲ್ಪೆ: ಯಾರಿಗೂ ಶಿಕ್ಷೆ ಆಗೋದು ಬೇಡ, ಅವರ ಪಾಡಿಗೆ ಅವರು ನಮ್ಮ ಪಾಡಿಗೆ ನಾವು ಇರುತ್ತೇವೆ : ಥಳಿತಕ್ಕೊಳಗಾದ ಸಂತ್ರಸ್ತೆ ಹೇಳಿಕೆ (Malpe: No one should be punished, they will be there for them, we will be there for us: Statement of the victim who was beaten up)

Share: ಮಲ್ಪೆ: ಯಾರಿಗೂ ಶಿಕ್ಷೆ ಆಗೋದು ಬೇಡ, ಅವರ ಪಾಡಿಗೆ ಅವರು ನಮ್ಮ ಪಾಡಿಗೆ ನಾವು ಇರುತ್ತೇವೆ : ಥಳಿತಕ್ಕೊಳಗಾದ ಸಂತ್ರಸ್ತೆ ಹೇಳಿಕೆ ಮಲ್ಪೆ: ಮಲ್ಪೆಯಲ್ಲಿ ಮೀನು ಕದ್ದ ಆರೋಪದಲ್ಲಿ ಹಲ್ಲೆಗೆ ಒಳಗಾಗಿದ್ದ ಸಂತ್ರಸ್ತೆ ಇದೇ ಮೊದಲ ಬಾರಿಗೆ ಮಾದ್ಯಮಕ್ಕೆ ಹೇಳಿಕೆ ನೀಡಿದ್ದಾರೆ. “ನಾನು ಸ್ವಲ್ಪ ಮೀನು ತೆಗೆದಿದ್ದೆ. ಅದಕ್ಕೆ ಅವರು ಹೊಡೆದರು” ನನಗೆ ಅವರ ಮೇಲೆ ಏನೂ ದ್ವೇಷ ಇಲ್ಲ. ಅವರಿಗೆ ನನ್ನ ಮೇಲೆ ದ್ವೇಷ ಇಲ್ಲ. ಅವರೆಲ್ಲ ಪರಿಚಿತರೇ   ಎಂದು ಪ್ರತಿಕ್ರಿಯೆ ನೀಡಿದ್ದಾರೆ.  ನಾನು […]

ಮಲ್ಪೆ: ಮಲ್ಪೆಯಲ್ಲಿ ಮೀನು ಕದ್ದ ಆರೋಪದಲ್ಲಿ ಹಲ್ಲೆಗೆ ಒಳಗಾಗಿದ್ದ ಸಂತ್ರಸ್ತೆ ಇದೇ ಮೊದಲ ಬಾರಿಗೆ ಮಾದ್ಯಮಕ್ಕೆ ಹೇಳಿಕೆ ನೀಡಿದ್ದಾರೆ.

“ನಾನು ಸ್ವಲ್ಪ ಮೀನು ತೆಗೆದಿದ್ದೆ. ಅದಕ್ಕೆ ಅವರು ಹೊಡೆದರು” ನನಗೆ ಅವರ ಮೇಲೆ ಏನೂ ದ್ವೇಷ ಇಲ್ಲ. ಅವರಿಗೆ ನನ್ನ ಮೇಲೆ ದ್ವೇಷ ಇಲ್ಲ. ಅವರೆಲ್ಲ ಪರಿಚಿತರೇ   ಎಂದು ಪ್ರತಿಕ್ರಿಯೆ ನೀಡಿದ್ದಾರೆ.

 ನಾನು ಮಲ್ಪೆಯಲ್ಲಿ ಆರೇಳು ವರ್ಷದಿಂದ ಕೆಲಸ ಮಾಡುತ್ತಿದ್ದೇನೆ. ಯಾರಿಗೆ ಏನೂ ಮಾಡೋದು ಬೇಡ. ಅವರ ಪಾಡಿಗೆ ಅವರು, ನಮ್ಮ ಪಾಡಿಗೆ ನಾವು ಇರುತ್ತೇವೆ.

ಈ ಘಟನೆಯಾದ ಮೇಲೆ ನಾನು ಬಂದರಿಗೆ ಹೋಗಿಲ್ಲ. ಮೊನ್ನೆಯ ಘಟನೆ ಬಗ್ಗೆ ನನಗೆ ಏನೂ ಹೇಳಲು ಇಲ್ಲ. ಅವರು ಮೇಲಿಂದಲೇ ಕಂಪ್ಲೇಂಟ್ ಕೊಡಲು ಹೇಳಿದರು. ಕಂಪ್ಲೇಂಟ್ ಕೊಡಲು ಬನ್ನಿ ಎಂದು ಕರೆದುಕೊಂಡು ಹೋದರು. ಅವರು ಹೇಳಿದ್ದಕ್ಕೆ ನಾನು ಸಹಿ ಮಾಡಿದ್ದೇನೆ ಅಷ್ಟೇ ಎಂದು ಹೇಳಿದ್ದಾರೆ.

 ಘಟನೆ ಆದ ದಿನ ರಾತ್ರಿ ರಾಜಿ ಮಾಡಿಕೊಂಡಿದ್ದೆವು. ಕೇಸ್ ಬೇಡ ಎಂದು ಮಾತನಾಡಿ ಬಂದಿದ್ದೆವು. ಆಮೇಲೆ ಮೇಲಿಂದ ಇದು ಆಯ್ತು ಎಂದು ಹೇಳಿದರು. ಯಾರಿಗೂ ಶಿಕ್ಷೆ ಆಗೋದು ಬೇಡ . ಅವರ ಪಾಡಿಗೆ ಅವರು, ನಮ್ಮ ಪಾಡಿಗೆ ನಾವು ದುಡಿದು ತಿನ್ನುತ್ತೇವೆ. ಇನ್ನು ಇಲ್ಲಿ ಕೆಲಸ ಮಾಡೋದು ಕಷ್ಟ. ಊರಿಗೆ ಹೋಗುತ್ತೇನೆ. ಮೀನುಗಾರರು ನನಗೆ ಸಹಾಯ ಮಾಡಿದ್ದಾರೆ. ಈಗ ಇರೋಕೆ ಒಂಥರಾ ಆಗುತ್ತೆ.

ಬೇರೆ ನನಗೇನೂ ತೊಂದರೆ ಕೊಟ್ಟಿಲ್ಲ. ಆವತ್ತು ಏನೋ ನನ್ನ ಗ್ರಹಚಾರ ಸರಿ ಇರಲಿಲ್ಲ ಎಂದು ಸಂತ್ರಸ್ತೆ ಹೇಳಿದ್ದಾರೆ.

ಮಲ್ಪೆ ಕ್ಷಣಿಕ ಸಿಟ್ಟಿನಿಂದ ಮಹಿಳೆಗೆ ಥಳಿತ ಎಂದ ಮೀನುಗಾರ ಸಂಘ ನಾಳೆ ಪ್ರತಿಭಟನೆಗೆ ಕರೆ

   ಮಲ್ಪೆ ಬಂದರಿನಲ್ಲಿ ಮೀನು ಕದ್ದ ಆರೋಪದಲ್ಲಿ ಮೀನು ಹೊರುವ ಮಹಿಳೆಗೆ ಹೊಡೆದ ಘಟನೆ ಉದ್ದೇಶ ಪೂರ್ವಕವಾಗಿರದೆ ಕ್ಷಣಿಕ ಸಿಟ್ಟಿನಿಂದ ಘಟಿಸಿದ್ದು ಎಂದು ಮಲ್ಪೆ ಮೀನುಗಾರರ ಸಂಘ ಸ್ಪಷ್ಟಪಡಿಸಿದೆ.

 ನಾವು ಈ ಘಟನೆಯನ್ನು ಸಮರ್ಥಿಸಿಕೊಳ್ಳುತ್ತಿಲ್ಲ ಎಂದಿರುವ ಸಂಘದ ಅಧ್ಯಕ್ಷ ದಯಾನಂದ ಸುವರ್ಣ, ಪ್ರತಿ ದಿನ ಸಾವಿರಾರು ಕುಟುಂಬಗಳು ಜಾತಿ, ಮತ, ಪಂಗಡ, ಭೇದವಿಲ್ಲದೆ ಹೊರ ರಾಜ್ಯ, ಜಿಲ್ಲೆಯ ಜನರು ಮೀನುಗಾರಿಕೆಯಲ್ಲಿ ದುಡಿದು ಜೀವನ ಸಾಗಿಸುತ್ತಿವೆ. ಆದರೆ ಸ್ಥಳೀಯ ನಮ್ಮ ಮೀನುಗಾರರ ಸಂಘಟನೆಗಳು ಸೌಹಾರ್ದಯುತವಾಗಿ ನ್ಯಾಯ ಕೊಡುವಲ್ಲಿ ಬದ್ಧ  ಎಂದು ತಿಳಿಸಿದ್ದಾರೆ.

 ಘಟನೆ ಗಮನಕ್ಕೆ ಬಂದ ಕೂಡಲೇ ಮಲ್ಪೆಯ ಠಾಣಾಧಿಕಾರಿಯ ಗಮನಕ್ಕೆ ತಂದು ಎರಡೂ ಕಡೆಯವರನ್ನು ಮೀನುಗಾರ ಮುಖಂಡರ ಸಮಕ್ಷಮದಲ್ಲಿ ವಿಚಾರಿಸಲಾಗಿದೆ. ಅವರು ತಮ್ಮ ತಪ್ಪನ್ನು ಒಪ್ಪಿಕೊಂಡಿರುತ್ತಾರೆ. ಈ ಬಗ್ಗೆ ಠಾಣಾಧಿಕಾರಿಯವರು 2 ಕಡೆಯವರಿಂದ ತಪ್ಪೊಪ್ಪಿಗೆ ಹಿಂಬರಹವನ್ನು ಬರೆಸಿಕೊಂಡು ಇತ್ಯರ್ಥಗೊಳಿಸಿದ್ದರು ಎಂದಿದ್ದಾರೆ.

ಮೀನುಗಾರರ ಮೇಲೆ ಕಳಂಕ ಬರುವಂತೆ ಬಿಂಬಿಸಿರುವ, ಘಟನೆಯ ಸತ್ಯಾಸತ್ಯತೆಯನ್ನು ಬಯಲಿಗೆಳೆಯುವ ಬಗ್ಗೆ ಮಾರ್ಚ್ 22ರಂದು ಬೆಳಗ್ಗೆ 9 ಕ್ಕೆ ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ಮೀನುಗಾರರು ಸ್ವ ಇಚ್ಛೆಯಿಂದ ಮೀನುಗಾರಿಕೆಯನ್ನು ಸ್ಥಗಿತಗೊಳಿಸಿ ಪ್ರತಿಭಟನೆಯನ್ನು ನಡೆಸುವರು.

 ಈ ವೇಳೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಂಘದವರು ಮನವಿ ಸಲ್ಲಿಸುವರು ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.

1 Comment

  1. Anwar ali

    21 March 2025

    ಈ ಮಾತನ್ನು ಹೇಳಲು ಯಾರೋ ಒತ್ತಡ ಹೇರಿರಬಹುದು.

Leave a comment

Your email address will not be published. Required fields are marked *

eMedia Kannada  @2025. All Rights Reserved.